ಗೀತಾ ಚಂದ್ರ ಆಚಾರ್ಯರಿಗೆ ಜಯಕರ್ನಾಟಕ ಜನಪರ ಜಿಲ್ಲಾ ಶಿಕ್ಷಕ ಪ್ರಶಸ್ತಿ
– ಕಾರ್ಕಳ ಜಯರ್ನಾಟಕ ಜನಪರ ವೇದಿಕೆಯ ಮಾದರಿ ಕಾರ್ಯಕ್ರಮ
NAMMUR EXPRESS NEWS
ಕಾರ್ಕಳ: ಜಯರ್ನಾಟಕ ಜನಪರ ವೇದಿಕೆಯು ಜಿಲ್ಲೆಯ ಶಿಕ್ಷಕರ ಧ್ವನಿಯಾಗಿ ಕರ್ತವ್ಯ ನಿರ್ವಹಿಸಲು ಬದ್ದವಾಗಿದೆ. ಗೀತಾ ಚಂದ್ರ ಆಚಾರ್ಯ ಅವರಂತಹ ಬಹುಮುಖ ವ್ಯಕ್ತಿತ್ವದ ಶಿಕ್ಷಕಿಗೆ ಜಿಲ್ಲಾ ಪ್ರಶಸ್ತಿಯನ್ನು ನೀಡುತ್ತಿರುದಕ್ಕೆ ವೇದಿಕೆಗೆ ತುಂಬಾ ಹೆಮ್ಮೆ ಎನಿಸುತ್ತದೆ. ಕಾರ್ಕಳ ವ್ಯಾಪ್ತಿಯಲ್ಲಿ ವೇದಿಕೆಯ ಸಂಘಟನಾ ಶಕ್ತಿ ಪ್ರಬಲವಾಗಿದ್ದು ಯಾವುದೇ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು ನಾವು ಬದ್ಧರಾಗಿರುತ್ತೇವೆ ಎಂಬುದಾಗಿ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ ಹೇಳಿದ್ದಾರೆ.
ಸೆ.16ರಂದು ಕಾರ್ಕಳದಲ್ಲಿ ಗೀತಾ ಚಂದ್ರ ಆಚಾರ್ಯರ ಮನೆಯಲ್ಲಿ ಪ್ರಶಸ್ತಿ ಪ್ರದಾನ ಮಾಿ ಮಾಗಳ್ನು ಆಡಿದರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳಾದ ಸ್ಯಾಮಸನ್ ಸಿಕ್ವೆರಾ ಮಟಪಾಡಿ, ಆಶೀಶ್ ಹೆಗ್ಡೆ,
ಅಭಿಷೇಕ್ ಕುಂದರ್ ಯಕ್ಷಿಮಠ,ಅವಿನಾಶ್ ಬಂಗೇರ ತೆಕ್ಕಟ್ಟೆ, ಚಿರಾಗ್ ತೆಕ್ಕಟ್ಟೆ, ಗಣೇಶ್ ಕಾವಡಿ,ರಂಜಿತ್ ಮಡಿವಾಳ ಗುಂಡ್ಮಿ, ಚೇತನ್, ನಿಖಿಲ್,ರಾಮ್,ಕಾರ್ಕಳ ತಾಲೂಕು ಪದಾಧಿಕಾರಿಗಳಾದ ಅಧ್ಯಕ್ಷ ಉಮ್ಮರಬ್ಬ, ಗೌರವ ಅಧ್ಯಕ್ಷ ರವಿ ಪೂಜಾರಿ, ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಪಾಸ್ಕಲ್ ಸುಧಾಕರ ಕೃಷ್ಣ, ಕಾರ್ತಿಕ್ ಮತ್ತು ಗೀತಾ ಟೀಚರ್ ಅವರ ಮನೆಯವರು ಆತ್ಮೀಯರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಯಕ್ಷ ಸಾಹಿತಿ ಪಿ ವಿ ಆನಂದ ಸಾಲಿಗ್ರಾಮ ನಿರೂಪಿಸಿದರು.