ಕರಾವಳಿಯಲ್ಲಿ ಏನೇನ್ ಆಯ್ತು..! ಟಾಪ್ ನ್ಯೂಸ್
* ಉಡುಪಿ: ಮದ್ಯ ಸೇವಿಸಿ ಬಸ್ ಚಾಲನೆ: ಕೇಸು ದಾಖಲು
* ಮುಲ್ಕಿ: ಕೊರಗ ಸಮುದಾಯದಿಂದ ಅಹೋರಾತ್ರಿ ಪ್ರತಿಭಟನೆ!!
* ಕುಂದಾಪುರ:ಸಾರ್ವಜನಿಕ ಶಾಂತಿಭಂಗ, ವ್ಯಕ್ತಿ ಅರೆಸ್ಟ್!
* ಕುಂದಾಪುರ: ಬಾರ್ನಲ್ಲಿ ಏಕಾಏಕಿ ಹಲ್ಲೆ, ಪ್ರಕರಣ ದಾಖಲು!
* ಮರಳು ಅಕ್ರಮ ಸಾಗಾಟ: ಟಿಪ್ಪರ್ ವಶ
NAMMUR EXPRESS NEWS
ಮುಲ್ಕಿ: ನಮಗೆ ಬದುಕಲು ಯೋಗ್ಯವಾದ ಭೂಮಿಯ
ಹಕ್ಕುಪತ್ರ ಕೊಡಿ ಎಂದು ಸಹಕಾರವನ್ನು ಆಗ್ರಹಿಸಿ ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಹಾಗೂ ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಮುಲ್ಕಿ ತಾಲೂಕು ಕಚೇರಿಯ ಎದುರು ಕೊರಗ ಸಮುದಾಯದ ಮುಖಂಡರು ಅಹೋರಾತ್ರಿ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರಿದಿದೆ.
ತಮಗೆ ಕೃಷಿ ಭೂಮಿ ಕೊಡಿಸುವಂತೆ ಆಗ್ರಹಿಸಿ 30ಕ್ಕೂ ಕೊರಗ ಕುಟುಂಬಗಳು 20 ವರ್ಷಗಳಿಂದ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿದ್ದೇವೆ. ಕೊಲ್ಲೂರು ಪದವಿನಲ್ಲಿ ಯಾವುದಕ್ಕೂ ಪ್ರಯೋಜನವಿಲ್ಲದ ಜಾಗ ನೀಡಲಾಗಿದೆ ಎಳತ್ತೂರು ಗ್ರಾಮದಲ್ಲಿ ಏಳು ಎಕರೆ ಜಾಗ ಗುರುತಿಸಿದ್ದು, ಈ ಜಾಗ ನೀಡುವಂತೆ ಸಮಿತಿ ಆಗ್ರಹಿಸಿದೆ.
ಸಾರ್ವಜನಿಕ ಶಾಂತಿಭಂಗ, ವ್ಯಕ್ತಿ ಅರೆಸ್ಟ್!
ಕುಂದಾಪುರ: ಕುಂದಾಪುರದ ನಂಜಾರು ಗ್ರಾಮದ ತಾರಿಕಟ್ಟೆ ಹಾಲು ಡೈರಿಯ ಬಳಿ ಪರಸ್ಪರ ಗಲಾಟೆ ಮಾಡಿಕೊಂಡು ಸಾರ್ವಜನಿಕ ಶಾಂತಿಭಂಗ ಅಂಟು ಮಾಡಿದ ಆರೋಪದಡಿ ಪ್ರಶಾಂತ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಖೇಶ್ ತಾರಿಕಟ್ಟೆ, ಮಂದಾರ ತಾರಿಕಟ್ಟೆ ಮನು ಅಲ್ಪಾಡಿ, ಭರತ್ ಬೆಳ್ಳಿ, ಹರೀಶ್, ನಾಗರಾಜ್, ನಂತೋಷ್ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್ನಲ್ಲಿ ಏಕಾಏಕಿ ಹಲ್ಲೆ, ಪ್ರಕರಣ ದಾಖಲು!
ಕುಂದಾಪುರ: ಕುಂದಾಪುರದ ಅಂಪಾರು ಗ್ರಾಮದ ನಾಗಶ್ರೀ ಬಾರ್ ನಲ್ಲಿ ಹಲ್ಲೆ ಪ್ರಕರಣ ನಡೆದಿದೆ. ಅಜಯ್ ಎಂಬವರು ಬಾರ್ನಲ್ಲಿ ಕುಳಿತಿದ್ದ ಸಂದರ್ಭ ಪರಿಚಯದ ಆಭಿ ಎಂಬಾತ ಆಗಮಿಸಿ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾನೆ. ಪ್ರಶ್ನಿಸಿದಾಗ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಕ್ಯಾಶ್ ಕೌಂಟರ್ನಲ್ಲಿದ್ದ ಅವರ ಅಣ್ಣ ಸುಜಯ್ ಎಂಬವರು ಹಲ್ಲೆ ತಡೆಯಲು ಯತ್ನಿಸಿದಾಗ ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಹರೀಶ್, ಪ್ರಜ್ವಲ್, ಸ್ವರಾಜ್, ಇನ್ನೊಬ್ಬ ವ್ಯಕ್ತಿ ಹಲ್ಲೆಗೆ ಸಹಕರಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಅಜಯ್ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ಅಕ್ರಮ ಸಾಗಾಟ: ಟಿಪ್ಪರ್ ವಶ!
ಕುಂದಾಪುರ: ಕುಂದಾಪುರದ ಬೀಜಾಡಿ ಮೀನುಗಾರಿಕಾ ರಸ್ತೆಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ನ್ನು ಹೆಡ್ ಕಾನ್ ಸ್ಟೇಬಲ್ ರಾಘವೇಂದ್ರ ಬಿ.ಹಾಗೂ ಕಾನ್ಸ್ಟೆಬಲ್ ಮೌನೇಶ್ ವಶಕ್ಕೆ ತೆಗೆದುಕೊಂಡಿದ್ದಾರೆ.
ಯಾವುದೇ ಪರವಾನಗಿ ಹೊಂದಿರದೆ ಅರ್ಧ ಯೂನಿಟ್ ಮರಳು ಸಾಗಾಟ ಮಾಡಲಾಗುತ್ತಿದ್ದು, ಮರಳನ್ನು ಗಿಳಿಯಾರು ಗ್ರಾಮದ ತೋಡಿನಿಂದ ಕದ್ದು ಸಾಗಾಟ ಮಾಡುತ್ತಿದ್ದ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಟಿಪ್ಪರ್ ಮಾಲೀಕ ಗೌತಮ್ ಹಾಗೂ ಚಾಲಕ ಪುರುಷೋತ್ತಮ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಸೇವಿಸಿ ಬಸ್ ಚಾಲನೆ: ಕೇಸು ದಾಖಲು
ಉಡುಪಿ: ಮದ್ಯ ಸೇವನೆ ಮಾಡಿ ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಖಾಸಗಿ ಬಸ್ ಚಾಲಕನ ವಿರುದ್ಧ ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಠಾಣೆಯ ಉಪನಿರೀಕ್ಷಕ ಸುದರ್ಶನ ದೊಡ್ಡಮನಿ ಅವರು ಗುರುವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಖಾಸಗಿ ಬಸ್ ಚಾಲಕ ಪ್ರಿನ್ಸ್ ಬೆನ್ನಿ ಎಂಬಾತ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಬಸ್ಸು ಚಲಾಯಿಸಿದ್ದು, ಆತನನ್ನು ತಪಾಸಣೆ ಮಾಡಿದಾಗ ಮದ್ಯ ಸೇವಿಸಿರುವುದು ದೃಢಪಟ್ಟಿತ್ತು ಈ ಹಿನ್ನಲೆಯಲ್ಲಿ ಆತನ ವಿರುದ್ದ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಅಪಘಾತಕ್ಕೆ ಬಲಿ!
ಮಂಗಳೂರು ಕಡೆ ಸಂಚರಿಸುತ್ತಿದ್ದ ಲಾರಿಗೆ ಡಿವೈಡರ್ ಹಾರಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಜಾಸೀಮ್ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮಂಗಳೂರು ನಗರದ ಕುಂಟಿಕಾನ ರಾಷ್ಟ್ರೀಯ ಹೆದ್ದಾರಿ ಮೇಲ್ವೇತುವೆ ಮೇಲೆ ಶುಕ್ರವಾರ ಸಂಜೆ ನಡೆದಿದೆ.ಮೃತ ಯುವಕನನ್ನು ಯೇನೆಪೋಯ ಕಾಲೇಜು ವಿದ್ಯಾರ್ಥಿ, ಮೇಲ್ಕಾರ್ಮೀಪದ ರೇಂಗೇಲ್ ನಿವಾಸಿ ಮೊಹಮ್ಮದ್ ಜಾಸೀಮ್ (18) ಎಂದು ಗುರುತಿಸಲಾಗಿದೆ. ಸಹೀರ್ಸುಲೇಮಾನ್ (20) ಗಂಭೀರ ಗಾಯಗೊಂಡಿದ್ದಾನೆ.
ಮುನಿಯಾಲ: ಕಾರು ಅಪಘಾತ
ಮುನಿಯಾಲಿನಲ್ಲಿ ಶನಿವಾರ ಮುಂಜಾನೆ ಕಾರು ಅಪಘಾತ ನಡೆದಿದೆ.
ಗದಗದಿಂದ ಪುತ್ತೂರಿಗೆ ಪ್ರಯಾಣ ಮಾಡುತ್ತಿದ್ದ ಮಾರುತಿ ವ್ಯಾಗನರ್ ಕಾರ್ ಒಂದು ರಸ್ತೆಯ ಬದಿಯ ಮಣ್ಣಿನ ಜಿಡ್ಡೆಗೆ ಹೊಡೆದು ಈ ಅಪಘಾತ ಸಂಭವಿಸಿದೆ.ಮುನಿಯಾಲಿನಲ್ಲಿ ಇಂದು ಮುಂಜಾನೆ ಕಾರು ಅಪಘಾತ ನಡೆದಿದೆ. ಗದಗದಿಂದ ಪುತ್ತೂರಿಗೆ ಪ್ರಯಾಣ ಮಾಡುತ್ತಿದ್ದ ಮಾರುತಿ ವ್ಯಾಗನರ್ ಕಾರ್ ಒಂದು ರಸ್ತೆಯ ಬದಿಯ ಮಣ್ಣಿನ ಜಿಡ್ಡೆಗೆ ಹೊಡೆದು ಈ ಅಪಘಾತ ಸಂಭವಿಸಿದೆ. ಅದರಲ್ಲಿ ಪ್ರಯಾಣ ಮಾಡುತಿದ್ದ ಇಬ್ಬರು ಪ್ರಾಣಪಾಯದಿಂದ ಪಾರಾಗಿ ಕಾರು ಜಖಂ ಗೊಂಡಿದೆ