ಕನ್ನಡ ಪುಸ್ತಕ ಲೋಕದಲ್ಲಿ “ಪುಸ್ತಕ ಮನೆ” ಪಯಣ!
– ಅ.16ರಂದು ಕಾರ್ಕಳದಲ್ಲಿ ಬೃಹತ್ ಪುಸ್ತಕ, ಅಧ್ಯಯನ ಸಾಮಾಗ್ರಿ, ಗಿಫ್ಟ್ ಮಳಿಗೆ ಉದ್ಘಾಟನೆ
– ಪುಸ್ತಕ ಸೇರಿ ಅಧ್ಯಯನ, ಬೃಹತ್ ಶೈಕ್ಷಣಿಕ, ಸಾಹಿತ್ಯ ಪುಸ್ತಕ ಮಳಿಗೆ
NAMMUR EXPRESS NEWS
ಕನ್ನಡ ಪುಸ್ತಕ ಲೋಕದಲ್ಲಿ “ಪುಸ್ತಕ ಮನೆ” ಹೊಸ ಪಯಣ ಶುರು ಮಾಡಲಿದೆ. ರಾಜ್ಯದ ಬೃಹತ್ ಆಫ್ ಲೈನ್, ಆನ್ಲೈನ್ ಪುಸ್ತಕ ಮಳಿಗೆ ಅ.16ರಂದು ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಉದ್ಘಾಟನೆಗೊಳ್ಳಲಿದೆ. ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ಹಾಗೂ ಗಣ್ಯರು, ಪುಸ್ತಕ ಮನೆ ಆಡಳಿತ ಮಂಡಳಿ ಸದಸ್ಯರು ಉದ್ಘಾಟನೆ ಮಾಡಲಿದ್ದಾರೆ. ಪುಸ್ತಕ ಸೇರಿ ಅಧ್ಯಯನ, ಬೃಹತ್ ಶೈಕ್ಷಣಿಕ, ಸಾಹಿತ್ಯ, ಗಿಫ್ಟ್, ಪುಸ್ತಕ ಮಳಿಗೆ ಇದಾಗಿದೆ. ಇನ್ಮುಂದೆ ಒಂದೇ ಸೂರಿನಲ್ಲಿ ಎಲ್ಲಾ ಪುಸ್ತಕಗಳು ಪುಸ್ತಕ ಮನೆಯಲ್ಲಿ ಲಭ್ಯವಾಗಲಿದ್ದು, ನಿಮ್ಮ ಊರಲ್ಲಿ ಹಾಗೂ ಆನ್ಲೈನ್ ಅಲ್ಲೂ ಸಿಗುತ್ತದೆ.
ಪುಸ್ತಕ ಕ್ಷೇತ್ರದಲ್ಲಿ ದೊಡ್ಡ ಮೈಲುಗಲ್ಲು
ಒಂದೇ ಸೂರಿನಡಿ ಎಲ್ಲಾ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಅಧ್ಯಯನ ಸೇರಿ ಎಲ್ಲಾ ರೀತಿಯ ಪುಸ್ತಕಗಳನ್ನು ಓದುಗರಿಗೆ ಒದಗಿಸುವ ಪುಸ್ತಕ ಮನೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಆನ್ಲೈನ್ ಪುಸ್ತಕ ಕ್ಷೇತ್ರದಲ್ಲಿ ಇದೊಂದು ದೊಡ್ಡ ಮೈಲುಗಲ್ಲಾಗಿದೆ. ನಿಮ್ಮ ನೆಚ್ಚಿನ ಪುಸ್ತಕ, ನಿಮ್ಮ ಮಕ್ಕಳ ಪಠ್ಯ ಪುಸ್ತಕ, ಅಧ್ಯಯನ ಪುಸ್ತಕಗಳು, ಮಕ್ಕಳ ಆಟಿಕೆ, ಗಿಫ್ಟ್, ಸ್ಟೇಷನರಿ, ಅಲಂಕಾರಿಕ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯ. ರಾಜ್ಯ ಮಟ್ಟದಲ್ಲಿ ಈ ಪುಸ್ತಕ ಮನೆ ಇದೀಗ ಓದುಗರ ಗಮನ ಸೆಳೆದಿದ್ದು, ಆಫ್ ಲೈನ್ ಹಾಗೂ ಆನ್ಲೈನ್ ಎರಡು ವಿಭಾಗದಲ್ಲಿ ನೂರಾರು ಬಗೆಯ ಪುಸ್ತಕಗಳನ್ನು ಒದಗಿಸಲಿದೆ. ಅದರಲ್ಲಿಯೂ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕ ಸಂಗ್ರಹ ಇಲ್ಲಿರಲಿದೆ.
ಯಾವ ಯಾವ ಪುಸ್ತಕ ಲಭ್ಯ?
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿದ್ಯಾಭ್ಯಾಸದ ಪುಸ್ತಕ, ಸಾಹಿತ್ಯ ಪುಸ್ತಕ, ಮಕ್ಕಳ ಪುಸ್ತಕ, ಕಥೆ, ಕಾವ್ಯ, ತರಬೇತಿ, ಉದ್ಯಮ, ಬಯೋಗ್ರಫಿ ಸೇರಿ ಎಲ್ಲಾ ರೀತಿಯ ಪುಸ್ತಕಗಳು ಇನ್ಮುಂದೆ “ಪುಸ್ತಕ ಮನೆ” ಮಳಿಗೆ ಮತ್ತು ಪುಸ್ತಕ ಮನೆ ಆನ್ಲೈನ್ ಅಲ್ಲಿ ಸಿಗಲಿದೆ. ವಿದ್ಯಾರ್ಥಿಗಳು, ಸಾಹಿತ್ಯ ಅಭಿಮಾನಿಗಳು, ಓದುಗರು ಪುಸ್ತಕಕ್ಕಾಗಿ ಹುಡುಕಾಟ ಮಾಡಬೇಕಿತ್ತು. ಅದಕ್ಕಾಗಿ ಕರಾವಳಿ ಹಾಗೂ ಮಲೆನಾಡನ್ನು ಕೇಂದ್ರವಾಗಿರಿಸಿ, ವಿದ್ಯಾರ್ಥಿಗಳು ಸಾಹಿತ್ಯಾಭಿಮಾನಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕ ಮನೆ ಆರಂಭಗೊಳ್ಳುತ್ತಿದೆ.
ಆನ್ಲೈನ್ ನಲ್ಲಿ ಎಲ್ಲಾ ಪುಸ್ತಕ ರಿಯಾಯಿತಿಯಲ್ಲಿ ಲಭ್ಯ
ಸಾಹಿತ್ಯ ಪುಸ್ತಕಗಳು ಆನ್ಲೈನ್ ಅಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಅಭಿಮಾನಿಗಳು ಆನ್ಲೈನ್ ನಲ್ಲಿ ಕೂಡ ಪಡೆಯಬಹುದು. ಅದರ ಜೊತೆಗೆ ವಿಶೇಷವಾಗಿ ಅಫರ್ ಕೂಡ ಲಭ್ಯವಿದೆ.
ಕ್ರಿಯೇಟಿವ್ ಸಂಸ್ಥೆಯ ಮೂಲಕ “ಪುಸ್ತಕ ಮನೆ ” ಉಡುಪಿ ಜಿಲ್ಲೆ ಕಾರ್ಕಳ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎರಡುವರೆ ಸಾವಿರ ಚದರ ಅಡಿಯ ವಾಣಿಜ್ಯ ಸಂಕೀರ್ಣದಲ್ಲಿ ನಿರ್ಮಾಣವಾಗಿದೆ. ಪುಸ್ತಕ ಮನೆಯಲ್ಲಿ ಸಾಹಿತ್ಯಾಭಿಮಾನಿಗಳು, ಯುವ ಲೇಖಕರು ಬರೆಯಲು ಬಯಸುವ ಪುಸ್ತಕಗಳನ್ನು ತಾವೇ ಮುದ್ರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಯುವ ಸಾಹಿತ್ಯಾಭಿಮಾನಿಗಳಿಗೆ ಪುಸ್ತಕ ಮುದ್ರಣ ಸೇರಿದಂತೆ ಎಲ್ಲಾ ರೀತಿಯಲ್ಲೂ ಪುಸ್ತಕ ಮನೆ ಸಹಾಯವಾಗಲಿದೆ.
ಸರ್ವರನ್ನು ಸ್ವಾಗತಿಸಿದ, ಸಹಕಾರ ಕೋರಿದ ಆಡಳಿತ ಮಂಡಳಿ
ಕ್ರಿಯೇಟಿವ್ ಫೌಂಡೇಶನ್ ಪುಸ್ತಕ ಮನೆಯ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಪುಸ್ತಕ ಸೇವೆ ಮೂಲಕ ಕನ್ನಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಲಿದೆ. ಸಂಸ್ಥೆಯ 7 ಮಂದಿ ಈ ಕನಸಿನ ಯೋಜನೆಗಾಗಿ ಶ್ರಮಿಸುತ್ತಿದ್ದಾರೆ. ಪುಸ್ತಕ ಮನೆಯನ್ನು ಓದುಗರ ಕೈಗಿಡಲು ಎಲ್ಲಾ ಸಿದ್ಧವಾಗಿದ್ದು ಪುಸ್ತಕ ಮನೆ ಆಡಳಿತ ಮಂಡಳಿ ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದೆ. ಜತೆಗೆ ರಾಜ್ಯದ ಎಲ್ಲಾ ಓದುಗರು, ಜನರ ಸಹಕಾರ ಕೋರಿದೆ.
Discover the world of books with Pustaka Mane on WhatsApp! Join our official group for the latest book arrivals and updates.
https://chat.whatsapp.com/DsRbeVXVX2eJQZzK7M9Llc
Website : pustakamane.com