ರಚನೆಯಾಗದ ಬಗರ್ ಹುಕುಂ ಸಮಿತಿ: ರೈತರಿಗಿಲ್ಲ ನ್ಯಾಯ?
– ರೈತರ ಭೂಮಿ ಆಸೆ ಇನ್ನೂ ಕನಸು!
– ಮಲೆನಾಡಿನಾದ್ಯಂತ ಜನರ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಭಾಗದ ಜ್ವಲಂತ ಸಮಸ್ಯೆಯಾದ ಬಗರ್ ಹುಕುಂ ಕಮಿಟಿಯನ್ನು ಸರ್ಕಾರ ಇನ್ನು ನೇಮಕ ಮಾಡಿಲ್ಲ. ಇದರಿಂದಾಗಿ ಸಾವಿರಾರು ಕುಟುಂಬಗಳ ಭೂಮಿ ಆಸೆ ಇನ್ನು ಕನಸಾಗಿಯೇ ಉಳಿದಿದೆ. ಚುನಾವಣೆಗಳ ಬಗ್ಗೆ ಇರುವ ಆಸಕ್ತಿ ಜನರ ಬದುಕಿನ ಮೇಲೆ ಯಾವುದೇ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಗಳಿಗಿಲ್ಲದಿರುವುದು ಇದೀಗ ಜನಾಕ್ರೋಶಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡ ಇದುವರೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯ ಸರ್ಕಾರ ಕೂಡ ಒಂದಷ್ಟು ವಿಚಾರಗಳಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಬಹುತೇಕ ಭಾಗಗಳ ಜ್ವಲಂತ ಸಮಸ್ಯೆಯಾಗಿರುವ ದಶಕಗಳಿಂದ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಕನಸಾಗಿಯೇ ಉಳಿದಿರುವ ಬಗರ್ ಹುಕುಂ ಯೋಜನೆ ಹಳ್ಳ ಹಿಡಿದಿದೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕು ಸೇರಿದಂತೆ ಯಾವುದೇ ತಾಲೂಕಿನಲ್ಲಿ ಬಗರ್ ಹುಕುಂ ಸಮಿತಿಯನ್ನು ಇನ್ನೂ ರಚನೆ ಮಾಡಿಲ್ಲ.
ಮೂರು ಪಕ್ಷಗಳಿಗೆ ಜನ ಹಿತ ಬೇಕಿಲ್ಲ!
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷವೇ ಕಳೆದಿದೆ, ಇದರಿಂದಾಗಿ ರೈತರಿಗೆ ಸಮಸ್ಯೆಯಾಗುತ್ತದೆ ಜೊತೆಗೆ ಆಶ್ರಯ ಸಮಿತಿಗಳು ಕೂಡ ನೇಮಕವಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಮಲೆನಾಡಿನ ಜನರ ಬದುಕನ್ನು ಹಾಗೂ ಮಲೆನಾಡಿನ ಜನರ ಹಕ್ಕನ್ನು ಗೌರವಿಸದಿರುವುದು ಮಲೆನಾಡಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ರಾಜ್ಯದ್ಯಂತ ಬಗರ್ ಹುಕುಂ ಸಾಗುವಳಿದಾರರು ತಮ್ಮ ಜಮೀನು ಹಕ್ಕನ್ನು ಪಡೆಯಲು ಈಗಾಗಲೇ ಹೋರಾಟವನ್ನು ಮಾಡುತ್ತಿದ್ದಾರೆ. ಚುನಾವಣೆ ಹೊತ್ತಿನಲ್ಲೆ ಈ ಪ್ರಕರಣ ಗಂಭೀರವಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನಿಸಬೇಕಿದೆ.