ದೇಶದ ಗಮನ ಸೆಳೆಯಲಿದೆ ಪಾದರಕ್ಷಾ ಅಭಿಯಾನ!
– ಕಾರ್ಕಳದಲ್ಲಿ ಮಹತ್ವಾಕಾಂಕ್ಷೆಯ ಬೃಹತ್ ಯೋಜನೆ
– ಉಡುಪಿಯ ಅವಿನಾಶ್ ಕಾಮತ್ ರಅವರ ಸಾರಥ್ಯದಲ್ಲಿ ಅಭಿಯಾನ
– ಹಳೆಯ ಪಾದರಕ್ಷೆಯ ಕಚ್ಚಾವಸ್ತು ಬಳಸಿ, ಸಂಪೂರ್ಣ ಹೊಸದಾಗಿ ನವೀಕರಿಸಿ ಅಶಕ್ತರಿಗೆ ನೀಡುವ ವಿಶಿಷ್ಟ ಯೋಜನೆ
NAMMUR EXPRESS NEWS
ಕಾರ್ಕಳ: ಮುಂಬಯಿನ ಗ್ರೀನ್ ಸೋಲ್ ಸಂಸ್ಥೆಯ ವತಿಯಿಂದ ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳದ ಸಹಯೋಗದಲ್ಲಿ ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಭಾಗದ ಮತ್ತು ಕಡುಬಡವ, ಅಶಕ್ತ ಮಕ್ಕಳಿಗೆ ಪಾದರಕ್ಷೆ ಒದಗಿಸುವ ಅಭಿಯಾನವನ್ನು ಆರಂಭಿಸಲಾಗಿದೆ. ಪ್ರತಿಯೊಬ್ಬ ಮಗುವಿನ ದೇಹ ಕೂಡ ಸುರಕ್ಷಿತವಾಗಿರಬೇಕು ಮತ್ತು ಆರೋಗ್ಯವಂತರಾಗಿರಬೇಕೆಂಬ ಮಹತ್ವಾಕಾಂಕ್ಷೆಯ ಬೃಹತ್ ಯೋಜನೆ ಉಡುಪಿಯ ಅವಿನಾಶ್ ಕಾಮತ್ ರಅವರ ಸಾರಥ್ಯದಲ್ಲಿ ಸಂಘಟನೆಗೊಳ್ಳುತ್ತಿದೆ.
ರಾಜ್ಯದ ಅಶಕ್ತ ಹಾಗೂ ಹಿಂದುಳಿದ ಮಕ್ಕಳಿಗೆ ಒಂದು ವರದಾನವಾಗಿ ಪರಿಣಮಿಸಲಿರುವ ಈ “ನಡಿಗೆ” ಯೋಜನೆಗೆ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ. ಸಾರ್ವಜನಿಕರು ತಮ್ಮಲ್ಲಿರುವ ಉಪಯೋಗಿಸಿ ಬೇಡವೆನಿಸಿದ ಹಳೆಯ ಚಪ್ಪಲಿ, ಶೂಗಳನ್ನು (10 ವರ್ಷ ಮೇಲ್ಪಟ್ಟವರ) ನಮಗೆ ದಿನಾಂಕ : 29-11-2023ರ ಒಳಗೆ ತಂದು ಒಪ್ಪಿಸುವಂತೆ ವಿನಂತಿಸಲಾಗಿದೆ.
ಹಳೆಯ ಪಾದರಕ್ಷೆಗಳ ಕಚ್ಚಾ ವಸ್ತುಗಳನ್ನು ಬಳಸಿ, ನವೀಕರಿಸಿ ಸಂಪೂರ್ಣ ಹೊಸದಾದ ಪಾದರಕ್ಷೆಗಳನ್ನು ಅಶಕ್ತರಿಗೆ ನೀಡಲಾಗುವ ವಿಶಿಷ್ಟ ಯೋಜನೆ ಇದಾಗಿದೆ. ಇದರಲ್ಲಿ ಎಲ್ಲರೂ ಕೈಜೋಡಿಸುವಂತೆ ಕೋರುತ್ತಿದ್ದೇವೆ.
ಪಾದರಕ್ಷೆಗಳನ್ನು ತಂದು ಒಪ್ಪಿಸುವ ಸ್ಥಳ.
“ಪುಸ್ತಕ ಮನೆ”ಯ ಮುಂಭಾಗ, ಆದಿಧನ್ ಎನ್ ಕ್ಲೇವ್, ಜೋಡುರಸ್ತೆ, ಕಾರ್ಕಳ
ದೂ. :9606474289