ಎದೆ ಹಾಲು ಕುಡಿದ ಬಳಿಕ ಹಸುಗೂಸು ಸಾವು!
– ಕುಂದಾಪುರದಲ್ಲಿ ಅಪರೂಪದ ಘಟನೆ
– ಏನಿದು ಘಟನೆ..? ಮಗು ಯಾಕೆ ಮೃತಪಟ್ಟಿತು?
NAMMUR EXPRESS NEWS
ಕುಂದಾಪುರ: ಕುಂದಾಪುರದಲ್ಲಿ ಕೇವಲ 43 ದಿನದ ಹಸುಗೂಸು ತಾಯಿಯ ಎದೆ ಹಾಲು ಕುಡಿದ ಕೆಲವೇ ಹೊತ್ತಿನಲ್ಲಿ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ಗಂಗೊಳ್ಳಿಯ ಗುಜ್ಜಾಡಿ ಗ್ರಾಮದ ಲಕ್ಷ್ಮಣ ಎಂಬವರ ಪುತ್ರಿ ನೇತ್ರಾವತಿ ಅವರ ಮಗು ಈ ರೀತಿ ಮೃತಪಟ್ಟಿದೆ. ಮಂಗಳವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ತಾಯಿ ಎದೆಹಾಲು ಕುಡಿಸಲಾಗಿದ್ದು, ಬಳಿಕ ಅಜ್ಜಿಯು ಮಗುವನ್ನು ನೋಡಲು ಹೋದಾಗ ಉಸಿರಾಡುತ್ತಿರಲಿಲ್ಲ. ಅನುಮಾನ ಬಂದು ಮೈಯನ್ನು ಮುಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೂಡಲೇ ಕುಂದಾಪುರದ ವಿನಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.