ಪತ್ನಿಯ ಕುತ್ತಿಗೆ ಕಡಿದು ಕುಣಿಯುತ್ತಿದ್ದ ಗಂಡ ಅರೆಸ್ಟ್!
– ಕುಂದಾಪುರದ ಬನ್ನೂರಿನಲ್ಲಿ ನಡೆದ ವಿಚಿತ್ರ ಘಟನೆ: ದೆವ್ವ ಬಂದಂತೆ ನರ್ತನ: ಅಶ್ರುವಾಯು ಪ್ರಯೋಗ ಮಾಡಿ ಬಂಧನ
– ಮಣಿಪಾಲ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್ ದಾಳಿ
– ಕುಂದಾಪುರ, ಮೂಡಬಿದಿರೆಯಲ್ಲಿ ನೆರೆ ಹಾನಿ ಪರಿಶೀಲನೆ
NAMMUR EXPRESS NEWS
ಕುಂದಾಪುರ: ಪತ್ನಿಯ ಕುತ್ತಿಗೆ ಕಡಿದು ಕೊಲೆಗೆ ಯತ್ನಿಸಿ ಪತಿ ಸಂಭ್ರಮಿಸಿದ ಘಟನೆ ಶನಿವಾರ ರಾತ್ರಿ ಕಂಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೂರಿನಲ್ಲಿ ನಡೆದಿದೆ.
ಸಾಗರದ ಸೊರಬ ತಾಲೂಕಿನ ಅನಿತಾ (38) ಎಂಬಾಕೆಯೇ ಮಾರಣಾಂತಿಕ ಹಲ್ಲೆಗೊಳಗಾದವಳು. ಆಕೆಯ ಪತಿ ಲಕ್ಷ್ಮಣ (40) ಎಂಬಾತನೇ ಆರೋಪಿ. ಈ ಕುಟುಂಬವು ಇಲ್ಲಿನ ಬಸೂರು ಕಾಶಿ ಮಠಕ್ಕೆ ಸಂಬಂಧಿಸಿದ ರೆಸಿಡೆನ್ಸಿಯಲ್ ಬ್ಲಾಕ್ ಬಾಡಿಗೆ ಮನೆಯ ಒಂದನೇ ಮನೆಯಲ್ಲಿ ಬಾಡಿಗೆಗೆ ಸೊರಬ ತಾಲೂಕಿನ ಮೂಲದ ಲಕ್ಷ್ಮಣ ಹಾಗೂ ಅನಿತಾ ದಂಪತಿ ವಾಸಿಸುತ್ತಿದ್ದರು. ಕಾಶಿ ಮಠದ ತೋಟ ನೋಡಿಕೊಳ್ಳಲೆಂದು ಅವರು 4 ತಿಂಗಳ ಹಿಂದೆ ಬಂದಿದ್ದರು.
ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಗಂಡ ಹೆಂಡತಿ ಗಲಾಟೆ ನಡೆದು ಕುಡಿದ ಮತ್ತಿನಲ್ಲಿದ್ದ ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆಗೆ
ಕಡಿದು ಮಾರಣಾಂತಿಕ ಹಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪತ್ನಿ ಅನಿತಾ ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಇತ್ತ ಪತಿ ಲಕ್ಷ್ಮಣ ಮನೆಯ ಬಾಗಿಲು ಚಿಲಕ ಹಾಕಿಕೊಂಡು ಹಾಲ್ ನಲ್ಲಿ ಕತ್ತಿ ಹಿಡಿದು ಕುಣಿಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಮನೆಯ ಕಿಟಕಿ ಒಡೆದು ಅಡುಗೆ ಕೋಣೆಗೆ ನುಗ್ಗಿ ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಹೊರತಂದು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆರೋಪಿ ಮಾತ್ರ ದೆವ್ವ ಮೈಮೇಲೆ ಬಂದವನಂತೆ ಕತ್ತಿ ಹಿಡಿದು ಕುಣಿಯುತ್ತಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿ ಒಂದೂವರೆ ಗಂಟೆಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಕಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದಲ್ಲಿ ಅಪಘಾತ ; ಸವಾರ ಸ್ಥಳದಲ್ಲೇ ಸಾವು
ಕುಂದಾಪುರ : ಟ್ರಕ್ ಡಿಕ್ಕಿ ಹೊಡೆದು ದ್ವಿ ಚಕ್ರ ಸವಾರನೊಬ್ಬ ಮೃತಪಟ್ಟ ಘಟನೆ ಗೋಳಿಯಂಗಡಿಯ ಹಾಲಾಡಿ ಸಮೀಪ ನಡೆದಿದೆ.
ನಾಗರಾಜ್ (41) ಮೃತ ದುರ್ದೈವಿ. ನಾಗರಾಜ್ ಅವರು ತಮ್ಮ ಸ್ಕೂಟರ್ನಲ್ಲಿ ಕುಂದಾಪುರ ಕಡೆಗೆ ಹೋಗುತ್ತಿದ್ದಾಗ ಗೋಳಿಯಂಗಡಿಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಟ್ರಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ನಾಗರಾಜ್ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಟ್ರಕ್ ನ ಹಿಂಬದಿ ಎಡಚಕ್ರ ಅವರ ತಲೆಯ ಮೇಲೆ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಮಳೆಗೆ ಮನೆಗೆ ಹಾನಿ ಸ್ಥಳಕ್ಕೆ ಶಾಸಕ ಕಿರಣ ಕುಮಾರ್ ಕೊಡ್ಲಿ ಭೇಟಿ
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಯಡ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ತಾರು ಶಂಕರ್ ಮರಕಾಲ ಅವರ ಮನೆಗೆ ಭಾರಿ ಗಾಳಿ ಮಳೆಗೆ ಮನೆ ಸಂಪೂರ್ಣ ಹಾನಿಯಾಗಿ ಸಾಕಷ್ಟು ನಷ್ಟ ಸಂಭವಿಸಿದ್ದಾರೆ.
ಸ್ಥಳಕ್ಕೆ ಕುಂದಾಪುರ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತುರ್ತಾಗಿ ಪರಿಹಾರ ಬಿಡುಗಡೆ ಮಾಡುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸದಸ್ಯರಾದ ಗೌತಮ್ ಹೆಗ್ಡೆಸಚಿನ್ ಹಾಗೂ ಗ್ರಾಮಸ್ಥರು ಅಧಿಕಾರಿಗಳು ಉಪಸಿದ್ದರಿದ್ದರು.
ಮಣಿಪಾಲ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್ ದಾಳಿ
ಉಡುಪಿ: ಮಹಿಳೆಯನ್ನು ಬಲವಂತವಾಗಿ ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಉಡುಪಿ 80 ಬಡಗಬೆಟ್ಟು ಗ್ರಾಮದ ಖಾಸಗಿ ಲಾಡ್ಜ್ ವೊಂದಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು, ಲಾಡ್ಜ್ ರೂಮ್ನಲ್ಲಿದ್ದ ಪಶ್ಚಿಮ ಬಂಗಾಲ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಸಂತ್ರಸ್ತ ಯುವತಿಯನ್ನು ರಕ್ಷಿಸಲಾಗಿದೆ.
ಈಕೆಯಿಂದ ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ಸಂತ್ರಸ್ತೆ ನೀಡಿರುವ ಮಾಹಿತಿಯಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬಿದಿರೆ: ಗುಡ್ಡ ಕುಸಿದ ಸ್ಥಳಕ್ಕೆ ಮಾಜಿ ಸಚಿವ ಅಭಯಚಂದ್ರ ಭೇಟಿ
ಮೂಡುಬಿದಿರೆ: ಪಾಲಡ್ಕ – ಕಲ್ಲಮುಂಡ್ಯೂರು
ಕೂಡು ರಸ್ತೆಯ ಗುಂಡ್ಯಡ್ಕ ಎಂಬಲ್ಲಿ ವಿಪರೀತ ಮಳೆಯಿಂದಾಗಿ ಶನಿವಾರ ರಸ್ತೆಯ ಬದಿಯಲ್ಲಿದ್ದ ಗುಡ್ಡ ಜರಿದು ಬಿದ್ದು, ಜನರು ನಡೆದಾಡುವ ಹಾಗೂ ವಾಹನ ಸಂಚರಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದ ಸ್ಥಳಕ್ಕೆ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಭಾನುವಾರ ಭೇಟಿ ನೀಡಿದರು.ಪಾಲಡ್ಕ ಪಂಚಾಯತ್ ಉಪಾದ್ಯಕ್ಷ ಪ್ರವೀಣ್ ಸಿಕ್ವೆರಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಲೇರಿಯನ್ ಸಿಕ್ವೆರಾ, ಸ್ಥಳೀಯರಾದ ಆಂದ್ರೂ ಡಿಸೋಜಾ, ವಾಸುದೇವ ನಾಯಕ್, ಮ್ಯಾಕ್ಸಿಂ ಲೋಬೊ, ರಾಘವೇಂದ್ರ ಭಟ್, ಸುಧೀರ್ ಭಟ್, ವಾಸುದೇವ ಭಟ್, ಉದಯ ಶೆಟ್ಟಿ, ಪ್ರಮೋದ್ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.