- ರಾಜಕೀಯ ಪ್ರೇರಿತ ಕೃತ್ಯ ಕಿಮ್ಮನೆ ಆರೋಪ
- ಅರಣ್ಯ ಇಲಾಖೆ ಎದುರು ಕಿಮ್ಮನೆ ರಾತ್ರಿ ಧರಣಿ
- ಮಲೆನಾಡಿನಲ್ಲಿ ಮಿಂಚಿನ ಸಂಚಲನ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಸು ಗ್ರಾಮದಲ್ಲಿ ರೈತ ರಂಜನ್ ಎಂಬುವರ 2000 ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಅರಣ್ಯ ಇಲಾಖೆ ಎದುರು ರಾತ್ರಿ ಧರಣಿ ಆರಂಭಿಸಿದ್ದಾರೆ.
ಬೀಸು ಗ್ರಾಮದಿಂದ ಸುಪ್ರಿತಾ ರಂಜನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಬಿಜೆಪಿ ನಾಮಪತ್ರ ವಾಪಾಸ್ ತೆಗೆಯುವಂತೆ ದಬ್ಬಾಳಿಕೆ ಮಾಡಿತ್ತು. ಇದಾಗದ ಕಾರಣ ಈಗ ಶಾಸಕರ ಒತ್ತಡಕ್ಕೆ ಮಣಿದು ಅರಣ್ಯ ಅಧಿಕಾರಿಗಳು 2000 ಅಡಿಕೆ ಗಿಡ ಕಡಿದಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ. ಜೊತೆಗೆ ರೈತರಿಗೆ ನ್ಯಾಯ ಸಿಗುವವರೆಗೆ ರಾತ್ರಿ ಇಡೀ ಧರಣಿ ಮಾಡುವುದಾಗಿ ಕಿಮ್ಮನೆ ರತ್ನಾಕರ್ nammur express ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಗರ್ ಹುಕುಂ ಜಾಗದಲ್ಲಿ ಸಾಗುವಳಿ ಮಾಡಿದ್ದ ರೈತನ ತೋಟ ಕಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜೊತೆಗೆ ನ್ಯಾಯ ಕೊಡಬೇಕು. ಬಿಜೆಪಿ ನಾಯಕರು ಎಲ್ಲಾ ಕಡೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಘಟನೆ ಮಲೆನಾಡಿನ ರೈತರ ಕೆರಳಿಸಿದೆ ಎಂದು ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಮಹಿಳೆ
ಅಡಿಕೆ 1000
ಒತ್ತುವರಿ
ಅರಣ್ಯ ಇಲಾಖೆ ಬೀಸು
ಕಂಪ್ಲೇಂಟ್
ಕೋರ್ಟ್ ನಡೀತಾ ಇದೆ
ಅಡಿಕೆ ಸಸಿ, ಬೇಲಿ ತೆಗೆದು ಹಾಕಿದ್ದಾರೆ.
ಕಿಮ್ಮನೆ ರತ್ನಾಕರ್ ಭೇಟಿ ನೀಡಿ, ಇದೀಗ ಹೋರಾಟ ನಡೆಯುತ್ತಿದೆ.
ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರ ಅಧಿಕಾರ ಬಳಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪಕ್ಷಪಾತದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಅಧಿಕಾರಿ ಇದೀಗ ರಕ್ಷಣೆಗಾಗಿ ಠಾಣೆ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಕೋರ್ಟ್ ಆದೇಶ ಇಲ್ಲದೆ ತೋಟ ಕಡಿದ ಘಟನೆ ಮಲೆನಾಡಿನಲ್ಲಿ ಭಾರೀ ಕೋಲಾಹಲ ಸೃಷ್ಟಿ ಮಾಡಿದೆ.