- ಆರಗ ಬಳಿ ಬೀಸುವಿನಿಂದ ತೀರ್ಥಹಳ್ಳಿಗೆ ಡಿ.26ಕ್ಕೆ ಪಾದಯಾತ್ರೆ
- ಅರಣ್ಯ ಅಧಿಕಾರಿಗಳ ನಡೆ ವಿರುದ್ಧ ಹೋರಾಟ
ತೀರ್ಥಹಳ್ಳಿ: ರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆರಗ ಸಮೀಪದಿಂದ ತೀರ್ಥಹಳ್ಳಿಯ ಅರಣ್ಯ ಕಚೇರಿವರೆಗೆ ಡಿ.26ರಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಮೂಲಕ ಮತ್ತೆ ಕಿಮ್ಮನೆ ಪಾದಯಾತ್ರೆ ರಾಜಕೀಯಕ್ಕೆ ಮರಳಿದ್ದಾರೆ.
ಡಿ.26ರ ಶನಿವಾರ ಬೆಳಿಗ್ಗೆ 7:30 ರಿಂದ ಆರಗ ಸಮೀಪ ಬೀಸುವಿನಲ್ಲಿ ಅರಣ್ಯ ಅಧಿಕಾರಿಗಳು ರಂಜಿತ ಎಂಬುವರ ಬಗರುಕುಂ ಸಾಗುವಳಿ ಭೂಮಿಯಲ್ಲಿ 2000 ಅಡಿಕೆ ಗಿಡಗಳನ್ನು ಕಡಿದು ನಾಶ ಮಾಡಿದ ಬಗ್ಗೆ ಸರ್ಕಾರ ಈವರೆಗೆ ಅರಣ್ಯ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ ಆದ್ದರಿಂದ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅರಣ್ಯ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಬೀಸುವಿನ ರೈತ ರಂಜಿತ್ ಮನೆಯಿಂದ ಕಡೆಗದ್ದೆ ಆರಗ ಸಂಕದ ಹೊಳೆ ಮಾರ್ಗವಾಗಿ ತೀರ್ಥಹಳ್ಳಿ ಅರಣ್ಯ ಇಲಾಖೆಯವರಿಗೆ ಪಾದಯಾತ್ರೆ ನಡೆಯಲಿದೆ. ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಆರಗದ ಬೀಸುವಿಗೆ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಮಲೆನಾಡಿನ ರೈತರ ಪರ ಈ ಹೋರಾಟ ಮಾಡುತ್ತಿದ್ದು, ರೈತರು ಮತ್ತು ಜನತೆ ಈ ಪಾದಯಾತ್ರೆಯಲ್ಲಿ ಭಾಗವಹಿಸಬೇಕು. ಜೊತೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಎಲ್ಲಾ ಸಂಘಟನೆಗಳು ಭಾಗವಹಿಸಲು
ಕಿಮ್ಮನೆ ರತ್ನಾಕರ್ ಮನವಿ ಮಾಡಿದ್ದಾರೆ.