ಥೀಮ್ ಪಾರ್ಕಿಗೆ ಅಕ್ರಮ ಪ್ರವೇಶ: ಕೇಸ್!
– ಕಾರ್ಕಳದಲ್ಲಿ 13 ಮಂದಿ ವಿರುದ್ಧ ದೂರು ದಾಖಲು
– ಏನಿದು ಕೇಸ್..? ಯಾರ ವಿರುದ್ಧ ದೂರು..?
NAMMUR EXPRESS NEWS
ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಗೆ ಅಕ್ರಮ ಪ್ರವೇಶ ಆರೋಪದ ಮೇಲೆ 13 ಮಂದಿಯ ಮೇಲೆ ದೂರು ದಾಖಲಾಗಿದೆ. ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಸದ್ಯಾ ಥೀಮ್ ಪಾರ್ಕ್ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘಿಸಿ ಉಮಿಕಲ್ ಬೆಟ್ಟದ ಮೇಲೆ ಹೋಗಿ ಸರ್ಕಾರಿ ಸ್ವತ್ತು ಆಗಿರುವ ಪರಶುರಾಮ ವಿಗ್ರಹಕ್ಕೆ ಹೊದಿಸಿದ ರಕ್ಷಣಾ ಕವಚ ಹರಿದು ಹಾಕಿ, ಕಂಚಿನ ಮೂರ್ತಿಯ ಮೇಲಿದ್ದ ಫಿನಿಶಿಂಗ್ ಲೇಪನವನ್ನು ಹರಿದು ಮೂರ್ತಿಯ ಮೂಲ ಸ್ವರೂಪ ವಿರೂಪಗೊಳಿಸಿ ಹಾನಿ ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಹಿಂದೂ ಧರ್ಮದ ಅನುಯಾಯಿಗಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿ ಧರ್ಮದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಭಕ್ತರ ಭಾವನೆಗಳಿಗೆ ಧಕ್ಕೆಉಂಟು ಮಾಡಿದ್ದಾರೆ ಎಂದು ಏರ್ಲಪಡಿಯ ಸುನಿಲ್ ಹೆಗಡೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ ಪೊಲೀಸರು ಶುಭದ ರಾವ್, ದೀಕ್ಷಿತ್ ಶೆಟ್ಟಿ, ದೀಪಕ್ ಶೆಟ್ಟಿ, ಸುಬಿತ್ ಎನ್ ಆರ್, ವಿವೇಕಾನಂದ, ಯೋಗೀಶ, ಸೂರ್ಯತ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಆಲ್ವಾಜ್, ಕೃಷ್ಣ ಶೆಟ್ಟಿ, ಐವನ್ ಮಿರಂಡ ರಂಗನಪಲ್ಕೆ, ದಿವ್ಯ ನಾಯಕ್ ನೀರೆ, ಹರೀಶ್ ಪೂಜಾರಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.