- 42 ಕಿ.ಮೀ ನಡಿಗೆ: 3000 ಮಂದಿ ಸಾಥ್
- ಮಲೆನಾಡಲ್ಲಿ ಪ್ರತಿಧ್ವನಿಸಿದ ಕಸ್ತೂರಿ ರಂಗನ್ ಹೋರಾಟ
- ಡಿ.31ರ ಗಡುವಿಗೆ ಬ್ರೇಕ್ ಹಾಕುತ್ತಾ ಹೋರಾಟದ ಕಿಚ್ಚು
ತೀರ್ಥಹಳ್ಳಿ: ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಸಾರಥ್ಯದಲ್ಲಿ ಕಸ್ತೂರಿ ರಂಗನ್ ವರದಿ ಮತ್ತು ಅಕೇಶಿಯಾ ನೆಡುತೋಪು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ 3 ದಿನಗಳ 42 ಕಿ.ಮೀ ಪಾದಯಾತ್ರೆ ಸೋಮವಾರ ತೆರೆ ಕಂಡಿದೆ. ಈ ನಡುವೆ ಈ ಹೋರಾಟ ಯಶಸ್ವಿ ಕೂಡ ಆಡಗಿದೆ.
ಸೋಮವಾರ ತಾಲೂಕು ಕಚೇರಿ ಎದುರು ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ವರದಿ ವಿರುದ್ಧದ ಆಕ್ರೋಶ ಹೆಚ್ಚಾಗಿದೆ. ಬಿದರಗೋಡಿನಿಂದ ತೀರ್ಥಹಳ್ಳಿವರೆಗಿನ ಪಾದಯಾತ್ರೆಯಲ್ಲಿ ಸುಮಾರು 3000 ಂಂದಿ ಭಾಗಿಯಾಗಿದ್ದಾರೆ.
ಮಲೆನಾಡಿನ ಜನರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡಬಾರದು. ಎಲ್ಲಾ ರಾಜಕಾರಣಿಗಳು ಪಕ್ಷಾತೀತವಾಗಿ ಈ ಬಗ್ಗೆ ಹೋರಾಟ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ, ನಾಯಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಹೃಷ್ಣ, ಪರಿಸರಹೋರಾಟಗಾರರಾದ ಕಲ್ಕುಳಿ ವಿಠಲ ಹೆಗ್ಡೆ, ಕಲ್ಲಹಳ್ಳ ಶ್ರೀಧರ್, ಅಶೋಕ್ ಕೆ.ಎಲ್ ಮುಂತಾದವರು ಮಂಜುನಾಥ ಗೌಡರ ಈ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಈ ಹೋರಾಟ ಮುಂದುವರಿಸಬೇಕೆಂಬ ಸಲಹೆ ಕೂಡ ನೀಡಿದರು.
ಸಹಕಾರಿ ನಾಯಕ ಮಂಜುನಾಥ ಗೌಡರ ಈ ಪಾದಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಯಿತು. ಜೊತೆಗೆ ಸಹಕಾರಿ ವಲಯದ ಎಲ್ಲಾ ನಾಯಕರು ಈ ಹೋರಾಟಕ್ಕೆ ಕೈಜೋಡಿಸಿದರು.
ಡಿ.31ರ ಗಡುವು: ಕೇಂದ್ರ ಸರ್ಕಾರ ಡಿ.31ರ ಗಡುವು ನೀಡಿದೆ. ಈ ಹೋರಾಟದಿಂದ ಮಲೆನಾಡಿನಲ್ಲಿ ಮತ್ತೆ ಹೋರಾಟದ ಕಿಚ್ಚು ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟದ ಸ್ವರೂಪ ಪಡೆಯಲಿದೆ. ಈ ಪಾದಯಾತ್ರೆ ಮೂಲಕ ಮಂಜುನಾಥ ಗೌಡ ಮುಖ್ಯವಾಹಿನಿಗೆ ಬಂದಿದ್ದು, ರಾಜಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿ ಮತ್ತಷ್ಟು ಬಲ ನೀಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.