- ಕಸ್ತೂರಿರಂಗನ್ ವರದಿ ಆತಂಕ ಬೇಡ
- ತೀರ್ಥಹಳ್ಳಿಯಲ್ಲಿ ಕಟೀಲ್ ಮಾತುಕತೆ
ತೀರ್ಥಹಳ್ಳಿ; ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಅವರ ಬಗ್ಗೆ ಪಕ್ಷದಲ್ಲಿ ವಿಶೇಷ ಗೌರವ ಇದೆ. ಬೌಗೋಳಿಕ, ಸಾಮಾಜಿಕ ನ್ಯಾಯದಡಿ ಮುಂದಿನ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಬಿಜೆಪಿ ವತಿಯಿಂದ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿಸಿದ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದರು.
ಬಳಿಕ ಮಯೂರ ಹೋಟೆಲ್ನಲ್ಲಿ ಉಪಾಹಾರ ಸ್ವೀಕರಿಸಿ ಪತ್ರಕರ್ತರ ಜತೆ ಮಾತನಾಡಿ, ಅನಿವಾರ್ಯ ಕಾರಣದಿಂದ ಸರ್ಕಾರ ಬಂದಿದೆ. ಆರಗ ಅವರ ಬಗ್ಗೆ ನಮಗೆ ಗೌರವವಿದೆ. ಬೌಗೋಳಿಕ ನ್ಯಾಯ, ಸಾಮಾಜಿಕದಡಿಯಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಹಿರಿಯರು, ಸಿಎಂ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರ ಬದಲಾವಣೆ ಇಲ್ಲ. ಹಾದಿಬೀದಿಯಲ್ಲಿ ಚರ್ಚೆ ಆದರೆ ಪಕ್ಷದೊಳಗೆ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ 2 ವರ್ಷ ಮುಂದುವರಿಯುತ್ತಾರೆ ಎಂದು ಕಟೀಲ್ ಹೇಳಿದ್ದಾರೆ.
ಕಸ್ತೂರಿ ರಂಗನ್ ವರದಿ ಬಗ್ಗೆ ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಸರ್ಕಾರದ ನಿದ್ರೆ ಇದಕ್ಕೆ ಕಾರಣ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.