ಕೆಸುವಿನ ಎಲೆಗೆ ಈಗ ವಿದೇಶದಲ್ಲೂ ಡಿಮ್ಯಾಂಡ್!
– ಮಲೆನಾಡು ಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ತಿನಿಸು
– ಕೆಸುವಿನ ಎಲೆ, ಗೆಡ್ಡೆಗಳಿಗೆ ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಬೇಡಿಕೆ
– ಆರೋಗ್ಯದ ದೃಷ್ಟಿಯಿಂದ ಎಲ್ಲಾ ಕಡೆಗಳಲ್ಲೂ ಕೂಡ ಪ್ರಸಿದ್ಧಿ
NAMMUR EXPRESS NEWS
ಕೆಸುವಿನ ಎಲೆ ಎಲ್ಲರಿಗೂ ಕೂಡ ಚಿರಪರಿಚಿತ. ಎಲ್ಲಾ ಜನರೂ ಕೂಡ ಹೆಚ್ಚಾಗಿ ಕೆಸುವಿನ ಎಲೆಯ ವಿವಿಧ ಅಡುಗೆ ಮಾಡುತ್ತಲೇ ಇರುತ್ತಾರೆ. ಮಳೆಗಾಲದಲ್ಲಂತೂ ಈ ಎಲೆಯ ಅಡುಗೆ ಹೆಚ್ಚಾಗಿರುತ್ತೆ. ಈ ಎಲೆ ತಿನ್ನೋದರಿಂದ ತುಂಬಾನೆ ಪ್ರಯೋಜನಗಳಿವೆ. ಗ್ರಾಮೀಣ ಭಾಗದಲ್ಲಂತೂ ಕೂಡ ಬೇಸಿಗೆ, ಮಳೆಗಾಲ, ಚಳಿಗಾಲ ಯಾವುದೇ ಋತುವಿರಲಿ ಎಲ್ಲಾ ಸಮಯದಲ್ಲೂ ಕೂಡ ಕೆಸುವಿನ ಎಲೆಯ ಪಲ್ಯವನ್ನು ಮಾಡುತ್ತಾರೆ,ಇದು ತುಂಬಾ ರುಚಿಯಾದದ್ದು ಮತ್ತು ಆರೋಗ್ಯಕ್ಕೂ ತುಂಬಾ ಒಳಿತು.
ಕೆಸುವಿನ ಸೊಪ್ಪಿನ ರುಚಿಯು ಇತರೆ ಸೊಪ್ಪು ಗಳಿಗಿಂತ ತುಂಬಾ ರುಚಿಯಾಗಿರುತ್ತದೆ. ಹಸಿ ಸೊಪ್ಪುನ್ನ ಯಾರೂ ಕೂಡ ಸೇವಿಸುವುದಿಲ್ಲ ಏಕೆಂದರೆ ತಿಂದರೆ ಗಂಟಲು ಕೆರತ ಉಂಟುಗುತ್ತದೆ. ಜೊತೆಗೆ ಇದರಿಂದ ಬರುವ ರಸವು ಕೂಡಾ ಮೈ ಕೆರೆತಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಕೆಸುವಿನ ಗಿಡ ಅಥವಾ ಸೊಪ್ಪನ್ನು ತರುವಾಗ ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದು ಒಳ್ಳೆಯದು. ಕೆಸುವಿನ ಸೊಪ್ಪು , ಅದರ ದಂಟು, ಗಡ್ಡೆ ಮತ್ತು ಕೆಸುವಿನ ಚೀಪು ಹೀಗೆ ಗಿಡದ ಎಲ್ಲ ಭಾಗಗಳೂ ಕೂಡಾ ತಿನ್ನಬಹುದಾದದ್ದೆ. ಏನೇ ಮಾಡುವುದಾದರೂ ಮೊದಲು ಚೆನ್ನಾಗಿ ಬೇಯಿಸಬೇಕು , ಜೊತೆಗೆ ಬೇಯಿಸುವಾಗು ಉಪ್ಪು ಮತ್ತು ಹುಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ಹಾಕಬೇಕು. ಇಲ್ಲವಾದಲ್ಲಿ ಗಂಟಲು ಕೆರೆತ ಉಂಟಾಗುತ್ತದೆ.
ಈ ಕೆಸುವಿನ ಎಲೆಯನ್ನ ಬಳಸಿಕೊಂಡು ಪತ್ರೊಡೆ ಹಾಗೂ ಪಲ್ಯವನ್ನು ಮಾಡುತ್ತಾರೆ. ಇದು ತುಂಬಾ ರುಚಿಯಾಗಿರುತ್ತದೆ ಇದಕ್ಕೆ ಕಡಬು ಅಥವಾ ಅಕ್ಕಿ ರೊಟ್ಟಿ ಇದ್ದರೆ ಅದರ ಮಜಾವೇ ಬೇರೆ ಏಕೆಂದರೆ ಮಲೆನಾಡಿನಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಇದರಿಂದ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ ಎಂದು ಗ್ರಾಮೀಣ ಪ್ರದೇಶದ ಜನರು ಹಾಗೂ ನಗರ ಪ್ರದೇಶದ ಜನರು ಇದನ್ನ ಹೆಚ್ಚಾಗಿ ಸೇವಿಸುತ್ತಾರೆ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ ಪ್ರಯೋಜನ ಮತ್ತು ಪೋಷಕಾಂಶಗಳನ್ನು ಒಳಗೊಂಡಿದೆ. ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಕೆಸುವಿನ ಎಲೆಗಳಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಕಾಯಿಲೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದಲ್ಲದೆ, ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು, ಹೃದ್ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಫೈಬರ್ ಸಹಾಯ ಮಾಡುತ್ತದೆ. ಫೈಬರ್ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲು ಅನುಮತಿಸುವುದಿಲ್ಲ, ಇದು ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಕೆಸುವಿನ ಎಲೆಗಳಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಕೆಸುವಿನ ಎಲೆ ಮತ್ತು ಅದರ ಘಟ್ಟಗಳ ಉಪಯೋಗ ಮಲೆನಾಡಿನ ಭಾಗದಲ್ಲೂ ಹಾಗೂ ಬೇರೆ ಬೇರೆ ಕಡೆಯಲ್ಲೂ ಕೂಡ ಇದರ ಬೇಡಿಕೆ ಎಂಬುದು ಹೆಚ್ಚಾಗಿದೆ.
ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲೂ ಕೂಡ ಸಾಕಷ್ಟು ಜನಪ್ರಿಯತೆ ಹೊಂದಿರುವುದೇ ಕೆಸುವಿನ ಎಲೆ ಎಂದು ಹೇಳಬಹುದು. ಕೆಸುವಿನ ಎಲೆ ಮತ್ತು ಇದರ ಗೆಡ್ಡೆಗಳಿಗೆ ವಿದೇಶದಲ್ಲಿ ಬಹು ಬೇಡಿಕೆ, ಕೊಲ್ಲಿ ರಾಷ್ಟ್ರಗಳಲ್ಲಿ ಇದನ್ನ ಚೀನಾ ದೇಶದಿಂದ ಮತ್ತು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಜಪಾನ್ ದೇಶದಲ್ಲಿ ಕೆಸುವಿನ ಎಲೆ ಮತ್ತು ಗೆಡ್ಡೆಗಳನ್ನ ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯಲಾಗುತ್ತಿದೆ ಏಕೆಂದರೆ ಇದು ಆರೋಗ್ಯದ ವಿಚಾರದಲ್ಲೂ ಕೂಡ ಇದು ತುಂಬಾ ಪ್ರಯೋಜನ ಇದೆ ಆದ್ದರಿಂದ ವಿದೇಶದಲ್ಲಿ ಇರುವಂತ ಜನರು ಕೂಡ ಇದನ್ನ ಸೇವಿಸಲು ಮುಂದಾಗಿದ್ದಾರೆ.