ಅಯ್ಯೋ ಜ್ವರ, ಶೀತ, ತಲೆನೋವು!
– ಮಲೆನಾಡು, ಕರಾವಳಿಯಲ್ಲಿ ಅರೋಗ್ಯ ಏರುಪೇರು
– ಹವಾಮಾನದ ತೊಂದರೆ: ಆಸ್ಪತ್ರೆಯಲ್ಲಿ ಜನವೋ ಜನ – ಡೆಂಘಿ ಇತರೆ ರೋಗಗಳಿಂದ ಜನ ಹೈರಾಣ!
NAMMUR EXPRESS NEWS : ಶಿವಮೊಗ್ಗ/ಮಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹವಾಮಾನ ಬದಲಾದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರತಿ ಊರಲ್ಲೂ ಜನ ಶೀತ, ನೆಗಡಿ, ಜ್ವರದಿಂದ ಬಳಲುತ್ತಿದ್ದಾರೆ. ಇದೊಂದು ವೈರಸ್ ಮಾದರಿ ಕಾಯಲೆ ಆಗಿದ್ದು ಒಬ್ಬರಿಂದ ಒಬ್ಬರಿಗೆ ಅತೀ ವೇಗವಾಗಿ ಹರಡುತ್ತಿದೆ.
ಶೀತ, ನೆಗಡಿ, ಕೆಮ್ಮು,ತಲೆನೋವು, ಕಣ್ಣು ಉರಿ, ವಿಪರೀತ ಸೊಂಟ ನೋವು ಕಾಣಿಸಿಕೊಳ್ಳುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಸೇರಿ ರಾಜ್ಯದ ಎಲ್ಲಾ ಭಾಗದಲ್ಲೂ ಈ ಜ್ವರ ಹೆಚ್ಚಿದೆ. ಸ್ಥಳೀಯ, ತಾಲೂಕು ಆಸ್ಪತ್ರೆಗಳ ಮುಂದೆ ಜನ ಸಾಲು ಸಾಲಾಗಿ ನಿಂತಿರುವುದು ಕಂಡು ಬರುತ್ತಿದೆ.
ಸರ್ಕಾರ, ಅರೋಗ್ಯ ಇಲಾಖೆ, ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಬೇಕು. ಆಯಾ ಕ್ಷೇತ್ರದ ಶಾಸಕರು ತಕ್ಷಣ ಸಭೆ ಕರೆದು ಆರೋಗ್ಯ ಸೇವೆ ಸಮರ್ಪಕವಾಗಿ ಒದಗಿಸಲು ಸೂಚನೆ ನೀಡಬೇಕಿದೆ. ಜ್ವರದ ನಿರ್ಲಕ್ಷದಿಂದ ದೊಡ್ಡ ಅನಾಹುತ ಆಗಬಹುದು ಹಾಗೂ ವೈರಸ್ ಬದಲಾಗಿ ದೊಡ್ಡ ಕಾಯಿಲೆಗೆ ಒಳಗಾಗಬಹುದು. ನಮ್ಮ ಆರೋಗ್ಯ- ನಮ್ಮ ಹೊಣೆ
ಆಸ್ಪತ್ರೆಗಳಿಗೆ ತೆರಳಿ ಪರಿಶೀಲನೆ ಮಾಡಿಕೊಳ್ಳಿ.