- ಯುವಕರ ಸಂಘಟನೆ ಜೋರು
- ಶಶಾಂಕ್, ಅಶ್ವಲ್, ನಾಗರಾಜ್, ಗಗನ್, ಪ್ರವೀಣ್ ಸಾರಥ್ಯ!
ತೀರ್ಥಹಳ್ಳಿ: ನ.7ರಿಂದ ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ನಾಯಕತ್ವದಲ್ಲಿ ಆಯೋಜಿಸಲಾಗಿರುವ ರೈತ ಕಲ್ಯಾಣ ನಡಿಗೆಗೆ ಯುವ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತೀರ್ಥಹಳ್ಳಿ ತಾಲೂಕಿನ ಪ್ರಮುಖ ಯುವ ನಾಯಕರಾದ ಶಶಾಂಕ್ ಹೆಗ್ಡೆ ಗುಡ್ಡೇಕೇರಿ, ಅಶ್ವಲ್ ಗೌಡ, ಪ್ರವೀಣ್ ಕಟ್ಟೆ, ನಾಗರಾಜ್ ಪೂಜಾರಿ, ಗಗನ್, ಪೂರ್ಣೇಶ್ ಕೊಡಿಗೆಬೈಲ್, ವಿಕ್ಕಿ ಶೆಟ್ಟಿ ಸೇರಿದಂತೆ ನೂರಾರು ಯುವಕರು ಗ್ರಾಮ ಮಟ್ಟದಲ್ಲಿ ಸಾಥ್ ನೀಡುತ್ತಿದ್ದಾರೆ. ಎಲ್ಲಾ ಕಡೆಯಿಂದ ಸಂಘಟನೆ ಮಾಡುತ್ತಿದ್ದಾರೆ.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟ ಪಕ್ಷಾತೀತ, ರೈತರ ಹಾಗೂ ಮಲೆನಾಡಿನ ಜನರ ಪರವಾದ ಹೋರಾಟ. ಹೀಗಾಗಿ ಮುಂದಿನ ರೈತರಾದ ಯುವಕರು ಹೋರಾಟಕ್ಕೆ ಜೊತೆಯಾಗಿದ್ದಾರೆ.
ಯುವ ಮುಖಂಡ ಗುಡ್ಡೆಕೇರಿ ಶಶಾಂಕ್ ಹೆಗಡೆ ಮಾತನಾಡಿ, ಅನ್ನದಾತನ ನಿರ್ಣಾಯಕ ಹೋರಾಟದಲ್ಲಿ ನಮ್ಮ ರೈತರ ಒಗ್ಗಟ್ಟು ತೋರಿಸೋಣ ಎಂದು ರೈತರಲ್ಲಿ ಮನವಿ ಮಾಡಿದ್ದಾರೆ. ಮಲೆನಾಡಿನ ದನಿಯಾಗಿ ಈ ಹೋರಾಟ ರೂಪುಗೊಳ್ಳಲಿದೆ. ಎಲ್ಲರೂ ಪಾಲ್ಗೊಳ್ಳಲು ಹುಂಚದಕಟ್ಟೆ ಪ್ರವೀಣ್ ಮನವಿ ಮಾಡಿದ್ದಾರೆ. ಇನ್ನು ಯುವ ಸಂಘಟಕರಾದ ಅಶ್ವಲ್ ಗೌಡ, ಪೂರ್ಣೇಶ್ ಕೊಡಿಗೆಬೈಲ್, ನಾಗರಾಜ್ ಪೂಜಾರಿ, ವಿಕ್ರಂ ಶೆಟ್ಟಿ, ಗಗನ್ ಸೇರಿದಂತೆ ಅನೇಕ ಯುವ ನಾಯಕರು ಹೋರಾಟಕ್ಕೆ ಧುಮುಕಿದ್ದಾರೆ. ಇಷ್ಟು ದಿನ ಬಿಜೆಪಿಯಲ್ಲಿ ಮಾತ್ರ ಕಾಣುತ್ತಿದ್ದ ಯುವ ಸಂಘಟನೆ ಈಗ ಮಂಜುನಾಥ ಗೌಡರ ಪಾಳಯದಲ್ಲಿ ಹೆಚ್ಚುತ್ತಿರುವುದು ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ.