ಕ್ರಿಯೇಟಿವ್ ಪುಸ್ತಕ ಮನೆಯಿಂದ 15 ಲೇಖಕರ ಪುಸ್ತಕ ಲೋಕಾರ್ಪಣೆ
– ಜು.1ಕ್ಕೆ ಬಿಡುಗಡೆ: ಸಾಹಿತ್ಯ ಕ್ಷೇತ್ರದಲ್ಲಿ ಮತ್ತೊಂದು ಹೊಸಹೆಜ್ಜೆ
– ಖ್ಯಾತ ಬರಹಗಾರ ಜೋಗಿ ಸೇರಿ ಅನೇಕ ಗಣ್ಯರ ಹಾಜರ್
– ರಾಜ್ಯದ ಅತೀ ವೇಗವಾಗಿ ಬೆಳೆಯುತ್ತಿರುವ ಪ್ರಕಾಶನ ಸಂಸ್ಥೆ
NAMMUR EXPRESS NEWS
ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳದ ಸಾಹಿತ್ಯಾಸಕ್ತರಿಗೆ, ಸಾಹಿತ್ಯದ ಅಭಿರುಚಿಯುಳ್ಳವರಿಗೆ ಉತ್ತಮ ಸೇವೆಯನ್ನು ಒದಗಿಸುತ್ತ ಬರುತ್ತಿದೆ. ಇದೀಗ ಸಾಹಿತ್ಯ ಕ್ಷೇತ್ರದಲ್ಲಿ ಮತ್ತೊಂದು ಹೊಸಹೆಜ್ಜೆ ಎಂಬಂತೆ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ನಾಡಿನ ಪ್ರಖ್ಯಾತ ಬರಹಗಾರರ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ನಲ್ಲಿ ಜುಲೈ 1ರ ಸೋಮವಾರ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಖ್ಯಾತ ಬರಹಗಾರ ಗಿರೀಶ್ ರಾವ್ ಹತ್ವಾರ್ (ಜೋಗಿ) ಭಾಗಿಯಾಗಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಶಾಸಕ ಸುನಿಲ್ ಕುಮಾರ್, ಕ.ಸಾ.ಪ. ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಆಹ್ವಾನಿಸಲಾಗಿದೆ.
ರಾಜ್ಯದ ಅತೀ ವೇಗವಾಗಿ ಬೆಳೆಯುತ್ತಿರುವ ಪ್ರಕಾಶನ ಸಂಸ್ಥೆ
ಕ್ರಿಯೇಟಿವ್ ಪುಸ್ತಕಮನೆ ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪುಸ್ತಕ ಮಾರಾಟ ಮತ್ತು ಪ್ರಕಾಶನ ಸಂಸ್ಥೆಯಾಗಿದೆ. ಈಗಾಗಲೇ ಉಡುಪಿ ಜಿಲ್ಲೆಯ ಕಾರ್ಕಳದಿಂದ ಶುರುವಾದ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಮೂಡುಬಿದಿರೆಯಲ್ಲಿ ಎರಡನೇ ಮಳಿಗೆಯನ್ನು ಪುಸ್ತಕಮನೆ ಸಂಸ್ಥೆ ಶುರು ಮಾಡಿದೆ. ಈಗಾಗಲೇ ಸಾವಿರಾರು ಪುಸ್ತಕಗಳು ಮಾರಾಟವಾಗುತ್ತಿವೆ. Pustkamane.com ಆನ್ಲೈನ್ ಮೂಲಕವೂ ಮಾರಾಟವಾಗುತ್ತಿದೆ. ಈಗಾಗಲೇ ಹಲವು ಲೇಖಕರು, ಬರಹಗಾರರ ಪುಸ್ತಕ ಪ್ರಕಟ ಮತ್ತು ಮಾರಾಟ ಮಾಡಿರುವ ಸಂಸ್ಥೆ ಇದೀಗ ರಾಜ್ಯ ಮಟ್ಟದ ಖ್ಯಾತ ಹಾಗೂ ಹೊಸ ತಲೆಮಾರಿನ 15 ಬರಹಗಾರರ ಪುಸ್ತಕ ಪ್ರಕಟ ಮಾಡಿ ಬಿಡುಗಡೆ ಮಾಡುತ್ತಿದೆ.
ಮೊಬೈಲ್ ಬಿಡಿ ಪುಸ್ತಕ ಹಿಡಿ ಯೋಜನೆ ಯಶಸ್ವಿ: ಸರ್ವರಿಗೂ ಧನ್ಯವಾದ
ಕ್ರಿಯೇಟಿವ್ ಪುಸ್ತಕ ಮನೆಯ ಕಾರ್ಕಳದ ಎಲ್ಲಾ ಸಾಹಿತ್ಯ ಆಸಕ್ತಿದಾರರಿಗೆ ಅನುಕೂಲವಾಗುವಂತೆ ಸಾಹಿತ್ಯ ಅಭಿರುಚಿ ಉಳ್ಳವರಿಗೆ ಎಲ್ಲಾ ರೀತಿಯ ಪುಸ್ತಕಗಳನ್ನ ತಲುಪಿಸುವಂತಹ ಕೆಲಸದಲ್ಲಿ ಒಳ್ಳೆಯ ಸಾಮಾಜಿಕವಾದಂತಹ ಕೆಲಸದಲ್ಲಿ ತೊಡಗಿದೆ. ವಿಶೇಷವಾಗಿ ಪುಸ್ತಕ ಪೋಷಕ ಯೋಜನೆಗಳ ಮುಖಾಂತರ ಮೊಬೈಲ್ ಬಿಡಿ ಪುಸ್ತಕ ಹಿಡಿ ಎನ್ನುವ ಯೋಜನೆಯ ಮೂಲಕ ಹಳ್ಳಿ ಭಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಲವಾರು ಸಾಹಿತ್ಯ ಪುಸ್ತಕ ಕಲ್ಪಿಸುವಂತಹ ವ್ಯವಸ್ಥೆ ಕೂಡ ಆಗುತ್ತಿದೆ. ಅದರಂತೆ ಹೊಸ ಸಾಹಿತ್ಯ ಉದಯೋನ್ಮುಖ ಬರಹಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಹಲವಾರು ಪುಸ್ತಕಗಳನ್ನ ಪ್ರಕಟ ಮಾಡಲು ಹೊಸ ಹೆಜ್ಜೆಯನ್ನು ಇಡುತ್ತಿದೆ. 15 ಪುಸ್ತಕಗಳನ್ನ ನಾಡಿನ ಪ್ರಸಿದ್ಧ ಬರಹಗಾರರಿಂದ ಹೊಸ ಬರಹಗಾರಗಳಿಂದ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಪ್ರಕಟಣೆ ಮಾಡುತ್ತಿದ್ದೇವೆ.
ಜುಲೈ 1ರಂದು ಕಾರ್ಕಳದ ಕ್ರಿಯೇಟಿವ್ ಕಾಲೇಜು ಕ್ಯಾಂಪಸ್ ನಲ್ಲಿ ನಾಡಿನ ಪ್ರಖ್ಯಾತ ಬರಗಾರರು ಹಾಗೂ ಪತ್ರಕರ್ತರಾಗಿರುವಂತಹ ಗಿರೀಶ್ ರಾವ್ ಹತ್ವಾರ್ ಜೋಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಕ್ಷೇತ್ರದ ಶಾಸಕರಾಗಿರುವಂತಹ ಸುನಿಲ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಹಲವಾರು ಪ್ರಸಿದ್ಧ ಬರಹಗಾರರು ಸಾಹಿತ್ಯಸಕ್ತಿಯುಳ್ಳವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತಾವುಗಳು ಕೂಡ ಈ ಕಾರ್ಯಕ್ರಮಕ್ಕೆ ಬಂದು ಸಾಹಿತ್ಯದ ಈ ಹೊಸ ಹೆಜ್ಜೆಯನ್ನ ಸಂಭ್ರಮಿಸಬೇಕು ಹಾಗೂ ಪುರಸ್ಕರಿಸಬೇಕು. ಮುಂದಿನ ಹಂತದಲ್ಲಿ ಕೂಡ ಒಳ್ಳೆಯ ಬರಹಗಾರರಿಗೂ ವೇದಿಕೆ ಸಿದ್ಧವಾಗುತ್ತಿದೆ. ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕ್ರಿಯೇಟಿವ್ ಸಂಸ್ಥೆ ಹಾಗೂ ಪುಸ್ತಕ ಮನೆ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ಗಣಪತಿ ಕೆ.ಎಸ್, ಡಾ.ಗಣನಾಥ ಶೆಟ್ಟಿ, ಗಣಪತಿ ಭಟ್, ಅಮೃತ್ ರೈ, ಆದರ್ಶ ಎಂ.ಕೆ, ವಿಮಲ್ ರಾಜ್ ಜಿ ಸೇರಿದಂತೆ ಆಡಳಿತ ಮಂಡಳಿ ಈ ಮೂಲಕ ಸ್ವಾಗತಿಸಿದೆ.