- ಕಳಸ ಕಾಂಗ್ರೆಸ್ ಅಧ್ಯಕ್ಷ ಹೆಬ್ಬಾರ್
- ಕರೋನಾ ಡೇಂಜರ್ ಡೇಂಜರ್..!
ಕಳಸ: ಕರೋನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡಿಗೆರೆ ತಾಲೂಕಿನ ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟದೂರು ಶ್ರೀನಿವಾಸ್ ಹೆಬ್ಬಾರ್ ಸಾವನ್ನಪ್ಪಿದ್ದಾರೆ. ಈ ಮೂಲಕ ಮಲೆನಾಡಿನ ಮತ್ತೊಬ್ಬ ನಾಯಕ ಕರೋನಾಗೆ ಬಲಿಯಾದಂತಾಗಿದೆ. ಒಂದು ತಿಂಗಳಿನಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ತೋಟದೂರು ಶ್ರೀನಿವಾಸ್ ಹೆಬ್ಬಾರ್ (54) ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಶ್ರೀನಿವಾಸ್ ಹೆಬ್ಬಾರ್ ಪ್ರಸ್ತುತ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿ, ರೋಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಮತ್ತು ಧಾರ್ಮಿಕ ಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ತು, ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.
ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನದ ಬಳಿಕ ಮತ್ತೊಬ್ಬ ನಾಯಕನನ್ನು ಮಲೆನಾಡು ಕಳೆದುಕೊಂಡಿದೆ.