ಮಕ್ಕಳನ್ನು ಸಾಧಕರನ್ನಾಗಿ ಮಾಡುವುದು ಹೇಗೆ?
– ಮಾಳದಲ್ಲಿ ಮಂಗಳೂರು ಸ್ವರೂಪ ಶಿಕ್ಷಣ ಸಂಸ್ಥೆಯ ಚಟುವಟಿಕೆಗಳ ಪರಿಚಯ
– ವಿದ್ಯೆಯ ಮಹತ್ವ ಮತ್ತು ಪರೀಕ್ಷೆ ಪೂರ್ವ ತಯಾರಿ ಶಿಬಿರ
NAMMUR EXPRESS NEWS
ಕಾರ್ಕಳ: ವಿಶೇಷ ಪರಿಶ್ರಮದಿಂದ ಮಕ್ಕಳು ವಿಶೇಷ ಸಾಧನೆಯನ್ನು ಮಾಡಲು ಸಾಧ್ಯ ಎಂದು ಮಂಗಳೂರಿನ ಸ್ವರೂಪ ಶಿಕ್ಷಣ ಸಂಸ್ಥೆಯ ಗೋಪಾಡ್ಕರ್ ಹೇಳಿದರು.
ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವರೂಪ ಶಿಕ್ಷಣ ಸಂಸ್ಥೆಯ ಚಟುವಟಿಕೆಗಳ ಪರಿಚಯ ಕಾರ್ಯಕ್ರಮವನ್ನು ನಡೆಸಿಕೊಟ್ಟು ಅವರು ಮಾತನಾಡಿದರು.
ಶಾಲೆಯಲ್ಲಿ ಮಕ್ಕಳನ್ನು ತರಬೇತಿಗೊಳಿಸುವ ಬಗ್ಗೆ ಅಧ್ಯಾಪಕರಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ, ಸಂಚಾಲಕರಾದ ಸುಧಾಕರ ಡೋಂಗ್ರೆ,ಕೋಶಾಧಿಕಾರಿಯಾದ ರವೀಂದ್ರ ಜೋಶಿ, ಆಡಳಿತ ಮಂಡಳಿಯ ಸದಸ್ಯರಾದ ರಘುಪತಿ ಕಾಮತ್ ಮತ್ತು ವಸಂತಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಮತ್ತು ಶಿಕ್ಷಕ ವೃಂದ ,ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು ಶಿಕ್ಷಕರಾದ ಸುನಿತಾ ಇವರು ನೆರವೇರಿಸಿದರು.
ವಿದ್ಯೆಯ ಮಹತ್ವ ಮತ್ತು ಪರೀಕ್ಷೆ ಪೂರ್ವ ತಯಾರಿ ಶಿಬಿರ
ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಸಮಯದ ಸದ್ಬಳಕೆ ಮಕ್ಕಳಿಗೆ ತುಂಬಾ ಅಗತ್ಯವಿದೆ ಜೊತೆಗೆ ಯೋಗ ಮತ್ತು ವ್ಯಾಯಾಮ ಶಿಕ್ಷಣಕ್ಕೆ ಪೂರಕವಾದ ವಿಷಯ ಎಂದು ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳೂ ದಾನಿಗಳೂ ಆದ ಗಣಪತಿ ಜೋಶಿ ಬೆಂಗಳೂರು ಇವರು ಮಕ್ಕಳಿಗೆ ವಿವರಿಸಿದರು.
ಸೋಮವಾರದಂದು ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ವಿದ್ಯೆಯ ಮಹತ್ವ ಮತ್ತು ಪರೀಕ್ಷೆ ಪೂರ್ವ ತಯಾರಿಯ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಇವರು ಮಾತನಾಡುತ್ತಿದ್ದರು ಮುಖ್ಯೋಪಾಧ್ಯಾಯರಾದ ಶ ಪೂರ್ಣಿಮಾ ಶೆಣೈ , ಶಿಕ್ಷಕ ವೃಂದ ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನುಪಮಾ ಜೋಯ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು
ಪೋಷಣ ಅಭಿಯಾನ ಕಾರ್ಯಕ್ರಮ
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ನಾಲ್ಕನೇ ತರಗತಿಯಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳು ವಿವಿಧ ರೀತಿಯ ಪೋಷಕಾಂಶ ಇರುವ ಆಹಾರಗಳನ್ನು ತಂದು ಪ್ರದರ್ಶನ ಮಾಡಿದರು. ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರು ಸಂಭ್ರಮದಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕೂಡ ಈ ಕಾರ್ಯಕ್ರಮದಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸಿದ್ದರು