ಕಾರ್ಕಳದಲ್ಲಿ ಸಂಭ್ರಮದ ವಿಶ್ವಕರ್ಮ ಜಯಂತಿ
* ಗುಡಿ, ಗೋಪುರ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯವರ ಕೊಡುಗೆ ಅಪಾರ: ದಾಮೋದರ ಶರ್ಮ
* ವಿಶ್ವ ಕರ್ಮ ಸಮುದಾಯಕ್ಕೆ ಅನೇಕ ಯೋಜನೆ
NAMMUR EXPRESS NEWS
ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರ್ಕಳ ತಾಲೂಕು ಆಡಳಿತ ಆಶ್ರಯದಲ್ಲಿ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ದಾಮೋದರ ಶರ್ಮ ಬಾರ್ಕೂರು ಅವರು ವಿಶ್ವಕರ್ಮ ಎಂಬ ಪದ ಒಂದು ಸಮುದಾಯಕ್ಕೆ ಸೀಮಿತವಾಗಿರುವುದಲ್ಲ. ವಿಶ್ವಕರ್ಮ ಜನಾಂಗದ ದೇವತೆಯಲ್ಲ, ಬದಲಾಗಿ ಜಗತ್ತಿನ ದೇವತೆ ಎಂದು ಅಭಿಪ್ರಾಯಪಟ್ಟರು.
ವಿಶ್ವಕರ್ಮ ಸಮುದಾಯವರಿಗೆ ಕಲೆ ರಕ್ತಗತವಾಗಿ ಬಂದಿರುತ್ತದೆ. ಕಾರ್ಕಳ ಬಾಹುಬಲಿ ವಿಶ್ವಕರ್ಮ ಸಮುದಾಯ ಕೆಯ ದ್ೋತಕವಾಗಿ ನಿಂತಿದೆ. ಮಾರ್ಯಾದೆಗಾಗಿ ಪ್ರಾಣ ತೆತ್ತ ಅದರ ಶಿಲ್ಪಿ ಇಂದು ಕರಾವಳಿಯಾದ್ಯಂತ ದೈವಿಕ ಶಕ್ತಿಯಾಗಿ ಪರಂಪರೆ ಪಡೆಯುತ್ತಿರುವುದು ನಮ್ಮ ಸಮುದಾಯದ ಪರಂಪರೆ. ಮಠ, ಮಂದಿರ, ಗುಡಿ ಗೋಪುರಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯವರ ಕೊಡುಗೆ ಅಪಾರವಾಗಿದೆ.
ವಿಬಿಎಸ್ ಸಭಾದ ಅಧ್ಯಕ್ಷ ಪ್ರಕಾಶ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಯದಾಯದ ಅಭಿವೃದ್ಧಿಗಾಗಿ ಸರಕಾರ ವಿವಿಧ ಯೋಜನೆ, ಸೌಲಭ್ಯಗಳನ್ನು ರೂಪಿಸಿದೆ. ಆದರೆ ಈ ಬಗ್ಗೆ ಸಮುದಾಯದವರಲ್ಲಿ ಮಾಹಿತಿಯ ಕೊರತೆಯಿದೆ. ಹೀಗಾಗಿ ಆಡಳಿತ ವ್ಯವಸ್ಥೆ ಸರಕಾರಿ ಯೋಜನೆಗಳ ಮಾಹಿತಿ ಸಮುದಾಯಕ್ಕೆ ತಲುಪುಸುವತ್ತ ಗಮನಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪ್ರತಿಭಾ ಆರ್,ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ತಾಲೂಕು ಪಂಚಾಯತ್ ಇಓ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು. ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಟಿ. ಆಚಾರ್ಯ ವಂದಿಸಿದರು.