ಕಾರ್ಕಳ ಶಂಕರ ಪ್ರತಿಷ್ಠಾನದ ಸಂಭ್ರಮಾಚರಣೆ!!
* ಶೃಂಗೇರಿಯತ್ತ ಪಯಣ!!
* ದೇವರ ದರ್ಶನ ಹಾಗೂ ಗುರುಗಳ ಭೇಟಿ ಕಾರ್ಯಕ್ರಮ!!
NAMMUR EXPRESS NEWS
ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳ ಶಂಕರ ಪ್ರತಿಷ್ಠಾನದ ಸೆ. 1ರಂದು ಸಂಭ್ರಮಾಚರಣೆ ಪ್ರಯುಕ್ತ ಶೃಂಗೇರಿ ಪ್ರವಾಸ ಕಾರ್ಯಕ್ರಮ ನಡೆಯಿತು.
ಅನಂತಶಯನ ದೇವಸ್ಥಾನದ ದಲ್ಲಿ ದೇವರ ದರ್ಶನ ಪಡೆಯಲು ಶೃಂಗೇರಿಯತ್ತ 58 ಜನ ಸದಸ್ಯರು ಗುರುಗಳ ಭೇಟಿಗೆ, ಶೃಂಗೇರಿ ಜಗದ್ಗುರುಗಳಿಗೆ ಮತ್ತು ಶಾರದಾಂಬೆಗೆ ಜಯಕಾರ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆಯನ್ನು ನಡೆಸಿದರು.
ಬಜೆಗೋಳಿಯ ಉಮೇಶ್ ರಾವ್ ದಂಪತಿಗಳ ಮನೆಯಲ್ಲಿ ಸದಸ್ಯರಿಗೆ ಉಪಹಾರ ವ್ಯವಸ್ಥೆಯಿದ್ದು, ಉಪಹಾರ ತಯಾರಕರು ನಾಗಭೂಷಣ ಹೆಬ್ಬಾರ್ ಮತ್ತು ಬಳಗದವರಾಗಿದ್ದರು.
ಉಡುಪಿಯ ವಿದ್ಯಾ ಅವರ ಮಾರ್ಗದರ್ಶನದಲ್ಲಿ ನಡೆದ ಭಜನೆ ಂದು ಇತಿಹಾವನ್ನು ಸೃಷ್ಟಿಸಿತು. ಭಗವದ್ ಭಕ್ತರು ಮೆರೆದ ಸ್ಥಾನಿಕ ಬ್ರಾಹ್ಮಣ ಸಮಾಜ ಸಂಭ್ರಮಿಸುತ್ತಿದ್ದು, ಗುರುಗಳ ಪಾದ ಪೂಜೆ ಯನ್ನು ಭಕ್ತಿಯಿಂದ ನಡೆಸಲಾಯಿತು. ಶೃಂಗೇರಿ ಜಗದ್ಗುರುಗಳ ಪ್ರತಿನಿಧಿಗಳು, ಮಂಗಳೂರಿನ ಸತ್ಯಶಂಕರ ಬೊಲ್ಲಾವರು ಸದಸ್ಯರನ್ನು ಬರಮಾಡಿಕೊಂಡಿದ್ದು, ಗುರು ಬಿಕ್ಷೆ ನಂತರ ಗುರುಗಳಿಂದ ಫಲಮಂತ್ರಾಕ್ಷತೆ ಪಡೆದು ಶಾರದಾಂಬೆಯ ಪ್ರಸಾದ ರೂಪವಾಗಿದ್ದ ಸೀರೆಗಳನ್ನು ಪಡೆದರು.
ಮತ್ತೆ ಶೃಂಗೇರಿ ಗುರುಗಳ ಜಯ ಘೋಷ ಕೂಗುತ್ತಾ ಶಂಕರ ಪ್ರತಿಷ್ಠಾನಕ್ಕೆ ಜಯವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ಶೃಂಗೇರಿಯಿಂದ ಕಾರ್ಕಳದ ಕಡೆಗೆ ಹಿಂದಿರುಗಿದರು.
ಅಧ್ಯಕ್ಷರು ಭಾಗವಹಿಸಿದ ಎಲ್ಲರನ್ನು ಕೃತಜ್ಞತಾ ಪೂರ್ವಕವಾಗಿ ವಂದಿಸಿದರು.ಉಪಾಧ್ಯಕ್ಷರು ಭಜನೆ ಹಾಡು ಹಾಗೂ ಅಂತ್ಯಾಕ್ಷರಿಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು,ಎಲ್ಲರನ್ನು ಕೃತಜ್ಞತಾ ಪೂರ್ವಕ ಪ್ರಶಂಶಿಸಿದರು. ಉತ್ತಮ ರೀತಿಯ ಕಾರ್ಯಕ್ರಮ ಏರ್ಪಡಿಸಿದ ಅಧ್ಯಕ್ಷರನ್ನ ಕಾರ್ಯದರ್ಶಿಯನ್ನು ಎಲ್ಲರ ಪರವಾಗಿ ಧನ್ಯವಾದ ಸಲ್ಲಿಸಿದರು.