ಕೊಪ್ಪದಲ್ಲಿ ಈಗ ಕಳ್ಳರ ಕಾಟ!
– ಹರಿಹರಪುರ ಬಳಿ ವಾರದಲ್ಲಿ ಎರಡನೇ ಕಳ್ಳತನ
– ಬಟ್ಟೆ, ಪಾತ್ರೆ, ಫ್ಯಾನ್, ಮಂಚವನ್ನು ಕದ್ದ ಕಳ್ಳರು!
– ಶೃಂಗೇರಿ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
NAMMUR EXPRESS NEWS
ಕೊಪ್ಪ:- ಹರಿಹರಪುರ ಠಾಣಾ ವ್ಯಾಪ್ತಿಯ ನಿಲುವಾಗಿಲು ಗ್ರಾಮಪಂಚಾಯಿತಿಗೆ ಒಳಪಟ್ಟ ಕಾಳನಾಯಕನಕಟ್ಟೆ ಎಂಬಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಕಳ್ಳತನ ನಡೆದಿದ್ದು, ಒಂದು ವಾರದ ಹಿಂದೆಯೇ ನಾಲ್ಕು ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿದ್ದಾರೆ.
ಓಮಿನಿ ಕಾರು, ಸೈಕಲ್, ರಿಕ್ಷಾ ಬ್ಯಾಟರಿಗಳನ್ನು ಕದ್ದಿದ್ದು, ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ಆರು ದಿನ ಕಳೆಯುವಷ್ಟರಲ್ಲಿ ಮತ್ತೊಮ್ಮೆ ಕಳ್ಳತನ, ತೀರಾ ಬಡತನ ಹಾಗೂ ಸಾಲದ ಸಂಕಷ್ಟ ದಲ್ಲಿದ್ದ ಗುಲಾಮಹುಸೇನ್ w/o ನಸೀಮಬಾನು ಇವರ ಮನೆಗೆ ಎರಡನೇ ಬಾರಿ ನುಗ್ಗಿದ ಕಳ್ಳರು ಅವರ ಮನೆಯಲ್ಲಿದ್ದ ದಿನನಿತ್ಯ ಉಪಯೋಗಿಸುವ ಬಟ್ಟೆ, ಪಾತ್ರೆ, ಫ್ಯಾನ್, ಮಂಚ ಇತ್ಯಾದಿ ಗಳನ್ನು ಸಂಪೂರ್ಣ ವಾಗಿ ದೋಚಿಪರಾರಿ ಯಾಗಿದ್ದಾರೆ, ಹರಿಹರಪುರ ಠಾಣಾ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದೆ, ಎರಡನೇ ಬಾರಿ ಕಳ್ಳತನ ಕ್ಕೆ ಪೋಲೀಸರ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶೃಂಗೇರಿ : ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಶೃಂಗೇರಿ ತಾಲ್ಲೂಕಿನ ನೆಮ್ಮಾರ್ ಸಮೀಪ ಯಾದಾಳು ಗ್ರಾಮದ ದಿಲೀಪ ಅವರ ಪತ್ನಿ ಶಾಲಿನಿ(39) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪ ತಾಲ್ಲೂಕಿನ ಮೇಲ್ಪಾಲ್ ಗ್ರಾಮ ಇವರ ತವರುಮನೆಯಾಗಿದ್ದು ಮದುವೆಯಾಗಿ ಒಂದು ವರ್ಷ ಮಾತ್ರ ಕಳೆದಿದ್ದು, ಇವರಿಗೆ ಮಕ್ಕಳು ಇರಲಿಲ್ಲ ಇವರು ಹತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದೂ ತೀರ್ಥಹಳ್ಳಿ ಮಾನಸ ಆಸ್ಪತ್ರೆಯಲ್ಲಿ ಔಷದಿ ಮಾಡುತ್ತಿದ್ದರು. ಇದರಿಂದ ನೊಂದು ಬೇಸರ ಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ.