ಕೊಪ್ಪ, ಶೃಂಗೇರಿ, ಎನ್.ಆರ್.ಪುರ: ಸಂಭ್ರಮದ ಗಣೇಶೋತ್ಸವ!
– ಎಲ್ಲಾ ಕಡೆ ಪಟ್ಟಣ, ಹಳ್ಳಿಗಳಲ್ಲಿ ಗಣೇಶೋತ್ಸವ
– ಗಣೇಶ ವೇದಿಕೆ ಕಾರ್ಯಕ್ರಮಗಳಿಗೆ ಜನರು ಫಿದಾ
NAMMUR EXPRESS NEWS
ಕೊಪ್ಪ/ಶೃಂಗೇರಿ : ಮಲೆನಾಡಿನ ಕೊಪ್ಪ,ಶೃಂಗೇರಿ ಹಾಗೂ ಎಂ ಆರ್ ಪುರದಲ್ಲಿ ಸಂಭ್ರಮದಿಂದ ಗಣೇಶೋತ್ಸವವನ್ನು ಆಚರಣೆ ಮಾಡಲಾಯಿತು. ಈಗಾಗಲೇ ಮೂರು ದಿನಗಳ ಗಣಪತಿಯನ್ನು ವಿಸರ್ಜನೆ ಮಾಡಲಾಗಿದ್ದು, ಇನ್ನು ಐದು ಮತ್ತು 15 ದಿನಗಳ ಗಣಪತಿ ಅನೇಕ ಕಡೆ ಪ್ರತಿಷ್ಠಾಪನೆ ಮಾಡಲಾಗಿದೆ. ಕೊಪ್ಪ ಪಟ್ಟಣ, ಎನ್ಆರ್ ಪುರ ಪಟ್ಟಣ, ಶೃಂಗೇರಿ ಪಟ್ಟಣದಲ್ಲಿ ಅನೇಕ ಕಡೆ ಗಣಪತಿಗಳು ಗಮನ ಸೆಳೆದಿವೆ.
ಎನ್. ಆರ್. ಪುರದಲ್ಲಿ ಗಮನ ಸೆಳೆದ ಇಸ್ರೋ ಗಣಪತಿ!
ಇನ್ನು ಎನ್ ಆರ್ ಪುರದಲ್ಲಿ ಇಸ್ರೋ ಮಾದರಿಯ ಗಣಪತಿ ವಿಶೇಷವಾಗಿದೆ. ಇನ್ನು ಮೂರು ತಾಲೂಕುಗಳ ಹಳ್ಳಿ ಹಳ್ಳಿಗಳಲ್ಲೂ ಕೂಡ ಗಣಪತಿ ಪ್ರತಿಷ್ಠಾಪನೆ ಮಾಡಿದ್ದು, ಎಲ್ಲೆಡೆ ಸಂಭ್ರಮ ಕಂಡು ಬಂದಿತು. ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳು ಧಾರ್ಮಿಕ ಕಾರ್ಯಕ್ರಮಗಳು ನಡೆದವು.