ಮೂಡುಬಿದಿರೆಯ ವೈಬ್ರಂಟ್ ನೀಟ್ ಲಾಂಗ್ ಟರ್ಮ್ ಕೋಚಿಂಗ್
– ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳ ಕನಸು ನನಸಾಗಿಸುತ್ತಿರುವ ಸಂಸ್ಥೆ
– ಪ್ರಸಕ್ತ ವರ್ಷ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್
NAMMUR EXPRESS NEWS
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶ ಪರೀಕ್ಷೆಯಾದ ನೀಟ್ ಪರೀಕ್ಷೆಯನ್ನು ಬರೆದು ಮೊದಲ ಪ್ರಯತ್ನದಲ್ಲೇ ವೈದ್ಯಕೀಯ ಸೀಟ್ ಪಡೆಯಲು ಬೇಕಾದಷ್ಟು ಅಂಕಗಳಿಸಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಪಿಯುಸಿಯ ಬೋರ್ಡ್ ಪರೀಕ್ಷೆ ಮತ್ತು ವೃತ್ತಿಪರ ಕೋರ್ಸ್ ಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆ ಇವೆರಡನ್ನು ಒಟ್ಟಿಗೆ ಬರೆದು ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗದೇ ಇರಬಹುದು. ಮೊದಲ ಪ್ರಯತ್ನದಲ್ಲೇ ನಿಮ್ಮ ಕನಸಿನ ಕೋರ್ಸಿಗೆ ಸೀಟ್ ಪಡೆಯಲು ಅರ್ಹರಾಗಿಲ್ಲ ಎಂದಾಕ್ಷಣ ಇನ್ನು ಮುಂದೆ ನೀವು ಆತಂಕ ಪಡಬೇಕಿಲ್ಲ. ನಿಮ್ಮ ಕನಸನ್ನು ನನಸಾಗಿಸುವ ಸಲುವಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಕಾಶಿ ಎಂದು ಪ್ರಸಿದ್ದಿ ಪಡೆದಿರುವ ಮೂಡುಬಿದಿರೆಯ ಕಲ್ಲಬೆಟ್ಟುವಿನ ಪ್ರಶಾಂತ ಪರಿಸರದಲ್ಲಿ ಕಳೆದೆರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ವೈಬ್ರೆಂಟ್ ಅಕಾಡೆಮಿ ಫಾರ್ ಇನ್ನೋವೇಟಿವ್ ಲರ್ನಿಂಗ್ ಸಂಸ್ಥೆಯು ಪಿಯುಸಿ ನಂತರ ಒಂದು ವರ್ಷದ ನೀಟ್ ಲಾಂಗ್ ಟರ್ಮ್ ತರಬೇತಿ ನೀಡುವ ಮೂಲಕ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ, ಪ್ರಥಮ ನೀಟ್ ಲಾಂಗ್ ಟರ್ಮ್ ಫಲಿತಾಂಶದಲ್ಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಸಂಸ್ಥೆಯಾಗಿದೆ.
ಅನುಭವಿ ಶಿಕ್ಷಕರು ಕಟ್ಟಿ ಬೆಳೆಸಿದ ವೈಬ್ರೆಂಟ್ ಅಕಾಡೆಮಿ.!
ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಆರು ಜನ ನುರಿತ ಉಪನ್ಯಾಸಕರ ತಂಡವು 2022ರಲ್ಲಿ ವೈಬ್ರೆಂಟ್ ಅಕಾಡೆಮಿ ಫಾರ್ ಇನ್ನೊವೇಟಿವ್ ಲರ್ನಿಂಗ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಈ ಸಂಸ್ಥೆಯಲ್ಲಿಂದು ದೇಶದ ಬೇರೆ ಬೇರೆ ರಾಜ್ಯದಲ್ಲಿ ಸೇವೆ ಸಲ್ಲಿಸಿರುವ 30ಕ್ಕೂ ಹೆಚ್ಚು ವಿಷಯ ಪರಿಣಿತ ಉಪನ್ಯಾಸಕರು ಬೋಧಕರಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ. ಇವರೆಲ್ಲರೂ ಸೇರಿ, ಸರ್ಕಾರಿ ವೈದ್ಯಕೀಯ ಸೀಟ್ ಪಡೆದು ಡಾಕ್ಟರ್ ಆಗಬೇಕೆಂಬ ಹೆಬ್ಬಯಕೆಯ ವಿದ್ಯಾರ್ಥಿಗಳಿಗೆ ನೀಟ್ ಲಾಂಗ್ ಟರ್ಮ್ ತರಬೇತಿಯನ್ನು ನೀಡುತ್ತಾ ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದ್ದಾರೆ.
ಏನಿದು ನೀಟ್ ಲಾಂಗ್ ಟರ್ಮ್?
ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯ ನಂತರ ನಡೆಯುವ ವೈದ್ಯಕೀಯ ಕೋರ್ಸ್ನ ಪ್ರವೇಶ ಪರೀಕ್ಷೆಯಾದ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ವೈದ್ಯಕೀಯ ಸೀಟ್ ಪಡೆಯುವಲ್ಲಿ ವಿಫಲರಾದಾಗ ಅಂತಹ ವಿದ್ಯಾರ್ಥಿಗಳು ಒಂದು ವರ್ಷ ತ್ಯಾಗ ಮತ್ತು ಪರಿಶ್ರಮದ ಮೂಲಕ ನೀಟ್ ಕೋಚಿಂಗ್ ಪಡೆದು ಮೆಡಿಕಲ್ ಸೀಟ್ ಪಡೆದುಕೊಳ್ಳಬಹುದಾಗಿದೆ. ಇದೇ ನೀಟ್ ಲಾಂಗ್(ದೀರ್ಘಾವಧಿ) ಟರ್ಮ್ ಕೋಚಿಂಗ್ ಅಥವಾ ನೀಟ್ ರಿಪೀಟರ್ ಬ್ಯಾಚ್.
ಲಾಂಗ್ ಟರ್ಮ್ ನೀವ್ ಕೋಚಿಂಗ್ನ ಅವಶ್ಯಕತೆ
ಪಿಯುಸಿ ಬೋರ್ಡ್ ಪರೀಕ್ಷೆಯ ಜೊತೆಗೆ ನೀಟ್ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಿ ಉತ್ತಮ ಬ್ಯಾಂಕ್ ಗಳಿಸಲು ಸಾಧ್ಯವಾಗದೇ ಇರಲು ಅನೇಕ ಕಾರಣಗಳಿರಬಹುದು. ವಿದ್ಯಾರ್ಥಿಗೆ ನೀಟ್ ಪರೀಕ್ಷೆಯ ಕುರಿತು ಸೂಕ್ತವಾದ ಮಾರ್ಗದರ್ಶನದ ಕೊರತೆ, ತಾವು ಕಲಿತ ಪಿಯು ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅವಶ್ಯಕವಾದ ತರಬೇತಿ ಮತ್ತು ಉತ್ತಮ ಶಿಕ್ಷಕರ ಕೊರತೆ, ವಿದ್ಯಾರ್ಥಿಗೆ ವಿಷಯದ ಬಗ್ಗೆ ಇರುವ ಗೊಂದಲ, ಕಲಿಕೆಗೆ ಪೂರಕವಾದ ವಾತಾವರಣದ ಕೊರತೆ, ಆರೋಗ್ಯದ ಸಮಸ್ಯೆ ಅಥವಾ ಪ್ರೌಢಶಾಲಾ ಮತ್ತು ಕಾಲೇಜು ಹಂತದಲ್ಲಿ ಉತ್ತಮ ಮೂಲಭೂತ ಜ್ಞಾನ ಲಭಿಸದೇ ಇರುವುದು ಹೀಗೆ ಮೊದಲಾದ ಕಾರಣಗಳಿರಬಹುದು. ಇವೆಲ್ಲದಕ್ಕೂ ಪರಿಹಾರವನ್ನು ಒದಗಿಸಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತಮ್ಮ ನಿರ್ದಿಷ್ಟ ಉದ್ದೇಶವನ್ನು ಸಾಧಿಸಲು ಸಹಕಾರಿಯಾಗುವಂತೆ ವೈಬ್ರಂಟ್ ಲಾಂಗ್ ಟರ್ಮ್ ಕೋಚಿಂಗ್ ಅತ್ಯಂತ ಅವಶ್ಯಕವಾಗಿದೆ.
ವೈಬ್ರಂಟ್ ನೀಟ್ ಲಾಂಗ್ ಟರ್ಮ್ನ ವಿಶೇಷತೆ
ನೀಟ್ ರಿಪೀಟರ್ಸ್ ವಿದ್ಯಾರ್ಥಿಗಳ ಮನೋವಿಜ್ಞಾನ ಹಾಗೂ ಅವರ
ಬೇಡಿಕೆಗಳ ಸ್ವರೂಪವನ್ನು ಅರಿತು ಅವರಿಗೆ ಬೋಧಿಸಿದ ನುರಿತ ಅನುಭವುಳ್ಳವರು ಹಾಗೂ ಪ್ರತಿಷ್ಠಿತ ಬೇರೆ ಬೇರೆ ಸಂಸ್ಥೆಗಳಲ್ಲಿ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಅಕಾಡೆಮಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಉಪನ್ಯಾಸಕರು ಇಲ್ಲಿದ್ದಾರೆ. ಫಿಸಿಕ್ಸ್ 400 ಗಂಟೆ, ಕೆಮಿಸ್ಟ್ರಿ 300 ಗಂಟೆ. ಮತ್ತು ಬಯಾಲಜಿಗೆ 300 ಗಂಟೆಯನ್ನಿರಿಸಲಾಗಿದೆ. ಪ್ರತಿಯೊಂದು ವಿಷಯಕ್ಕೂ 25 ವರ್ಷಕ್ಕೂ ಹೆಚ್ಚು ಬೋಧನಾನುಭವ ಇರುವ ಸುಮಾರು 30 ಉಪನ್ಯಾಸಕರ ತಂಡವೇ ಇದೆ. ದಿನಂಪ್ರತಿ ಅನುಭವಿ ಉಪನ್ಯಾಸಕರ ಸಮ್ಮುಖದಲ್ಲಿ 5 ಗಂಟೆಗಳ ಸ್ಟಡಿ ಹವರ್, 60ಕ್ಕೂ ಹೆಚ್ಚು ಪೂರ್ಣಪಠ್ಯದ ಟೆಸ್ಟ್ ಗಳು, ನಮ್ಮ ಸಂಸ್ಥೆಯದೇ ಅಪ್ ಟು ಡೇಟ್ ಸ್ಟಡಿ ಮೆಟೀರಿಯಲ್ಸ್, ಅಪರಿಮಿತ ಕೊಶ್ಚನ್ ಬ್ಯಾಂಕ್ ಕೂಡ ಲಭ್ಯವಿದೆ. ಅಲ್ಲದೆಯೇ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಕೊಠಡಿಗಳಲ್ಲಿ ಕೋಚಿಂಗ್ ವ್ಯವಸ್ಥೆಯನ್ನು ನೀಡಲಾಗುತ್ತದೆ.
ಉತ್ತಮ ಗುಣಮಟ್ಟದ ತರಬೇತಿಗೆ ನಮ್ಮ ಫಲಿತಾಂಶಗಳೇ ಸಾಕ್ಷಿ!
200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್: 2023-24ರಲ್ಲಿ ನಮ್ಮ ಸಂಸ್ಥೆಯಿಂದ ಕೋಚಿಂಗ್ ಪಡೆದ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಮಾಡಿರುತ್ತಾರೆ. ಈವರಗಿನ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ವೈಬ್ರಂಟ್ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಸಂಸ್ಥೆಗೆ ಸೇರಿದ ನಂತರ ಸರ್ಕಾರಿ ವೈದ್ಯಕೀಯ ಸೀಟ್ ಪಡೆಯಲು ಬೇಕಾಗುವಷ್ಟು ಅಂಕಗಳನ್ನು ಗಳಿಸಿರುತ್ತಾರೆ. ಸಂಸ್ಥೆಯಿಂದ ಪರೀಕ್ಷೆ ಬರೆದ 2001ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಪಡೆಯಲು ಅರ್ಹರಾಗಿದ್ದಾರೆ. ಕಳೆದ ವರ್ಷ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಸೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು:
ಸಂಸ್ಥೆಯಿಂದ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಪಡೆದು ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಪ್ರಜ್ವಲ್ 662(509), ಜಿ.ಟಿ. ಸೃಷ್ಟಿ ಕೋಟಿ 661(388), ಬೆನಕ ಟಿ.ಎಸ್ 648(210), ಸೂರಜ್ ಎಂ ಸಾಗರ್ 643(493), ಐರೋಲ್ ಡೀನ ರೋಡ್ರಿಗನ್ 642(443), ಸುಜಯ್ ಪಿ ವಿ 632, ಅಕ್ಷತಾ ಪಿ ಬಿರಾದರ್ 632(229), ಇ ಧನುಶ್ರೀ 631, ಎಂ ಸುಹಾಸ್ 630(347), ಕೆ ಪ್ರಗತಿ 630(347), ವಿಕಾಸ್ ಬಿ ಆರ್ 630(419), ಪ್ರೀತಮ್ ನಾಯ್ಕ್ 627(413), ಹೆಚ್ಎಸ್ ಪ್ರಜ್ವಲ್ 620(355), ಎನ್ಎಸ್ ಹರ್ಷಿತ್ 620(432), ವಿಶಾಲ್ ವಿ ಪಟ್ಟಣಶೆಟ್ಟಿ 617(348), ಬೀರಪ್ಪ ಎಂ.ಕೆ 615(314), ಪಿಎಸ್ ಚಂದನ್ ಕುಮಾರ್ 612(474), ಮಹಮ್ಮದ್ ರುಹೈಬ್ 611(392), ಅಶ್ವಿನ್ ಸಿ ನಾಯ್ಕ್ 609(301), ಅಭಿಷೇಕ್ ಶೇಟ್ 606(212), ಅನಿಲ್ ಕುಮಾರ್ 606(411), ಮಲ್ಲಿಕಾರ್ಜುನ್ ಜೆ. ಕಂಬಾರ್ 604(388), ಕಾರ್ತಿಕ್ ಕರೋಲಿ 600(333),650ಕ್ಕಿಂತ ಹೆಚ್ಚು ಅಂಕಗಳನ್ನು 2 ವಿದ್ಯಾರ್ಥಿಗಳು, 600ಕ್ಕಿಂತ ಹೆಚ್ಚು ಅಂಕ 22, 550ಕ್ಕಿಂತ ಹೆಚ್ಚು ಅಂಕ 80, 500ಕ್ಕಿಂತ ಹೆಚ್ಚು ಅಂಕ 156 ವಿದ್ಯಾರ್ಥಿಗಳು ಪಡೆದಿರುತ್ತಾರೆ.
ಸಂಸ್ಥೆಯಲ್ಲಿ ಜೆಇಇ ಲಾಂಗ್ ಟರ್ಮ್ ಕೋಚಿಂಗ್ ಲಭ್ಯ:
ವೈದ್ಯಕೀಯ ಕೋರ್ಸ್ಗಳ ಪ್ರವೇಶ ಪರೀಕ್ಷೆಯಾದ ನೀಟ್ ಲಾಂಗ್ ಟರ್ಮ್ ಕೋಚಿಂಗ್ ವ್ಯವಸ್ಥೆಯೊಂದಿಗೆ ದೇಶದ ಪ್ರತಿಷ್ಠಿತ IIT ಮತ್ತು NIT ಪ್ರವೇಶ ಪರೀಕ್ಷೆಯಾದ ಜೆಇಇ ಪರೀಕ್ಷೆಗೆ ಸಂಪೂರ್ಣ ಪ್ರತ್ಯೇಕವಾದ ಒಂದು ವರ್ಷದ ಜೆಇಇ ದೀರ್ಘಾವಧಿ ಕೋಚಿಂಗ್ ವ್ಯವಸ್ಥೆಯು ಲಭ್ಯವಿದೆ.
ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ
ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕವಾದ ಸುಸಜ್ಜಿತವಾದ ಮನೆಯ ವಾತಾವರಣದ ವಿಶಾಲವಾದ ಹಾಸ್ಟೆಲ್ಗಳು, ಪರಿಶುದ್ಧ ಮತ್ತು ಶುಚಿ, ರುಚಿಯಾದ ಆರೋಗ್ಯಕರವಾದ ಆಹಾರ ವ್ಯವಸ್ಥೆ, ಅನುಭವಿ ವಾರ್ಡನ್ಸ್ ಮತ್ತು ಕ್ಷೇಮಪಾಲನಾಧಿಕಾರಿಗಳು, ದಿನವೂ ವಾಸಸ್ಥಾನದ ನಿರ್ವಹಣೆ, ನಿರಂತರ ಬಿಸಿ ನೀರಿನ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7411417028, 7411649881