ವಿವಾದಗಳತ್ತ ನಾಕಾಣಿ ಕಂದಾಯ..!
– ನೂರಾರು ಎಕರೆ ಅರಣ್ಯ ನಾಶ: ಸರ್ಕಾರದ ಗಮನಕ್ಕೆ
– ಬಡವರ ಬದುಕಿಗೆ ಕುತ್ತು ತರುತ್ತಿರುವ ಭೂ ಮಾಲೀಕರು?
– ಸಾವಿರಾರು ಎಕರೆ ಅರಣ್ಯ ನಾಶ, ದಲಿತರು, ಹಿಂದುಳಿದವರಿಗೆ ಅನ್ಯಾಯ!
NAMMUR EXPRESS NEWS
ಮಲೆನಾಡು /ಕರಾವಳಿ: ಕಳೆದ ಹಲವು ದಶಕಗಳ ಹಿಂದೆ ಜಾರಿಗೆಯಲ್ಲಿದ್ದ ನಾಕಾಣಿ ಕಂದಾಯ ಇದೀಗ ಅರಣ್ಯ ಮತ್ತು ಪರಿಸರ ನಾಶಕ್ಕೆ ನಾಂದಿ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ಮಲೆನಾಡು ಸೇರಿದಂತೆ ಕರಾವಳಿ ಹಾಗೂ ರಾಜ್ಯದ ವಿವಿಧಡೆ ಅನೇಕ ಭೂ ಮಾಲೀಕರು ಕಳೆದ ದಶಕಗಳ ಹಿಂದೆ ಒಂದಷ್ಟು ಕಾಡು ಹಾಗೂ ಅರಣ್ಯ ಪ್ರದೇಶವನ್ನು ನಾಕಾಣಿ ಕಂದಾಯದಲ್ಲಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಆದರೆ ಇದೀಗ ಆ ಕಾನೂನು ಇದೀಗ ಪ್ರಾಮಾಣಿಕೃತವಾಗಿಲ್ಲ ಆದರೆ ಅದೇ ದಾಖಲೆಗಳನ್ನು ಇಟ್ಟುಕೊಂಡು ತಾಲೂಕು ಕಚೇರಿಗಳಲ್ಲಿ ಲಂಚ ಕೊಡುವ ಮೂಲಕ ದಾಖಲೆಗಳನ್ನು ತಿದ್ದಿ ತಮಗೆ ಬೇಕಾದಂತೆ ಮಾಡಿಕೊಳ್ಳುವ ಮೂಲಕ ಅನೇಕ ಕಡೆ ಭಾರೀ ಅರಣ್ಯ ನಾಶಕ್ಕೆ ಕಾರಣವಾಗಿದೆ. ನೂರಾರು ಎಕರೆ ಜಮೀನು ಈಗ ಉಳ್ಳವರ ಪಾಲಾಗುವ ಭೀತಿ ಇದೆ.
ಜೊತೆಗೆ ನೂರಾರು ವರ್ಷಗಳಿಂದ ಮನೆ, ಜಮೀನು, ಹಿಡುವಳಿ ಮಾಡಿಕೊಂಡ ದುರ್ಬಲರು, ಬಡವರು, ದಲಿತರ ಬದುಕು ಇದೀಗ ಬೀದಿಗೆ ಬೀಳಲಿದೆ. ಇನ್ನೊಂದು ಕಡೆ ಅಕ್ರಮವಾಗಿ ಅದನ್ನು ಕೆಲವು ರಿಯಲ್ ಎಸ್ಟೇಟ್ ಮಾಫಿಯಾ ಮೂಲಕ ದೊಡ್ಡ ದಂಧೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಇದರಿಂದ ಅರಣ್ಯ ನಾಶವಾಗುವ ಜೊತೆಗೆ ಬಡವರ ಮೇಲೆ ಗದಾ ಪ್ರವಾಹ ಆಗುವ ಸಾಧ್ಯತೆ ಇದೆ. ಸರ್ಕಾರ ಹೀಗಾಗಿ ತಕ್ಷಣ ಇಂತಹ ಅಕ್ರಮ ದಾಖಲೆ ಮಾಡುವ ಜಾಲ ಹಿಡಿದು ನಾಕಾಣಿ ಕಂದಾಯ ಭೂಮಿ ದಾಖಲಾತಿ ತಡೆಹಿಡಿಯಬೇಕು. ಈಗಿರುವ ಹಕ್ಕುದಾರರಿಗೆ ಹಕ್ಕು ಕೊಡಿಸುವ ಜೊತೆಗೆ ಲಕ್ಷ ಲಕ್ಷ ಎಕರೆ ಅರಣ್ಯ ನಾಶ ಆಗುವ ಬಗ್ಗೆ ಅರಣ್ಯ ಇಲಾಖೆ ಗಮನಿಸಬೇಕು ಎಂಬ ಒತ್ತಡ ಪರಿಸರ ಪ್ರೇಮಿಗಳಿಂದ ವ್ಯಕ್ತವಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯಲ್ಲೇ ಹೆಚ್ಚು!
ನಾಕಾಣಿ ಕಂದಾಯ ಕಟ್ಟಿರುವ ಭೂಮಿ ಗೋಮಾಳ ತರಹದ ವ್ಯಾಪ್ತಿಗೆ ಬರುತ್ತದೆ. ಇದೀಗ ಆ ಕಾನೂನು ಜಾರಿಯಲ್ಲಿಲ್ಲ. ಆದರೆ ಶಿವಮೊಗ್ಗ, ಚಿಕ್ಕ ಮಗಳೂರು, ಕರಾವಳಿ ಜಿಲ್ಲೆಯಲ್ಲಿ ಇಂತಹ ಸಾವಿರಾರು ಎಕರೆ ಭೂಮಿ ಕೊಳ್ಳೆ ಹೊಡೆಯಲು ಕೆಲವರು ಪ್ಲಾನ್ ಮಾಡಿಕೊಂಡಿದ್ದಾರೆ. ದಲಿತ ಪರ, ಜನಪರ, ಪರಿಸರ ಪ್ರೇಮಿಗಳು ಗಮನ ವಹಿಸದಿದ್ದರೆ ದೊಡ್ಡ ಅನಾಹುತ ಕಟ್ಟಿಟ್ಟ ಬುತ್ತಿ. ಉಳ್ಳವರ ಹಣದ ದಾಹಕ್ಕೆ ಬಡವರು, ದಲಿತರ ತುತ್ತು ಊಟ ಕೈ ತಪ್ಪಲಿದೆ.