- ಸಾವಿರಾರು ಜನರಿಂದ ತೀರ್ಥಹಳ್ಳಿಯಲ್ಲಿ ಬೃಹತ್ ಹೋರಾಟ
- ಸರ್ಕಾರದಿಂದ ಹೋರಾಟ ಹತ್ತಿಕ್ಕುವ ಯತ್ನ?
ತೀರ್ಥಹಳ್ಳಿ: ಈಡಿಗ ಸಮುದಾಯದ ಕುಲದೈವ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಹೊರಟಿರುವ ಧಮನಕಾರಿ ನೀತಿಯನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಬೃಹತ್ ಹೋರಾಟ ನಡೆದಿದ್ದು, ಈಡಿಗ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು.
“ಶ್ರೀ ಸಿಗಂದೂರು ಉಳಿಸಿ” ಹೋರಾಟ ತೀರ್ಥಹಳ್ಳಿಯ ಕೋಳಿಕಾಲು ಗುಡ್ಡದ ಈಡಿಗರ ಭವನದಲ್ಲಿ ಬೃಹತ್ ಸಭೆ ನಡೆಸಿ ಶುರು ಮಾಡಲಾಯಿತು. ತೀರ್ಥಹಳ್ಳಿ ಮತ್ತು ಹೊಸ ನಗರ ತಾಲೂಕಿನ ಮೂಲೆ ಮೂಲೆಯಿಂದ ಈಡಿಗ ಸಮುದಾಯದ ಜನ ಆಗಮಿಸಿದ್ದರು. ಸುಮಾರು 1100 ಮಂದಿ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಈಡಿಗ ಬಲ ಪ್ರದರ್ಶನ ಕೂಡ ಮಾಡಿದರು.
ಈಡಿಗರ ಸಂಘದಿಂದ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಡಿವೈಎಸ್ಪಿ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳ ಸರ್ಕಾರದ ಆದೇಶದ ಮೇರೆಗೆ ತಡೆಯುವ ಯತ್ನ ಮಾಡಿದರು. ಆದರೆ ಹೋರಾಟಗಾರರು ಮೆರವಣಿಗೆ ನಡೆಸಿದರು.
ಅಡಿಕೆ ಮತ್ತು ಕೃಷಿ ಸಮಯವಾದರೂ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಈಡಿಗ ಸಮುದಾಯ ಸಿಗಂದೂರು ಹೋರಾಟಕ್ಕೆ ಕೈ ಜೋಡಿಸಿತು. ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪಕ್ಷಾತೀತವಾಗಿ ನಡೆದ ಹೋರಾಟಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬೆಂಬಲ ವ್ಯಕ್ತಪಡಿಸಿದರು. ಇಡೀ ಸಭೆಯಲ್ಲಿ ಸಿಗಂದೂರು ಪರ ದನಿ ಕೇಳಿಬಂತು. ಇದೇ ಮೊದಲ ಬಾರಿಗೆ ಈಡಿಗ ಯುವ ಸಮುದಾಯ ಅತೀ ಹೆಚ್ಚಿನ ಸಂಖ್ಯೆ ಅಂದರೆ ಸುಮಾರು 400 ಮಂದಿ ಯುವ ಜನತೆ ಭಾಗಿಯಾಗಿದ್ದು, ಈಡಿಗ ಸಂಘಟನೆಯ ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಈಡಿಗ ಹೋರಾಟದ ಸಂಪೂರ್ಣ ವರದಿ nammurexpress.in ನಲ್ಲಿ ವೀಕ್ಷಿಸಿ.