- ದಾರಿಯಲ್ಲಿ ಜ್ಯೂಸ್, ಊಟ-ತಿಂಡಿ: ಹಲವೆಡೆ ಸನ್ಮಾನ
- ಮಧು 16 ಕಿಮೀ, ಬೇಳೂರು 18 ಕಿಮೀ ನಡೆದರು!
ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ವಿರುದ್ಧ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ತೀರ್ಥಹಳ್ಳಿಯ ಬಿದರಗೋಡಿನಿಂದ ಆರಂಭವಾದ ಪಾದಯಾತ್ರೆ ಮೊದಲ ದಿನ 22 ಕಿಮೀ ಸಾಗಿದೆ. ಮಂಜುನಾಥ ಗೌಡ ಸೇರಿದಂತೆ ಬಹುತೇಕ ನಾಯಕರು, ಕಾರ್ಯಕರ್ತರು 22 ಕಿ.ಮೀ ನಡೆದಿದ್ದಾರೆ.
ಜೆಡಿಎಸ್ ನಾಯಕ ಮಧು ಬಂಗಾರಪ್ಪ 16, ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ 18 ಕಿಮೀ ನಡೆದಿದ್ದಾರೆ. ಮಂಜುನಾಥ ಗೌಡ 22 ಕಿಮೀ ನಡೆದು ರೆಕಾರ್ಡ್ ಮಾಡಿದ್ದಾರೆ. ದಾರಿಯುದ್ದಕ್ಕೂ ನೀರು, ಮಜ್ಜಿಗೆ, ನೀರು, ತಿಂಡಿ ವ್ಯವಸ್ಥೆಯನ್ನು ಅವರ ಅಭಿಮಾನಿಗಳು ಮಾಡಿದ್ದರು.
ಮಧು ಬಂಗಾರಪ್ಪ ಬಿದರಗೋಡಿನಿಂದ ನಾಬಳದವರೆಗೆ ನಡೆದರು. ಬೇಳೂರು ಗೋಪಾಲಕೃಷ್ಣ ಕೆಂದಾಳಬೈಲ್ವರೆಗೆ ನಡೆದಿದ್ದಾರೆ. ಮಂಜುನಾಥ ಗೌಡ ನಾಲೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಭಾನುವಾರ ನಾಲೂರಿಂದ ಶಿವರಾಜಪುರದವರೆಗೆ ಸುಮಾರು 18 ಕಿಮೀ ಪಾದಯಾತ್ರೆ ಇದೆ. ಬಹುತೇಕ ನಾಯಕರು ಭಾಗಿಯಾಗಲಿದ್ದಾರೆ.
ಮಂಜುನಾಥ ಗೌಡ ಮತ್ತು ಇತರೆ ನಾಯಕರಿಗೆ ದಾರಿಯುದ್ದಕ್ಕೂ ಅಭಿಮಾನಿಗಳು, ನಾಯಕರು ಸನ್ಮಾನ ಮಾಡಿದರು. ಹೊನ್ನೆತಾಳು ಸೊಸೈಟಿ ವತಿಯಿಂದ ಕೂಡ ಸನ್ಮಾನ ಮಾಡಲಾಯಿತು.