- ಸಹಕಾರ ಭಾರತಿಗೆ 10, ಸಹಕಾರ ವೇದಿಕೆಗೆ 4 ಸ್ಥಾನ
ತೀರ್ಥಹಳ್ಳಿ: ತೀರ್ಥಹಳ್ಳಿ ಟಿಎಪಿಸಿಎಂಎಸ್ ಕೊನೆಗೂ ನಾಗರಾಜ ಶೆಟ್ಟರ ನಾಯಕತ್ವದ ಸಹಕಾರಿ ಭಾರತಿ ಪಾಲಾಗಿದೆ.
ನ.5ರಂದು ನಡೆದ ಚುನಾವಣೆ ಬೆಳೆಗ್ಗೆಯಿಂದಲೇ ಚುರುಕು ಪಡೆದಿತ್ತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಆರಗ ಜ್ಞಾನೇಂದ್ರ, ಸಹಕಾರಿ ನಾಯಕ ಮಂಜುನಾಥ ಗೌಡ ಸೇರಿ ಎಲ್ಲಾ ತಾಲೂಕಿನ ನಾಯಕರ ನಡುವೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಚುಕ್ಕಾಣಿ ಹಿಡಿದಿದೆ.
ಸಹಕಾರ ಭಾರತಿ ತಂಡ ಒಟ್ಟು ಒಂಬತ್ತು ಸ್ಥಾನಗಳನ್ನು ತನ್ನದಾಗಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ ಗೆಲುವಿನ ಜಯಭೇರಿ ಬಾರಿಸಿದೆ.
ಚುನಾವಣೆ ನಡೆದ ಎಂಟು ಸ್ಥಾನಗಳಲ್ಲಿ ಸ್ಥಾನದಲ್ಲಿ ಷೇರುದಾರರ ಮತದಾನದಿಂದ ಆರು ಮಂದಿ ಸಹಕಾರ ಭಾರತಿ ಸದಸ್ಯರು ಆಯ್ಕೆಯಾಗಿದ್ದಾರೆ. ಸೊಸೈಟಿ ಮೂಲಕ ಇಬ್ಬರು ಮತ್ತು ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ವಿಜಯದೇವ್ ನಾಯಕತ್ವದ ಸಹಕಾರ ವೇದಿಕೆ ಎರಡು ಸ್ಥಾನ ಷೇರುದಾರರಿಂದ ಮತ್ತು 2 ಸ್ಥಾನ ಸೊಸೈಟಿ ಕಡೆಯಿಂದ ಪಡೆದಿದೆ.
ಸೊಸೈಟಿಯ ಮತದಾನದ ಮೂಲಕ ಎಂಟು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರುಗಳು ಸಹಕಾರ ಭಾರತಿ ಹಾಗೂ ಸಹಕಾರ ವೇದಿಕೆಯಿಂದ ಚುನಾವಣೆಯನ್ನು ಎದುರಿಸಿದ್ದರು. ಇದರಲ್ಲಿ ಕಡಿದಾಳ್ ತಾರಾನಾಥ್, ಆರ್.ಆರ್.ಚಂದ್ರಪ್ಪ,ಅರಳಸುರಳಿ ನಾರಾಯಣ್ ರಾವ್,ಅಗಳಬಾಗಿಲು ಮಹೇಶ್, ಕೇಳೂರು ರಮೇಶ್ ಐದು ಮಂದಿ 23 ಮತದಲ್ಲಿ ತಲಾ 12 ಮತಗಳನ್ನು ಪಡೆದಿದ್ದರು. ಇಲ್ಲಿ ಸಹಕಾರ ವೇದಿಕೆ ಮೇಲುಗೈ ಸಾಧಿಸಿತ್ತು.ಆದರೆ ನಾಲ್ಕು ಸ್ಥಾನ ಮಾತ್ರ ಆಯ್ಕೆಯಾಗಬೇಕಿದ್ದರಿಂದ ಓರ್ವರನ್ನು ಚೀಟಿ ಮೂಲಕ ಆಯ್ಕೆ ಮಾಡಲು ಚೀಟಿ ಹಾಕಿದಾಗ ಅಗಳಬಾಗಿಲು ಮಹೇಶ್ ಆಯ್ಕೆಯಾದರು. ಹೀಗಾಗಿ ಸಹಕಾರ ವೇದಿಕೆಗೆ ಒಂದು ಸ್ಥಾನ ಕಡಿತಗೊಂಡಿತು.
ಯಾರು ಯಾರು ಆಯ್ಕೆ? : ಸಹಕಾರ ಭಾರತಿಯಿಂದ ನಾಗರಾಜ ಶೆಟ್ಟಿ, ಗಿರಿಯಪ್ಪ ಗೌಡ ,ರಾಜ್ ಕಮಲ್, ಚಂದ್ರಶೇಖರ.ಎಂ.ವಿ.,ನಾಗರತ್ನ ಮುರುಘರಾಜ್, ಮೋಹನ್. ಟಿ,ಚಂದ್ರನಾಯ್ಕ್(ಅವಿರೋಧ ಆಯ್ಕೆ),ಅರಳಸುರಳಿ ನಾರಾಯಣ್ ರಾವ್, ರಮೇಶ್ ಕೇಳೂರು ಗೆಲುವಿನ ನಗೆ ಬೀರಿದ್ದಾರೆ.
ಸಹಕಾರ ವೇದಿಕೆಯಿಂದ ರೇವತಿ ಅನಂತ ಮೂರ್ತಿ ಮಂಗಳ ಗೋಪಿ, ತಾರಾನಾಥ್, ಆರ್.ಆರ್.ಚಂದ್ರಪ್ಪ ಟಿಎಪಿಸಿಎಂಎಸ್ ನ ನೂತನ ನಿರ್ದೇಶಕರಾಗಿದ್ದಾರೆ.
ಸರ್ಕಾರದ ನಾಮನಿರ್ದೇಶನ ಸದಸ್ಯರಾಗಿರುವ ವಿ.ಎಸ್.ಮೋಹನ್ ಸಹಕಾರ ಭಾರತಿ ತಂಡದವರಾಗಿದ್ದರಿಂದ ಸಹಕಾರ ಭಾರತಿ 10 ಸದಸ್ಯರ ಮೂಲಕ ಟಿಎಪಿಸಿಎಂಎಸ್ ಚುಕ್ಕಾಣಿ ಹಿಡಿದಿದೆ. ನಾಗರಾಜ ಶೆಟ್ಟರ ಸಾರಥ್ಯ ಮುಂದುವರಿಯಲಿದೆ.
ಚುನಾವಣೆ ವೇಳೆ ಎಲ್ಲಾ ನಾಯಕರು ಭಾಗವಹಿಸಿದ್ದರು. ಭಾರಿ ಕುತೂಹಲ ಮೂಡಿತ್ತು. ಈ ಫಲಿತಾಂಶದ ಬಗ್ಗೆ Nammur Express ವರದಿ ಕೂಡ ಮಾಡಿತ್ತು.