ಇತಿಹಾಸ ಪ್ರಸಿದ್ಧ ಕುಂಭಾಸಿಯಲ್ಲಿ ನವ ರಾತ್ರಿ ಸಂಭ್ರಮ!
* ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನಿಗೆ ಉಘೇ ಉಘೇ
* ಅ. 10ರಿಂದ ಯಾವ ಯಾವ ಕಾರ್ಯಕ್ರಮ?
NAMMUR EXPRESS NEWS
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.12ರ ವರೆಗೆ ದೇವರ ಸನ್ನಿಧಿಯಲ್ಲಿ ನಡೆಯಲಿದೆ.
ಅ.09ರಂದು ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಚಂಡಮುಂಡಹಾ ದುರ್ಗಾ ಪೂಜೆ, ಸರಸ್ವತಿ ಹೋಮ. ಚಂಡಿಕಾ ಹೋಮ ಮೂಲಾ ನಕ್ಷತ್ರ- ದೇವಸ್ಥಾನದ ವತಿಯಿಂದ ಮಹಾಪೂಜೆ ಮತ್ತು ಅನ್ನಸಂತರ್ಪಣೆ,ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ ನಡೆಯಿತು.
ಅ. 10ರಿಂದ ಯಾವ ಯಾವ ಕಾರ್ಯಕ್ರಮ?
ಅ.10ರಂದು ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ನಿಶುಂಭಹಾ ದುರ್ಗಾ ಪೂಜೆ, ದುರ್ಗಾ ಹೋಮ, ಚಂಡಿಕಾ ಹೋಮ – ಭಕ್ತರಿಂದ ಸೇವೆ ಜರುಗಿದೆ. ಮಹಾಪೂಜೆ ಮತ್ತು ಅನ್ನಸಂತರ್ಪಣೆ. ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ ಅಯೋಜಿಸಲಾಗಿದೆ.
ಅ.11 ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಶುಂಭಹಾ ದುರ್ಗಾ ಪೂಜೆ, ನವಾಕ್ಷರಿ ಹೋಮ, ಚಂಡಿಕಾ ಹೋಮ – ಭಕ್ತರಿಂದ ಸೇವೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ.
ಅ.12 ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಚಂಡಿಕಾ ದುರ್ಗಾಪರಮೇಶ್ವರಿ ಪೂಜೆ. ಸಾಮೂಹಿಕ ಚಂಡಿಕಾ ಹೋಮ ಭಕ್ತರಿಂದ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ರುದ್ರ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ. ರಂಗ ಪೂಜೆ, ಮಹಾಮಂಗಳಾರತಿ, ಉತ್ಸವ, ನೃತ್ಯ ಬಲಿ, ಸ್ವರ್ಣ ಪಲ್ಲಕಿ ಉತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆ, ಕಷಾಯ ತೀರ್ಥ, ತೀರ್ಥ ಪ್ರಸಾದ ನಡೆಯಲಿವೆ.
ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಸತ್ಕರ್ಮಗಳು, ಸತ್ ಸಂಪ್ರದಾಯದಂತೆ ಸಂಪನ್ನಗೊಳ್ಳಲಿದೆ.
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆ!
ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಇರುವ ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.12 ರಂದು ವಿಜಯೋತ್ಸವ ನಡೆಯಲಿದೆ.
ಪ್ರತಿದಿನ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ಶ್ರೀಕಾಲ ಬಲಿ ಉತ್ಸವ ಮತ್ತು ಮಹೋತ್ಸವ ನಡೆಯುತ್ತಿದೆ.
ಅ.11 ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ,ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರಮೆರವಣಿಗೆ (ರಥಬೀದಿ ಮತ್ತು ರಾಜಬೀದಿ).
ಅ.12 ಉದಯಪೂರ್ವ 6-05 ಗಂಟೆಗೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ ತುಂಬಿಸುವುದು, ಶಮೀ ಪೂಜೆ ಮತ್ತು ಸಂಜೆ ವಿಜಯೋತ್ಸವ.
ಮಹಾಮಂಗಳಾರತಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವಿರುತ್ತದೆ.
ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಬಂದ ಭಕ್ತರಿಗೆ ಊಟದ ವ್ಯವಸ್ಥೆ ಇದೆ ಹಾಗೂ ಪ್ರತಿದಿನ ರಾತ್ರಿ ಉತ್ಸವದ ನಂತರ ಸಿದ್ದಾಪುರ ಹಾಗೂ ಹಳ್ಳಿಹೊಳೆ ಕಡೆ ಹೋಗುವವರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.
ಚಂಡಿಕಾ ಯಾಗ ಮತ್ತು ಸಂಜೆ ಶ್ರೀ ರಂಗ ಪೂಜಾ ಮತ್ತು ರಾತ್ರಿ ಬೆಳ್ಳಿ ರಥೋತ್ಸವ ಸೇವೆ ಹಾಗೂ ಅನ್ನ ಸಂತರ್ಪಣೆ ಸೇವೆ ಇರುವುದು.