- ಚಿಕ್ಕಮಗಳೂರು ನಗರದಲ್ಲಿ ನಡೆದ ಘಟನೆ
- ಮದುವೆಗೆ ಹೋಗಿ ಬರುವಾಗ ಚಿನ್ನ ಇಲ್ಲ
ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳ್ಳತನ, ದರೋಡೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಕಾಫಿ ಜಿಲ್ಲೆ ಚಿಕ್ಕಮಗಳೂರು ನಗರದಲ್ಲಿ ಮಗಳ ಮದುವೆ ಮುಗಿಸಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಸುಮಾರು 2 ಕೆ.ಜಿ ಗೂ ಅಧಿಕ ಚಿನ್ನಾಭರಣ ಹಾಗೂ 10 ಕೆ.ಜಿಗೂ ಅಧಿಕ ಬೆಳ್ಳಿ ವಸ್ತುಗಳು ಕಳ್ಳತನವಾಗಿದೆ. ಇದರ ಮೌಲ್ಯ 2.5 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆಯಾಗಿದೆ ಎಂದು ಹೇಳಲಾಗಿದೆ.
ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯ ಸ್ವಣಾರ್ಂಜಲಿ ಜ್ಯುವೆಲರಿ ಶಾಪ್ ಮಾಲೀಕ ಸುರೇಶ್ ಮನೆಯಲ್ಲಿ ಕಳ್ಳವಾಗಿದೆ. ಇವರು ಕರೋನಾ ಕಾರಣದಿಂದ ವ್ಯಾಪಾರದಲ್ಲಿ ನಷ್ಟವಾಗಿ ಅಂಗಡಿಯಲ್ಲಿದ್ದ ಚಿನ್ನವನ್ನು ಮನೆಗೆ ತಂದಿಟ್ಟಿದ್ದರು. ಅಕ್ಟೋಬರ್ 27ರಂದು ಹಾಸನದಲ್ಲಿ ಮಗಳ ಮದುವೆ ಇತ್ತು. ಕುಟುಂಬಸ್ಥರೆಲ್ಲಾ ಮದುವೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನ-ಬೆಳ್ಳಿಯನ್ನು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.
ಮನೆಯ ಹಿಂಭಾಗದ ರಾಜಕಾಲುವೆಯ ಕಡೆಯಿಂದ ಮನೆಯಿಂದ ಮನೆಗೆ ಹತ್ತಿ ರಮೇಶ್ ಅವರ ಬಾಲ್ಕನಿಗೆ ಕಳ್ಳರು ಮನೆಯ ಮೇಲಿನ ಬಾಗಿಲು ಮುರಿದು ಒಳ ಪ್ರವೇಶಿಸಿ ಲಾಕರ್ನಲ್ಲಿದ್ದ ಚಿನ್ನ-ಬೆಳ್ಳಿಯನ್ನು ದೋಚಿದ್ದಾರೆ. ಅಚ್ಚರಿ ಎಂದರೆ ಸುರೇಶ್ ಅಂಗಡಿಯಲ್ಲಿದ್ದ ಚಿನ್ನ ಮನೆಯಲ್ಲಿ ಲಾಕರ್ನಲ್ಲಿಟ್ಟು ಲಾಕರ್ ಕೀಯನ್ನು ಮನೆಯ ಡ್ರಾದಲ್ಲಿ ಇಟ್ಟಿದ್ದರು. ಇದು ಕಳ್ಳರಿಗೆ ಸಹಕಾರಿಯಾಗಿದೆ. ಮನೆ ಮುಂಭಾಗದಲ್ಲಿ ಸಿಸಿಟಿವಿ ಹಾಕಿದ್ದು, ಹಿಂಬಾಗಿಲಿನಿಂದ ಬಂದ ಕಾರಣ ಕಳ್ಳರ ಸುಳಿವು ಸಿಕ್ಕಿಲ್ಲ. ಚಿನ್ನವನ್ನು ಕದ್ದ ಕಳ್ಳರು ಬೆಳ್ಳಿಯ ಸಾಮಾನುಗಳನ್ನು ಹೊತ್ತೊಯ್ಯಲಾಗದೆ ಅಲ್ಲೇ ಬಿಟ್ಟು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಒಂದೂವರೆ ತಿಂಗಳ ಹಿಂದಷ್ಟೆ ಹೊಸ ಮನೆಗೆ ಬಂದಿದ್ದ ಸುರೇಶ್ ಕುಟುಂಬ ಅಂಗಡಿಯಲ್ಲಿದ್ದ ಚಿನ್ನವನ್ನು ಮನೆಯಲ್ಲಿ ಜೋಪಾನ ಮಾಡಿಟ್ಟಿದ್ದರು. ಈ ಘಟನೆ ಇಡೀ ಮಲೆನಾಡಿಗೆ ಆತಂಕ ತಂದಿದೆ. ಪೊಲೀಸರು ಇನ್ನೂ ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ.