- ಭಾರತದ ಅಗ್ರಗಣ್ಯ ಸ್ಥಳ ಪಟ್ಟಿ ಸೇರಿದ ಜೈನ ಕೇಂದ್ರ
- ದೇಶದ 100 ಐತಿಹಾಸಿಕ ಆಗ್ರಗಣ್ಯ ಸ್ಥಳಗಳಲ್ಲಿ ಯೋಗ
- ಯೋಗ ಹಬ್ಬದ ವಿಶೇಷ ಏನು ಎತ್ತ..?!
NAMMUR EXPRESS NEWS
ಕಾರ್ಕಳ: ದೇಶದ 100 ಐತಿಹಾಸಿಕ ಆಗ್ರಗಣ್ಯ ಧಾರ್ಮಿಕ ಸ್ಥಳಗಳಲ್ಲಿ ಯೋಗ ದಿನಾಚರಣೆ ಆಚರಣೆ ಮಾಡಲು ಸಿದ್ಧತೆ ನಡೆದಿದೆ. ಅದರಂತೆ ಕಾರ್ಕಳ ತಾಲೂಕಿನ ವರಂಗ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿಯ ಆವರಣದಲ್ಲಿ ಜೂ.2ರಂದು ಬೆಳಗ್ಗೆ 6:30ರಿಂದ 8ರ ತನಕ ಯೋಗ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಅಂತರಾಷ್ಟ್ರೀಯ ಯೋಗ ದಿನದ ಪೂರ್ವಭಾವಿಯಾಗಿ 100 ದಿನಗಳ ಮುಂಚಿತವಾಗಿ ಭಾರತದ 100 ಆಯ್ದ ಅಗ್ರಗಣ್ಯ ಯೋಗ ಸಂಸ್ಥೆಗಳಿಂದ ದೇಶದ 100 ಐತಿಹಾಸಿಕ ಸಂಸ್ಥೆಗಳಲ್ಲಿ 1 ದಿನದ ಯೋಗ ಪ್ರಾತ್ಯಕ್ಷಿಕೆ ಮತ್ತು ಯೋಗಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡುವ ತಜ್ಞರಿಂದ ಕಾರ್ಯಗಾರ ನಡೆಸಲಾಗುತ್ತಿದೆ. ರಾಷ್ಟ್ರೀಯ ಯೋಗ ಮಹೋತ್ಸವ ಮೂಲಕ ಯೋಗ ದೊಂದಿಗೆ ದೇಶಿಯ ಐತಿಹಾಸಿಕ ಸ್ಥಳಗಳನ್ನು ಪರಿಚಯ ಮಾಡಿಸುವುದು ಅದರ ಉದ್ದೇಶ ಇದಾಗಿದೆ.
ಅಂತರಾಷ್ಟ್ರೀಯ ಯೋಗ ದಿನಕ್ಕೆ ಹೆಚ್ಚಿನ ಮಹತ್ವ ಹಾಗೂ ಪ್ರಚಾರ ನೀಡುವ ಸಲುವಾಗಿ ಎಂಡಿಐವೈಎನ್
ಈಗಾಗಲೇ ಯೋಗ ಮಹೋತ್ಸವಕ್ಕೆ ಅಂತಿಮ ಸಿದ್ಧತೆಗಳು ನಡೆಯುತ್ತಿವೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಉಜಿರೆ, ದಕ್ಷಿಣ ಕನ್ನಡ ಕ ಆಯುಷ್ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ. ನವದೆಹಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಹೆಬ್ರಿ ತಾಲೂಕು ಭಗವಾನ್ ಶ್ರೀ ನೇಮಿನಾತ ಸ್ವಾಮಿ ಜೈನಮಠ, ವರಂಗ ಅವುಗಳ ಸಹಯೋಗದಲ್ಲಿ ಯೋಗ ಮಹೋತ್ಸವ ನಡೆಯಲಿದೆ.
ರಾಷ್ಟ್ರೀಯ ಯೋಗ ಮಹೋತ್ಸವ ಮೂಲಕ ಯೋಗ ದೊಂದಿಗೆ ದೇಶಿಯ ಐತಿಹಾಸಿಕ ಸ್ಥಳಗಳನ್ನು ಪರಿಚಯ ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶ.
ಅಂತರಾಷ್ಟ್ರೀಯ ಯೋಗ ದಿನಕ್ಕೆ ಹೆಚ್ಚಿನ ಮಹತ್ವ ಹಾಗೂ ಪ್ರಚಾರ ನೀಡುವ ಸಲುವಾಗಿ ಎಂಡಿಐವೈಎನ್ ಸಂಸ್ಥೆಯ ಮೂಲಕ ಈ ಅಂತರಾಷ್ಟ್ರೀಯ ಯೋಗ ದಿನಕ್ಕೆ 100 ದಿನ ಮುಂಚಿತವಾಗಿ ಯೋಗ ಮಹೋತ್ಸವ ಆಯೋಜನೆ ಮಾಡಲು ಕಳೆದೆರಡು ವರ್ಷದಿಂದ ಅವಕಾಶ ನೀಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎರಡು ವರ್ಷಗಳಿಂದ ಆಚರಿಸಲು ಅವಕಾಶ ಸಿಕ್ಕಿದೆ. ನಾವು 1250 ವರ್ಷಗಳ ಇತಿಹಾಸವಿರುವ ವರಂಗ ಬಸದಿಯಲ್ಲಿ ಯೋಗ ಮಹೋತ್ಸವ ನಡೆಸಲಾಗುತ್ತಿದೆ.
ಹೊಂಬುಜ ಜೈನ ಮಠದ ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಮತ್ತು ಕಳೆದ 25 ವರ್ಷದಿಂದ ಯೋಗ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ ದೇಶದಲ್ಲೇ ಸೆಂಟರ್ ಫರ್ ಎಕ್ಸಲೆನ್ಸ್ ಬಿರುದು ಪಡೆದ ಶ್ರೀ ಧ. ಮ. ಸಂಸ್ಥೆಯ ಡಾ. ಡಿ ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಬಸೀದಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಶಾಂತಿವನದ ನಿರ್ದೇಶಕ ಡಾ. ಶಶಿಕಾಂತ್ ಜೈನ್, ಡೀನ್ ಡಾ. ಶಿವಪ್ರಸಾದ್, ವರಂಗ ಭಗವಾನ್ ಶ್ರೀ ನೇಮಿನಾಥ ಸ್ವಾಮೀಜಿ ಬಸದಿ ಮ್ಯಾನೇಜರ್ ಯುವರಾಜ್ ಅರಿಗ, ಉಪನ್ಯಾಸಕ ಉದಯ ಸುಬ್ರಹ್ಮಣ್ಯ, ಸಂಸ್ಥೆಯ ಆತ್ಮಿಕ ಶೆಟ್ಟಿ, ಡಾ. ಶೋಬಿತ್ ಇತರರು ಸಿದ್ಧತೆ ಪರಿಶೀಲನೆ ನಡೆಸುತ್ತಿದ್ದಾರೆ