- ಅಮಾನತು ಮಾಡಲು ಆದೇಶ
- ನೊಂದ ರೈತನ ಪರ ನಾನಿದ್ದೇನೆ
- ಗಿಡದಲ್ಲಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ!
ತೀರ್ಥಹಳ್ಳಿ: ಬೀಸುವಿನಲ್ಲಿ ನಡೆದ ಘಟನೆ ಖಂಡನೀಯ. ಅಡಿಕೆ ಗಿಡ ಕಡಿಸಿದ ಅಧಿಕಾರಿ ಅಮಾನತು ಮಾಡಲು ಒತ್ತಾಯಿಸಿದ್ದೇನೆ. ಎಲ್ಲಾ ರೈತರ ಪರ ನಾನಿದ್ದೇನೆ. ಈ ಘಟನೆಯಲ್ಲಿ ರಾಜಕೀಯ ಬೇಡ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಘಟನೆ ಖಂಡಿಸಿ ಕಾಂಗ್ರೆಸ್ ನಾಯಕ ಕಿಮ್ಮನೆ ಧರಣಿ ಬಗ್ಗೆ Nammur Express ಜತೆ ಮಾತನಾಡಿದ ಆರಗ ಜ್ಞಾನೇಂದ್ರ, ಈ ಘಟನೆ ಖಂಡನೀಯ. ಅಧಿಕಾರಿ ಅಮಾನತು, ಕಠಿಣ ಕ್ರಮ ತೆಗೆದುಕೊಳ್ಳಲು ಈಗಾಗಲೇ ಅರಣ್ಯ ಸಚಿವ ಆನಂದ್ ಸಿಂಗ್ ಜತೆ ಮಾತುಕತೆ ಮಾಡಿದ್ದೇನೆ. ಸಿಎಂ ಜೊತೆ ನಾಳೆ ಚರ್ಚೆ ನಡೆಸುತ್ತೇನೆ. ಯಾವ ರೈತನಿಗೂ ಹೀಗೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಆಗಲ್ಲ ಅಂತ ಗೊತ್ತಾಗಿ ಈ ನಾಟಕ ಶುರು ಮಾಡಿದೆ. ನಾವು ರೈತರ ಪರ ಇದ್ದೇವೆ ಎಂದು ಹೇಳಿದ್ದಾರೆ.