ಕಾರ್ಕಳ: ಮಳೆಗಾಲ ಆರಂಭವಾಗಿರುವ ಸಮಯದಲ್ಲೇ ಕೋಳಿಮಾಂಸ ,ಹಾಗೂ ಮೊಟ್ಟೆಯ ಬೆಲೆ ಗಗನಕ್ಕೆ ಏರಿಕೆಯಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.
ಬೆಲೆ ಎಷ್ಟಿದೆ: ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಬಾಯ್ಲರ್ ಕೋಳಿ ಮಾಂಸ ರೀಟೈಲ್ ವ್ಯಾಪಾರ ದಲ್ಲಿ ಕೆಜಿ ಯೊಂದಕ್ಕೆ 220-240 ರೂ , ರಖಂ ಕೆಜಿಯೊಂದಕ್ಕೆ 210-230ರೂ,ಟೈಸನ್ ಕೋಳಿ ಕೆಜಿ ಯೊಂದಕ್ಕೆ 230-250ರೂ , ರಖಂ ಕೆಜಿಯೊಂದಕ್ಕೆ 220-240 ರೂ ದರದಲ್ಲಿ ಮಾರಾಟ ವಾಗುತ್ತಿದೆ . ಇಡೀ ಕೋಳಿ ಖರೀದಿಸುವವರು ಬಾಯ್ಲರ್ ಕೆಜಿಯೊಂದಕ್ಕೆ ರೂ.170 , ಟೈಸನ್ ರೂ180 ಅದರ ಭಾರಕ್ಕೆ ತಕ್ಕಂತೆ ಬದಲಾಗುತ್ತಿದೆ .ಕೋಳಿ ಮೊಟ್ಟೆಯೊಂದಕ್ಕೆ 6.50- 7 ರೂ ವರೆಗೆ ಮಾರಟ ವಾಗುತ್ತಿದೆ.
ಕಳೆದ ವರ್ಷ 2022 ರಲ್ಲಿ ಬಾಯ್ಲರ್ ಕೋಳಿ ಮಾಂಸ ಬೆಲೆ 160 -180 ರೂ ನಡುವೆ ಸ್ಥಿರವಾಗಿತ್ತು. ಟೈಸನ್ ಕೋಳಿಮಾಂಸ ರೂ. 190- 200 ರ ನಡುವೆ ಸ್ಥಿರವಾಗಿತ್ತು. 2022 ರಲ್ಲಿ ಮೊಟ್ಟೆ ಗೆ ರೂ .5- 5.30 ರ ವರೆಗೆ ಸ್ಥಿರವಾಗಿತ್ತು.
ಊರಿನ ಕೋಳಿ ದರ ದುಬಾರಿ: ಮೆ ಕೊನೆ ಹಾಗೂ ಜೂನ್ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ತಂಬಿಲ ಸೇರಿದಂತೆ ದೈವದ ಆರಾಧನೆಗೆ ಊರಿನ ಕೋಳಿಗೆ ಬಲು ಬೇಡಿಕೆ ಅದ್ದರಿಂದ ಈ ಊರಿನ ಕೋಳಿಗಳ ಬೆಲೆಯಲ್ಲು ಏರಿಕೆ ಯಾಗಿದೆ. ಊರಿನ ಕೋಳಿ ಮಾಂಸ ಕೆಜಿಯೊಂದಕ್ಕೆ 320 -350 ,ರಖಂಗಳಲ್ಲಿ 300-310 ವರೆಗೆ ಮಾರಾಟ ವಾಗುತ್ತಿದೆ. ಇಡಿ ಕೋಳಿ ಕೆಜಿಯೊಂದಕ್ಕೆ 250- 290 ವರೆಗೆ ಮಾರಾಟ ವಾಗುತ್ತಿದೆ.
ಕೋಳಿ ಸಾಕಾಣಿಕಾ ಶೆಡ್ ಗಳಲ್ಲಿ ಕಾಡುತ್ತಿದೆ ನೀರಿನ ಕೊರತೆ: ಈ ಬಾರಿ ಕೋಳಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವೆ ಅಧಿಕ ಉಷ್ಣತೆ. ಆದ್ದರಿಂದ ಕೋಳಿ ಶೆಡ್ ಗಳಲ್ಲಿ ನೀರಿನ ಕೊರತೆ ಎದುರಾಗಿದೆ .ಎಪ್ರಿಲ್ ಮೇ ಜೂನ್ ತಿಂಗಳುಗಳಲ್ಲಿ ಬಾಯ್ಲರ್ ಹಾಗು ಟೈಸನ್ ಕೋಳಿಗಳ ಶೆಡ್ ಗಳ ಉಷ್ಣತೆಯನ್ನು ಸಾಮಾನ್ಯ ಉಷ್ಣತೆ ಯನ್ನು ಕಾಯ್ದುಕೊಳ್ಳಲು ನೀರಿನಪೂರೈಕೆ ಅಧಿಕವಾಗಿದೆ .
ಬೆಳವಣಿಗೆ ಕುಂಠಿತ: ಪ್ರತಿ ಸೋಮವಾರ ಕೋಳಿಫಾರಂ ಕಂಪೆನಿಗಳು ಕೋಳಿ ಮರಿಗಳ ಬೆಲೆ ನಿರ್ಧಾರಿಸುತಿದ್ದು ಈ ವಾರದಲ್ಲಿ ಬಾಯ್ಲರ್ ಕೋಳಿ ಮರಿಯೊಂದಕ್ಕೆ 32 ರೂ ನಿಗದಿಪಡಿಸಲಾಗಿದೆ. ಅದರೆ ಮೇ ತಿಂಗಳಲ್ಲಿ ಕೋಳಿ ಮರಿಯೊಂದಕ್ಕೆ 40 -42 ರೂ ಬೆಲೆ ಹೆಚ್ಚಳವಾಗಿತ್ತು. ಅದರಿಂದ ಮೇ ತಿಂಗಳಲ್ಲಿ ಅಧಿಕ ಉಷ್ಣತೆ ಯಿದ್ದ ಕಾರಣ ಕೋಳಿ ಮರಿಗಳು ಉಷ್ಣತೆ ತಡೆಯಲಾರದೆ ಸಾವನ್ನಪ್ಪುತ್ತವೆ.ಈ ಉತ್ಪಾದನೆ ಕುಂಠಿತ ವಾಗಿತ್ತು. ಕೆಲವು ಬಾರಿ ಹೆಚ್ಚಿನ ಉಷ್ಣತೆಯಿಂದ ಕೋಳಿಗಳು ತೂಕ ಕಳೆದುಕೊಳ್ಳುವ ಪ್ರಮೇಯ ವಿದೆ. ಮೇ ಜೂನ್ ತಿಂಗಳಲ್ಲಿ ಮದುವೆ ,ಮೆಹೆಂದಿ ಸೇರಿದಂತೆ ಹೆಚ್ಚಿನ ಸಮಾರಂಭ ಗಳಿದ್ದು ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಯಿತ್ತು.
ಪ್ರಶಕ್ತಸಾಲಿನಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಗಳ 315 ಕೋಳಿ ಶೆಡ್ ಗಳು ಗಳಿವೆ.
ಕೋಳಿ ಅಹಾರ ಬೆಲೆ ಏರಿಕೆ: ಸಾಗಾಟ ವೆಚ್ಚ, ಉತ್ಪಾದನೆ ಕುಂಠಿತ, ಕೋಳಿಗಳಿಗೆ ನೀಡುವ ಆಹಾರದ ಕಚ್ಚಾವಸ್ತುಗಳಾದ ಜೋಳ, ಸೋಯಾ ,ಎಣ್ಣೆಕಾಳು ಬೆಲೆಗಳಲ್ಲಿ ಗಣನೀಯ ವಾದ ಏರಿಕೆ, ಜೌಷದ ಬೆಲೆಗಳು , ಹಾಗು ಕಾರ್ಮಿಕರ ಭತ್ಯೆ ,ಶೆಡ್ ಗಲ ನಿರ್ವಹಣಾ ವೆಚ್ಚಗಳು ಏರಿಕೆ ಯಾಗಿದ್ದ ಕಾರಣ ಬೆಲೆ ಏರಿಕೆ ಯಾಗುತ್ತಿದೆ.
ಸಂಕುಚಿತ ಮಾರುಕಟ್ಟೆ: 42 ದಿನಗಳ ಕಾಲ ಕೋಳಿ ಮರಿಗಳ ಬೆಳವಣಿಗೆ ಇದ್ದ ಕಾರಣ ಒಂದು ವರೆ ತಿಂಗಳ ಕಾಲ ಮಾರುಕಟ್ಟೆ ಬದಲಾವಣೆಗಳು ಅಗುತ್ತಿರುತ್ತವೆ. ಬೇಡಿಕೆ ಹೆಚ್ಚಾದಂತೆ ಕೋಳಿಗಳನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ವೇಗಗತಿಯಲ್ಲಿ ಸಾಗಿಸಲು ಶೆಡ್ ಗಳಲ್ಲಿ ಸಾಧ್ಯವಾಗುವುದಿಲ್ಲ. ಕೋಳಿಗಳನ್ನು ಹೆಚ್ಚಿನ ಮಲೆನಾಡು ಪ್ರದೇಶಗಲಾದ ಶಿವಮೊಗ್ಗ ಹಾಸನ ಹುಬ್ಬಳ್ಳಿ ಗಳಿಂದ ಕರಾವಳಿ ಪ್ರದೇಶಗಳಲ್ಲಿ ಕೋಳಿ ಸಾಗಾಣಿಕೆ ಮಾಡಲಾಗುತ್ತದೆ.ಪೂರೈಕೆ ಇದ್ದಾಗ ಬೇಡಿಕೆ ಕುಸಿತ ವಾಗಬಹುದು, ಬೇಡಿಕೆ ಹೆಚ್ಚಿದ್ದಾಗ ಪೂರೈಕೆ ಕುಸಿತವಾಗಬಹುದು. ಅದ್ದರಿಂದ ಮಾರುಕಟ್ಟೆ ಸಂಕುಚಿತ ಗೊಳ್ಳಬಹುದು ಎಂದು ಕೋಳಿ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ ಅಧಿಕ ತಾಪಮಾನ ,ನೀರಿನ ಅಭಾವವೇ ಕೋಳಿ ಬೆಲೆ ಏರಿಕೆಗೆ ಕಾರಣ , ಕಾರ್ಕಳದ ಹೆಬ್ರಿ ತಾಲೂಕುಗಳಲ್ಲಿ 315 ಫಾರಂಗಳಿದ್ದು ಅದರಲ್ಲಿಕಳೆದ ಮೂರು ತಿಂಗಳ ಲ್ಲಿ ಅರ್ಧದಷ್ಟು ಶೆಡ್ ಗಳಲ್ಲಿ ಕೊಳಿ ಮರಿಗಳನ್ನು ಸಾಕಿಲ್ಲ.ಹಾಗಾಗಿ ಖಾಲಿಬಿದ್ದಿವೆ . ಮಳೆ ಬಂದ ಬಳಿಕ ಕೋಳಿ ಮರಿಗಳ ಸಾಕಾಣೆ ಹೆಚ್ಚಾಗಬಹುದು;
ಶೈಲೇಶ್ ಸಾಣೂರು ಪೂರೈಕೆದಾರರು
ಕೋಳಿ ಮಾಂಸದ ಬೆಲೆ ದೀಢಿರ್ ಏರಿಕೆ ಯಾಗಿದ್ದು ಹೋಟೆಲ್ ಗಳಲ್ಲಿ ಅಹಾರ ವಸ್ತು ಗಳ ಬೆಲೆ ಎರಿಕೆ ಯಾಗಬಹುದು.
ಜಯಾನಂದ ಕುಲಾಲ್ ಅಜೆಕಾರು ಹೋಟೆಲ್ ಮಾಲೀಕರು ಕಾರ್ಕಳ
ಈ ಬಾರಿ ಕೋಳಿ ಮಾಂಸ ಬೆಲೆಗಳು ಹಳ್ಲಿ ಹಾಗೂ ಸಿಟಿಗಳಿಗೆ ಬದಲಾವಣೆಯಾಗಿದೆ. ಅಂಗಡಿ ಬಾಡಿಗೆ ,ಸಾಗಾಣಿಕೆ ನಿರ್ವಹಣಾ ವೆಚ್ಚ ಅತಿಯಾಗಿದೆ. ಹಾಗಾಗಿ ಬೆಲೆಗಳು ಏರಿಕೆ ಯಾಗಿದೆ.
ನಿತ್ಯಾನಂದ ಸುವರ್ಣ ಕೋಳಿ ವ್ಯಾಪಾರಸ್ಥರು