ನಾಲ್ಕು ಕಾಲಿನ ಕೋಳಿ ಮರಿ..!!?
– ಕುತೂಹಲ ಮೂಡಿಸಿದ ಕೋಳಿ ಮರಿ
– ವಿಸ್ಮಯ ಕೋಳಿ ಮರಿ ನೋಡಲು ಸ್ಥಳೀಯರ ಆಗಮ
NAMMUR EXPRESS NEWS
ಎನ್ ಆರ್ ಪುರ: ಎರಡು ಕಾಲಿನ ಕೋಳಿ ಎಲ್ಲೆಡೆ ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ಕೋಳಿ ಮರಿಯೊಂದು ಎಲ್ಲರ ಗಮನ ಸೆಳೆದಿದೆ. ಹೌದು.. ಎನ್ ಆರ್ ಪುರ ತಾಲೂಕಿನ ಸಿಂಸೆಯ ಗಣೇಶ್ ಎಂಬುವರ ಮನೆಯಲ್ಲಿ ಒಂದುವಾರದ ಹಿಂದೆ ಕೋಳಿಯೊಂದು ಮೊಟ್ಟೆ ಇಟ್ಟು ಕಾವು ನೀಡಿದೆ. ಮೊಟ್ಟೆಯಿಂದ ಹೊರ ಬಂದ ಮರಿ ಅಪರೂಪವಾಗಿದ್ದು ನಾಲ್ಕು ಕಾಲುಗಳನ್ನು ಹೊಂದಿದೆ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದು,ಈ ವಿಶೇಷ ವಿಸ್ಮಯದ ಕೋಳಿಮರಿಯನ್ನು ನೋಡಲು ಸ್ಥಳೀಯರು ಗಣೇಶ್ರವರ ಮನೆಗೆ ಭೇಟಿ ನೀಡುತ್ತಿದ್ದಾರೆ.