- ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಾದಯಾತ್ರೆ
- ಪಕ್ಷಾತೀತವಾಗಿ 1000 ಜನರ ಬೆಂಬಲ: ಹಚ್ಚಿತು ಕಿಡಿ..!
ತೀರ್ಥಹಳ್ಳಿ: ಮಲೆನಾಡಿನ ರೈತರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ ನಾಯಕ ಮಂಜುನಾಥ ಗೌಡ ನಾಯಕತ್ವದಲ್ಲಿ ಮಲೆನಾಡಿನ ಹೃದಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಬಿದರಗೋಡಿನಿಂದ ಪಾದಯಾತ್ರೆ ಶುರುವಾಗಿದೆ.
ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಸಾವಿರಾರು ಹಳ್ಳಿಗಳ ರೈತರು ತಮ್ಮ ಮನೆ ಮಠ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ನೇತೃತ್ವದಲ್ಲಿ 3 ದಿನಗಳ 42 ಕಿಮೀ ಪಾದಯಾತ್ರೆ ಮೊದಲ ದಿನ ಬಿದರಗೋಡಿನಿಂದ ಕುಂದಾದ್ರಿ-ಕೆಂದಾಳಬೈಲ್-ಗುಡ್ಡೇಕೇರಿ ಮಾರ್ಗವಾಗಿ ನಾಲೂರು ತಲುಪಿದೆ. ಬಿದರಗೋಡಿನ ಶ್ರೀರಾಮ ಮಂದಿರದಲ್ಲಿ ಪೂಜೆ ಮಾಡಿಸಿ ಬಳಿಕ ಸಭೆ ನಡೆಸಲಾಯಿತು.
ರಾಜ್ಯ ನಾಯಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಸಹಕಾರಿ ನಾಯಕರಾದ ವಿಜಯದೇವ್, ದುಗ್ಗಪ್ಪ ಗೌಡ, ಆನಂದ್, ವಿಧ್ಯಾಧರ, ಪ್ರಶಾಂತ್ ಸಾಗರ ಸೇರಿದಂತೆ ಅನೇಕ ನಾಯಕರು ಆಗಮಿಸಿ ಪಾದಯಾತ್ರೆಗೆ ರಂಗು ತುಂಬಿದರು. ಜೊತೆಗೆ ಕೇಂದ್ರ, ರಾಜ್ಯ ಸರ್ಕಾರಗಳ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರಾದ ಕಲ್ಕುಳಿ ವಿಠಲ ಹೆಗ್ಡೆ, ಶ್ರೀಧರ್ ಕಲ್ಲಹಳ್ಳ, ಕೆ.ಎಲ್.ಅಶೋಕ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತೀರ್ಥಹಳ್ಳಿ ಕಾಂಗ್ರೆಸ್ ನಾಯಕರಾದ ಬಾಳೇಹಳ್ಳಿ ಪ್ರಭಾಕರ್, ಪದ್ಮನಾಭ, ಕೆಳಕೆರೆ ದಿವಾಕರ್, ಹೊಸಹಳ್ಳಿ ಸುಧಾಕರ್, ಕೇಳೂರು ಮಿತ್ರ, ಕಂಪನಕೊಡಿಗೆ ಸುರೇಶ, ಈಚನಬೈಲ್ ಶಶಿಧರ್, ಶಂಕರಮನೆ ಅರುಣ್, ಮಹಾಬಲೇಶ್ ಹಸಿರುಮನೆ ಸೇರಿದಂತೆ ಬಹುತೇಕ ನಾಯಕರು ಪಕ್ಷಾತೀತವಾಗಿ ಭಾಗವಹಿಸಿದ್ದರು.
3 ದಿನಗಳ 42 ಕಿಲೋ ಮೀಟರ್ ಈ ಪಾದಯಾತ್ರೆಯಲ್ಲಿ ಪಕ್ಷ,ಜಾತಿ, ಭೇದ, ಮರೆತು ಮಲೆನಾಡಿನ ರೈತರು ಭಾಗವಹಿಸುತ್ತಿದ್ದಾರೆ. ಸುಮಾರು 1000 ಮಂದಿ ಮೊದಲ ದಿನ ಭಾಗವಹಿಸಿದ್ದಾರೆ.