- ಮಲೆನಾಡಿನಲ್ಲಿ ಹವಾಮಾನದ ಆತಂಕ
- ಅಡಿಕೆ ಕೊಯ್ಲು ಶುರು: ಕೃಷಿಕರಿಗೆ ಸಂಕಟ!
ಮಲೆನಾಡು: ಕಳೆದ ಕೆಲವು ವಾರಗಳಿಂದ ಮಲೆನಾಡಿನಲ್ಲಿ ಹವಾಮಾನ ವೈಪರಿತ್ಯ ಜನರನ್ನು ಕಂಗಾಲಾಗಿಸಿದೆ. ಒಂದು ಕಡೆ ಪದೇ ಪದೇ ಮಳೆ. ಇತ್ತ ಚಳಿ, ಮಧ್ಯಾಹ್ನ ಬಿಸಿಲು ಮತ್ತು ಉರಿ ಶಕೆ ಮಲೆನಾಡು ಭಾಗದ ಕೃಷಿಕರಿಗೆ ಆತಂಕ ತಂದಿದೆ.
ಶನಿವಾರ, ಭಾನುವಾರ ಕೂಡ ಮಲೆನಾಡಿನ ಬಹುತೇಕ ಕಡೆ ಮಳೆಯಾಗಿದೆ. ಈಗಾಗಲೇ ಅಡಿಕೆ ಮತ್ತು ಕೆಲವೆಡೆ ಭತ್ತದ ಕೊಯ್ಲು ಶುರುವಾಗಿದೆ. ಒಂದು ಕಡೆ ಕರೋನಾ ಕಾರಣದಿಂದ ಕೆಲವು ಕೆಲಸಗಳು ನಿಂತಿವೆ. ಇದೀಗ ಮಳೆ ಕಾರಣ ಅಡಿಕೆ ಕೊಯ್ಲು ತಡವಾಗಿ ಅಡಿಕೆ ತೋಟಗಳಲ್ಲಿ ಅಡಿಕೆ ಗೋಟಾಗಿ ಉದುರುತ್ತಿದೆ. ಇನ್ನೊಂದು ಕಡೆ ಅಡಿಕೆ ಮತ್ತು ಕಾಳು ಮೆಣಸಿಗೆ ರೋಗ ಬಾಧೆ ರೈತರಿಗೆ ದೊಡ್ಡ ತಲೆನೋವಾಗಿದೆ.
ಕಳೆದ ಕಲೆವು ವಾರಗಳಿಂದ ಮಳೆ, ಮೋಡ ರೈತರನ್ನು ಗೊಂದಲದಲ್ಲಿಟ್ಟಿದೆ. ಹೀಗಾಗಿ ಆನೇಕ ರೈತರು ಅಡಿಕೆ ಕೊನೆ ತೆಗೆದಿಲ್ಲ. ಇನ್ನು ಹಲವರು ತೆಗದರೂ ಒಣಗಿಸಲು ಸಾಧ್ಯವಾಗುತ್ತಿಲ್ಲ. ಮಳೆಯ ಕಾರಣ ರೈತನಿಗೆ ಎಲ್ಲಾ ರೀತಿಯಲ್ಲೂ ಸಂಕಟ ಶುರುವಾಗಿದೆ.
ಮಳೆ, ಚಳಿ, ಶಕೆಯಿಂದ ಕಾಯಲೆಗಳು ಜಾಸ್ತಿಯಾಗುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಗಮನವಹಿಸುವುದು ಅಗತ್ಯ.