ಪ್ರವಾಸಿ ತಾಣ ದೇಗುಲಗಳಲ್ಲಿ ಜನವೋ ಜನ!
– ಶೃಂಗೇರಿ, ಹೊರನಾಡು, ಸಿಗಂದೂರಿನಲ್ಲಿ ಭಕ್ತ ಸಾಗರ
– ಪ್ರತಿ ತಾಲೂಕಿನಲ್ಲೂ ದಸರಾ ಹಬ್ಬ ಸಂಭ್ರಮದಿಂದ ಆಚರಣೆ
NAMMUR EXPRESS NEWS
ಮಲೆನಾಡ/ ಕರಾವಳಿ : ರಾಜ್ಯದಲ್ಲಿ ಆಯುಧ ಪೂಜೆ,ದಸರಾ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಮೈಸೂರು ದಸರಾ ಸೇರಿದಂತೆ ನಾಡಿನೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮನೆ ಮನೆಗಳಲ್ಲಿ ದಸರಾ ಹಬ್ಬದ ಸಂಭ್ರಮ ಕಂಡು ಬಂದಿದೆ. ವಿಜಯದಶಮಿ ಹಾಗೂ ಆಯುಧ ಪೂಜೆ ಅಂಗವಾಗಿ ಪ್ರತಿ ಅಂಗಡಿ ಉದ್ಯಮಗಳಲ್ಲೂ ಪೂಜೆ ಮಾಡಲಾಗುತ್ತಿದೆ. ಇನ್ನು ವಿಶೇಷವೇನೆಂದರೆ ಪ್ರಮುಖ ದೇವಸ್ಥಾನಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಶೃಂಗೇರಿ, ಹೊರನಾಡು, ಸಾಗರ, ಮಂದಾರ್ತಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಸಿಗಂದೂರು, ಮೈಸೂರು ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಭಕ್ತರ ಸಾಲು ಸಾಲು ಕಂಡುಬರುತ್ತಿದೆ. ಸತತವಾಗಿ ರಜೆ ಇರುವುದರಿಂದ ಮನೆ ಮಕ್ಕಳು ಸೇರಿ ಹಬ್ಬವನ್ನು ಆಚರಣೆ ಮಾಡುವುದರ ಜೊತೆಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
ಜೊತೆಗೆ ಧಾರ್ಮಿಕ ತಾಣಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ. ಇನ್ನು ವಿಶೇಷ ಪೂಜೆಗಳನ್ನು ನೆರವೇರಿಸುವುದರ ಮೂಲಕ ದಸರಾ ಹಬ್ಬವನ್ನು ಧಾರ್ಮಿಕವಾಗಿ ಆಚರಣೆ ಮಾಡಲಾಗುತ್ತಿದೆ. ಇನ್ನು ದಸರಾದ ಅಂಗವಾಗಿ ಒಳ್ಳೆಯ ಕೆಲಸಗಳನ್ನು ಮಾಡಲು ಪಣತೊಟ್ಟಂತಹ ಅನೇಕರು ಹೊಸ ಉದ್ಯಮಗಳನ್ನು ಶುರು ಮಾಡಿದ್ದಾರೆ. ಹೀಗಾಗಿ ದೇವಸ್ಥಾನಗಳಿಗೆ ಪೂಜೆ ಮಾಡಿ ನಂತರ ಕಾರ್ಯಗಳನ್ನು ಮಾಡುವುದರಿಂದ ದೇವಸ್ಥಾನಗಳಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಜನಸಂಖ್ಯೆ ಹೆಚ್ಚಾಗಿದೆ.