ಮಾಳ ಘಾಟ್, ಅಗುಂಬೆ ಘಾಟ್ ಅಗಲೀಕರಣಕ್ಕೆ ಸಜ್ಜು!
– ಕರಾವಳಿ, ಮಲೆನಾಡು ಸಂಪರ್ಕದ ಘಾಟಿಗಳಿಗೆ ಅಭಿವೃದ್ಧಿ ಭಾಗ್ಯ
– ಶೀಘ್ರದಲ್ಲಿ ಕಾಮಗಾರಿ ಶುರು ಸಾಧ್ಯತೆ?
NAMMUR EXPRESS NEWS
ಕಾರ್ಕಳ: ಬಯಲು ಸೀಮೆ, ಮಲೆನಾಡು ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಘಾಟಿ ರಸ್ತೆಗಳ ಅಗಲೀಕರಣಕ್ಕೆ ಕಾರ್ಯಕ್ಕೆ ಪೂರ್ವ ಸಿದ್ದತ ಚಟುವಟಿಕೆ ಗಳು ಅಂತಿಮ ಹಂತದಲ್ಲಿದೆ. ಎನ್ ಎಚ್ 66ಎ ರಸ್ತೆ ಅಗಲೀಕರಣ ಕಾಮಗಾರಿಯು ವೇಗ ಪಡೆಯುತಿದ್ದು ಎರಡನೆ ಹಂತದ ಅಗಲೀಕರಣಕ್ಕೆ ಡಿಪಿಅರ್ (ಪೂರ್ವ ಸಿದ್ದತಾ ಯೋಜನಾ ವರದಿ) ಸಿದ್ದಪಡಿಸಲಾಗುತ್ತಿದೆ. ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ಎನ್ ಎಚ್ 66 ರಾಷ್ಟ್ರೀಯ ಹೆದ್ದಾರಿಯು ಮಲ್ಪೆ, ಉಡುಪಿ ಮಣಿಪಾಲ, ಹಿರಿಯಡ್ಕ ಪೆರ್ಡೂರು , ಹೆಬ್ರಿ ಸೋಮೇಶ್ವರ ಅಗುಂಬೆ ಮಾರ್ಗವಾಗಿ ಶಿವಮೊಗ್ಗ ಮೂಲಕ ಮೊಣಕಾಲ್ಮೂರು ಸಂಪರ್ಕಿಸುತ್ತದೆ
ಎರಡನೆ ಹಂತದ ರಸ್ತೆ ಅಗಲೀಕರಣಕ್ಕೆ ಡಿ ಪಿ ಆರ್!
ಹೆಬ್ರಿ ಸೋಮೇಶ್ವರ ದಿಂದ ಅಗುಂಬೆವರೆಗೆ ಸುಮಾರು 21 ಕಿಮೀ ಉದ್ದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಡಿ ಪಿ ಅರ್ ಸಿದ್ದಪಡಿಸಲಾಗುತ್ತಿದೆ. ಈಗಾಗಲೇ ಪೂರ್ವ ಸಿದ್ದತಾ ಯೋಜನಾ ವರದಿ ಮಾಹಿತಿಯನ್ನು ಪಡೆಯಲು ತಜ್ಞರ ಸಲಹೆ ಯನ್ನು ಪಡೆಯಲಾಗುತ್ತಿದೆ . ಹೆಬ್ರಿಯಿಂದ ಮಲ್ಪೆವರೆಗಿನ 1500 ಮರ ತೆರವು ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆ 2.70 ಕೋಟಿ ರೂ. ಹಣವನ್ನು ಅರಣ್ಯ ಇಲಾಖೆಗೆ ಪಾವತಿ ಮಾಡಿದೆ. ಹೆಬ್ರಿಯಿಂದ ಮಲ್ಪೆ ಬಂದರುವರೆಗೆ ಸುಮಾರು 39.ಕಿಮೀ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ತೀರ್ಥಹಳ್ಳಿಯಿಂದ ಮಲ್ಪೆ ಬಂದರು ವರೆಗಿನ ರಸ್ತೆಯು 2013 ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲಾಗಿತ್ತು.
ಉಡುಪಿ ನಗರದಲ್ಲಿ ಒಟ್ಟು 8 ಕಿ.ಮೀ. ದೂರದ ರಸ್ತೆ ಮೊದಲೆ ಅಗಲಿಕರಣಗೊಂಡಿದ್ದು ಈಗ 206 ಕೋಟಿ ರೂ. ವೆಚ್ಚದಲ್ಲಿ 29 ಕಿ.ಮೀ.ದೂರದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ಎ ಮಲ್ಪೆ -ಉಡುಪಿ ,ಮಣಿಪಾಲ- ಹೆಬ್ರಿ ವರೆಗಿನ ಕಾಮಗಾರಿ ಮುಂದಿನ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಮಾಳ ಘಾಟ್ ಅಗಲೀಕರಣ ಸಿದ್ದತೆ!
ಮಾಳ ಘಾಟ್ ಶೃಂಗೇರಿವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 540 ಕೋಟಿ ರೂಪಾಯಿ ಗಳ ಡಿ ಪಿ ಅರ್ ಸಿದ್ದ ಪಡಿಸಲಾಗಿದೆ. ಈಗಿರುವ 3.5 ಮೀ ಹೆದ್ದಾರಿಯನ್ನು 10 ಮೀ ಅಗಲೀಕರಣ ಗೊಳಿಸಲಾಗುತ್ತದೆ. ಮಾಳ ಗೇಟ್ ನಿಂದ ತನಿಕೋಡು ಗೇಟ್ ವರೆಗಿನ ಸುಮಾರು 50 ಕಿಮೀ ರಸ್ತೆ ಯು ನಿರ್ಮಾಣ ಗೊಂಡು ಮೇಲ್ದರ್ಜೆಗೆ ಏರಿಸಲಾಗುತ್ತದೆ
ಈಗಿರುವ ಮಾಳ ಗೇಟ್ ನಿಂದ ಕಾರ್ಕಳ ಬೈಪಾಸ್ ವರೆಗೆ ಸುಮಾರು 15.27 ಕಿಮೀ ರಸ್ತೆಯನ್ನು 177.4 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆಯನ್ನು ಚತುಷ್ಪತ ರಸ್ತೆ ರಸ್ತೆಯನ್ನಾಗಿ ಪರಿವರ್ತಿಸಿ ಕಾಮಗಾರಿ ನಡೆಯುತ್ತಿದೆ. ಕಾರ್ಕಳ ಬೈಪಾಸ್ ನಿಂದ ಮಂಗಳೂರಿನ ಬಿಕರ್ನಕಟ್ಟೆವರೆಗೆ ಖಾಸಗಿ ಕಂಪೆನಿಯೊಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲಸವನ್ನು ಗುತ್ತಿಗೆ ಪಡೆದುಕೊಂಡಿದ್ದು ರಸ್ತೆ ಕಾಮಗಾರಿ ವೇಗ ಪಡೆಯುತ್ತಿದೆ.ಈ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಾಗಿದೆ.
ಆಗುಂಬೆ ಘಾಟಿ ಡಿಪಿಆರ್ ಸಿದ್ಧ!
ಆಗುಂಬೆ ಘಾಟ್ ನ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಎಜೆನ್ಸಿ ನೇಮಕ ಮಾಡುವ ಟೆಂಡರ್ ತಾಂತ್ರಿಕ ಬಿಡ್ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ರಿಜನಲ್ ಅಫಿಸ್ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಎಜೆನ್ಸಿ ನೇಮಕವಾದ ಬಳಿಕ ಅಧ್ಯಯನ ಮಾಡಿ ತಾಂತ್ರಿಕ ವಿಷಯಗಳನ್ನು ಆಧರಿಸಿ ವಿವರವಾದ ಯೋಜನಾ ವರದಿ ಸಿದ್ದವಾಗಲಿದೆ.
ಅಧಿಕಾರಿಗಳು ಹೇಳೋದೇನು..?
ಮಾಳ ಘಾಟ್ ನಿಂದ ತನಿಕೋಡು ಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿಯು ಕುದುರೆ ಮುಖ ವನ್ಯಜೀವಿ ವಿಭಾಗದಲ್ಲಿ ಹಾದುಹೋಗುತಿದ್ದು ರಾಜ್ಯ ವನ್ಯಜೀವಿ ವಿಭಾಗದಲ್ಲಿ ಅನುಮೋದನೆ ದೊರಕಿದ್ದು ನಂತರ ವಿವರವಾದ ಯೋಜನಾ ವರದಿಯನ್ನು ಏಜೆನ್ಸಿಯ ವರದಿಯನ್ನು ಆಧರಿಸಿ ಎರಡನೆ ಹಂತದಲ್ಲಿ ರಾಷ್ಟ್ರೀಯ ವನ್ಯಜೀವಿ ದೆಹಲಿಗೆ ಕಳುಹಿಸಿ ಒಪ್ಪಿಗೆ ಪಡೆಯಲಾಗುತ್ತಿದೆ ಮಂಜುನಾಥ ಕೆವಿ ಆಭಿಯಂತರರು ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಶೃಂಗೇರಿ ತಿಳಿಸಿದ್ದಾರೆ.