ಕರಾವಳಿ ನವರಾತ್ರಿ ಪ್ರಯುಕ್ತ ದೇವಿಯ ವಿಶೇಷ ಅಲಂಕಾರ ಹೇಗಿದೆ?
* ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಲಂಕಾರ !
* ಪುತ್ತೂರು ಶ್ರೀ ಮಹಾಲಕ್ಷ್ಮಿ ದೇವಿಯ ಅಲಂಕಾರ!
* ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ!
NAMMUR EXPRESS NEWS
ನವರಾತ್ರಿಯ ಅಂಗವಾಗಿ ಕರಾವಳಿಯ ಎಲ್ಲಾ ಭಾಗದ ದೇವಾಲಯಗಳಲ್ಲೂ ಪೂಜೆ,ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯುತ್ತಿದೆ. ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೇವಿಗೆ ಅಲಂಕಾರ, ಅನ್ನಸಂತರ್ಪಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿದೆ.
ಕರಾವಳಿಯ ವಿವಿಧ ದೇವಿ ಅಲಂಕಾರ ಹೇಗಿದೆ?
ನವರಾತ್ರಿ ಪ್ರಯುಕ್ತ ಅಲಂಕಾರದಿಂದ ಕಂಗೊಳಿಸುತ್ತಿರುವ ದೇವಿಯ ದಿವ್ಯ ದರ್ಶನಕ್ಕಾಗಿ ಹತ್ತು ಹಲವು ತಾಣಗಳಿಂದ ಜನರು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದೇವಿಯ ಅಲಂಕಾರ, ಪೂಜೆ ವಿಜೃಂಭಣೆಯಿಂದ ನಡೆಯುತ್ತಿದೆ.
ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಲಂಕಾರ !
ಕಟೀಲ್ ಅಥವಾ ಕಟೀಲು ಕರ್ನಾಟಕದ ಪ್ರಸಿದ್ಧ ದೇವಾಲಯ ಪಟ್ಟಣವಾಗಿದೆ.ಇದು ಮಂಗಳೂರಿನಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿರುವ ದೇವಾಲಯಗಳಲ್ಲಿ ಒಂದಾಗಿದೆ. ಪವಿತ್ರ ನಂದಿನಿ ನದಿಯ ಮಧ್ಯದಲ್ಲಿ ಐತಿಹಾಸಿಕ ದೃಶ್ಯಾವಳಿಗಳು ಮತ್ತು ಆಕರ್ಷಣೀಯ ಹಚ್ಚ ಹಸಿರಿನ ಮಧ್ಯೆ ಇರುವ ಪವಿತ್ರ ದೇವಾಲಯ ಇದಾಗಿದ್ದು, ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ನವರಾತ್ರಿ ಪ್ರಯುಕ್ತ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಪುತ್ತೂರು ಶ್ರೀ ಮಹಾಲಕ್ಷ್ಮಿ ದೇವಿಯ ಅಲಂಕಾರ!
ಪುತ್ತೂರು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮಂಗಳೂರಿನಿಂದ 52ಕಿ.ಮೀ ದೂರದಲ್ಲಿರುವ ದೇವಾಲಯವಾಗಿದೆ.
ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ದೇವಿಯ ಅಲಂಕಾರ ಭರ್ಜರಿಯಾಗಿ ನಡೆಯುತ್ತಿದೆ. ಭಕ್ತಾದಿಗಳು ದೇವಿಯ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ!
ಉಡುಪಿಯಿಂದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 26.4ಕಿ.ಮೀ ದೂರದಲ್ಲಿದೆ.
ಶ್ರೀದೇವಿಯು ದುರ್ಗಾಪರಮೇಶ್ವರಿ ಎಂಬ ಹೆಸರಿನಿಂದ ನೆಲೆಸಿ ತನ್ನನ್ನು ಭಕ್ತಿಯಿಂದ ಆರಾಧಿಸುವವರ ಸಕಲದುರಿತಗಳನ್ನು ನಿವಾರಿಸುತ್ತಾಳೆ ಎಂಬುವುದು ಭಕ್ತರ ನಂಬಿಕೆ.
ಅದೇ ರೀತಿ ನವರಾತ್ರಿಯ ಪ್ರಯುಕ್ತ ಅಮ್ಮನವರಿಗೆ ವಿಶೇಷ ಪೂಜೆ ಅಲಂಕಾರ ಭರ್ಜರಿಯಾಗಿ ನಡೆಯುತ್ತದೆ.
ಹತ್ತು ಹಲವು ಭಕ್ತಾದಿಗಳು ವಿವಿದಡೆಯಿಂದ ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ.