- ಮೈಲ್ಯಾಂಗ್ ಮೊಬೈಲ್ ಆಪ್ನಲ್ಲಿ ಪುಸ್ತಕಗಳ ಪಿಡಿಎಫ್ ಲಭ್ಯ
ಬೆಂಗಳೂರು: ರಾಷ್ಟಕವಿ ಕುವೆಂಪು ಜನ್ಮ ದಿನದ ಅಂಗವಾಗಿ ಅವರ 56 ಪುಸ್ತಕಗಳನ್ನು ಇ-ಪುಸ್ತಕಗಳ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್ನಲ್ಲಿ ಮಂಗಳವಾರ ಬಿಡುಗಡೆಗೊಳಿಲಾಯಿತು. ಈ ಮೂಲಕ ಇನ್ನು ಕುವೆಂಪು ಅವರ ಪುಸ್ತಕ ಆನ್ಲೈನ್ನಲ್ಲಿ ಸಿಗಲಿದೆ.
ಕುವೆಂಪು ಅವರು ಪ್ರಕಾಶನದ ಹೊಸ ಸಾಧ್ಯತೆಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ಆಪ್ ಮೂಲಕ ಪ್ರಪಂಚದೆಲ್ಲೆಡೆ ವೊಬೈಲ್ನಲ್ಲೇ ಅವರ ಪುಸ್ತಕಗಳನ್ನು ಓದುವ ದಿನ ನೋಡಿದ್ದರೆ ಕುವೆಂಪು ಬಹಳ ಸಂತೋಷ ಪಡುತ್ತಿದ್ದರು ಎಂದು ಅವರ ಪುತ್ರಿ ತಾರಿಣಿ ಆಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.
ಪ್ರೊ.ಕೆಚಿದಾನಂದ ಗೌಡ ಮಾತನಾಡಿ, ತಂತ್ರಜ್ಞಾನದ ಸಾಧ್ಯತೆಗಳಿಗೆ ತಕ್ಕಂತೆ ನಾವು ಬದಲಾಗಬೇಕು. ಅಂದೊಂದೇ ಭಾಷೆಯನ್ನು ಬೆಳೆಸುವ ದಾರಿ ಕುವೆಂಪು ಅವರ ಪುಸ್ತಕಗಳನ್ನು ಹೊಸಕಾಲದ ಸಾಧ್ಯತೆಗಳೊಂದಿಗೆ ಹೊಸ ಓದುಗರಿಗೆ ತರಲು ಸಾಧ್ಯವಾಗಿರುವುದು ಸಂತಸ ತಂದಿದೆ. ಎಂದರು.