ಬಿಲ್ಲವ ಸಮಾಜದ ರತ್ನ ಡಿ.ಆರ್.ರಾಜು ನೆನಪು ಮಾತ್ರ!
– ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ
– ಎಲ್ಲಾ ಪಕ್ಷ, ಜನರಿಂದ ಸಂತಾಪ: ಇಂದು ಬೆಳಗ್ಗೆ ಅಂತ್ಯಕ್ರಿಯೆ
NAMMUR EXPRESS NEWS
ಕಾರ್ಕಳ: ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಹಾಗೂ ರಶ್ಮಿ ಕನ್ಸಕ್ಷನ್ಸ್ ಮಾಲೀಕ ಡಿ. ಆರ್. ರಾಜು ಪೂಜಾರಿ (64) ಹೃದಯಾಘಾತಕ್ಕೆ ಒಳಗಾಗಿ ನ.17ರಂದು ರಾತ್ರಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಎಲ್ಲೆಡೆ ಕಂಬನಿ ವ್ಯಕ್ತವಾಗಿದೆ. ಸಮಾಜ ಸೇವೆ, ದಾನ ಧರ್ಮದ ಮೂಲಕ ಅವರು ಇಡೀ ಕರಾವಳಿಯಲ್ಲಿ ಹೆಸರು ಮಾಡಿದ್ದರು.
ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲ್ಲೆಯಲ್ಲಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿದ್ದು ಅಪಾರ ಸ್ನೇಹಿತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನ.17ರಂದು ಬೆಳಿಗ್ಗೆನಿಂದಲೇ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ರಶ್ಮಿ ಚಾರಿಟಬಲ್ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು. ರಾಜಕೀಯ ಕ್ಷೇತ್ರ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿದ್ದ ಅವರ ಸಾಧನೆ ಅಪಾರವಾದುದು. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಬಿಲ್ಲವ ಸಮಾಜಕ್ಕೆ ಸೇವೆ ಅಪಾರ
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜು ಅವರು ರಾಜ್ಯದ ಬಿಲ್ಲವ ನಾಯಕರಲ್ಲಿ ಒಬ್ಬರಾಗಿದ್ದರು. ಮಂಗಳೂರಿನಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು.ಡಿ. ಆರ್. ರಾಜು ಅವರ ಪಾರ್ಥಿವ ಶರೀರವನ್ನು ಭುವನೇಂದ್ರ ಕಾಲೇಜು ಬಳಿ ಇರುವ ಕೃತಿಕಾ ನಿವಾಸಕ್ಕೆ ತರಲಾಗಿದೆ. ಬಿಲ್ಲವ ಸಮಾಜದ ಅಭಿವೃದ್ಧಿಗೆ ಇವರ ಕೊಡುಗೆ ಅಪಾರ.
ಕಾಂಗ್ರೆಸ್ ಪಕ್ಷದ ಸಂತಾಪ
ಕಾಂಗ್ರೆಸ್ ಪಕ್ಷಕ್ಕೆರಾಜು ಅವರ ನಿಧನ ದೊಡ್ಡ ನಷ್ಟವಾಗಿದ್ದು ಡಿ.ಆರ್ ರಾಜು ಅವರ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ರಮೇಶ್ ಕಾಂಚನ್, ಕಾರ್ಕಳ ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿ ಸೇರಿ ಎಲ್ಲಾ ನಾಯಕರು, ಮುಖಂಡರು ಕಂಬನಿ ಮಿಡಿದಿದ್ದಾರೆ. ಶಾಸಕ ಸುನಿಲ್ ಕುಮಾರ್ ಸೇರಿ ಇತರೆ ಎಲ್ಲಾ ಪಕ್ಷದ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಅಂತ್ಯಕ್ರಿಯೆ
ರಾಜು ಅವರ ಅಂತಿಮ ದರ್ಶನ ಅವರ ಕಾರ್ಕಳ ನಿವಾಸದಲ್ಲಿ ನಡೆಯುತ್ತಿದೆ. 11:30 ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.
ಅವರು ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕುಟುಂಬದವರು, ಅಭಿಮಾನಿಗಳನ್ನು ಅಗಲಿದ್ದಾರೆ.
ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಅಗಲಿದ ಸಮಾಜ ಸೇವಕನಿಗೆ ಶ್ರದ್ಧಾಂಜಲಿ ಅರ್ಪಿಸುತ್ತದೆ