ಕಾರ್ಕಳದ ಕ್ವಾರೆಯಲ್ಲಿ ಸ್ಫೋಟ: ಕಾರ್ಮಿಕ ಸಾವು!
– ನಿಟ್ಟೆ ಗುಂಡ್ಯಡ್ಕ ಕಲಿಕಲ್ಲಿನ ಕ್ವಾರೆಯಲ್ಲಿ ಸ್ಪೋಟ
– ಕಾರ್ಕಳದಲ್ಲಿ ಗಾಂಜಾ ಮಾರಾಟ ಜಾಲ: ಅರೆಸ್ಟ್
NAMMUR EXPRESS NEWS
ಕಾರ್ಕಳ: ( Karkala ) ಕಾರ್ಕಳ ತಾಲೂಕು ನಿಟ್ಟೆ ಗುಂಡ್ಯಡ್ಕದ ಕರಿಕಲ್ಲಿನ ಕ್ವಾರೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕಾರ್ಮಿಕನೊಬ್ಬ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಸಾವಿಗೀಡಾದ ಘಟನೆ ಸಂಭವಿಸಿದೆ. ಸಾವಿಗೀಡಾದ ವ್ಯಕ್ತಿಯನ್ನು ಬಾಗಲಕೋಟೆಯ ವೆಂಕಟೇಶ್ (32) ಎಂದು ಗುರುತಿಸಲಾಗಿದೆ. ಕ್ವಾರೆಯಲ್ಲಿ ಬಂಡೆ ಸಿಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದಿಬಂದಿದೆ. ಕ್ವಾರೆಯಲ್ಲಿ ದುಡಿಯುತ್ತಿದ್ದ ಸಂಭವಿಸಿದ ಸ್ಪೋಟದಿಂದ ವೆಂಕಟೇಶ್ ಸ್ಥಳದಲ್ಲಿ ಕುಸಿದು ಬಿದ್ದು ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.
ಕಾರ್ಕಳದಲ್ಲಿ ಗಾಂಜಾ ಮಾರಾಟ ಜಾಲ!
ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟವಾಗುತ್ತಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ವರ್ತಮಾನದ ಮೇರೆಗೆ ಕಾರ್ಕಳ ನಗರ ಠಾಣಾ ಪೊಲೀಸರು ಮಿಯ್ಯಾರು ಗ್ರಾಮದ ಕಾರೋಲ್ಗುಡ್ಡೆ ಪರಿಸರದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಕಲೋಲ್ ಗುಡ್ಡೆಯ ನರೇಂದ್ರ(40), ಪುರಿ ಮಸೀದಿ ಬಳಿಯ ಸಿರಾಜ್(21), ತೆಳ್ಳಾರು ಮೇಲಿನಪಲೆಯ ಅಬ್ದುಲ್ ಆರೀಫ್(26), ಬೈಲೂರು ಬಾಣಾಲು ಜೀವನ್ (25) ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.
ಜು.31ರ ಮಧ್ಯಾಹ್ನ 3:00 ಗಂಟೆಗೆ ಆರೋಪಿಗಳು ಮಿಯ್ಯಾರು ಗ್ರಾಮದ ಕಾರೋಲ್ಗುಡ್ಡೆ 5 ಸೆಂಟ್ಸ್ನಲ್ಲಿರುವ ಕಲ್ಲು ಕೆತ್ತುವ ಸ್ಥಳದ ಬಳಿ ಹಣ ಪಡೆದು ಅಮಲು ಪದಾರ್ಥವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು.
ಘಟನಾ ಸ್ಥಳದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು 1ನೇ ಆರೋಪಿಯ ವಶದಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ 182 ಗ್ರಾಂ ಮಾದಕವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳು, ಗಾಂಜಾ ಮಾರಾಟ ಮಾಡಿದ ನಗದು ಹಣ, ಮೋಟಾರ್ ಸೈಕಲ್, 2ರಿಂದ 4 ನೇ ಅಪಾದಿತರ ವಶದಿಂದ ಪ್ಲಾಸ್ಟಿಕ್ ಚೀಲ ಸಹಿತ ತಲಾ 12 ಗ್ರಾಮ್ ಮಾದಕ ವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳನ್ನು, ತಲಾ ರೂ. 100ನ್ನು ಸ್ವಾಧೀನಪಡಿಸಿ ಅಪಾದಿತರನ್ನು ದಸ್ತಗಿರಿ ಮಾಡಿದ್ದು ಸ್ವಾಧೀನಪಡಿಸಿದ ಗಾಂಜಾದ ಮೌಲ್ಯ ರೂ 10,500 ನಗದು ರೂ 1,800 ಹಾಗೂ ರೂ 50,000ಮೌಲ್ಯದ ಮೋಟಾರ್ ಸೈಕಲನ್ನು
ಸ್ವಾಧೀನಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!
HOW TO APPLY : NEET-UG COUNSELLING 2023