- ಎಲ್ಲೆಡೆ ಶಾಂತಿಯುತ ಮತದಾನ
-113 ಗ್ರಾಮ ಪಂಚಾಯತಿಗಳ ಮತ ಸಮರಕ್ಕೆ ತೆರೆ - ಸ್ನೇಹದ ಜತೆ ಗ್ರಾಮ ಪಂಚಾಯತ್ ಚುನಾವಣೆ!
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ 3 ತಾಲೂಕು ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಸಮರ ತೆರೆ ಕಂಡಿದೆ. 3 ತಾಲೂಕಿನ 113 ಗ್ರಾಮ ಪಂಚಾಯತ್ ಚುನಾವಣೆಯ 3, 284 ಜನರ ಅಭ್ಯರ್ಥಿಗಳ ಭವಿಷ್ಯ ಡಿ.30ರಂದು ಗೊತ್ತಾಗಲಿದೆ.
ಡಿ.22ರಂದು ಬೆಳಗ್ಗೆ 7ರಿಂದ ಆರಂಭಗೊಂಡ ಮೊದಲ ಹಂತದ ಚುನಾವಣೆಯ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ
ಜಿಲ್ಲೆಯಲ್ಲಿ ಶೇ.83ರಷ್ಟು ಮತದಾನವಾಗಿದೆ. 82 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ತೀರ್ಥಹಳ್ಳಿಯಲ್ಲಿ ಶೇ.81.33, ಭದ್ರಾವತಿಯಲ್ಲಿ ಶೇ.82.07 ಹಾಗೂ ಶಿವಮೊಗ್ಗದಲ್ಲಿ ಶೇ.84.91 ರಷ್ಟು ಮತದಾನವಾಗಿದೆ. ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಮತದಾನ ಮಾಡಿದ್ದಾರೆ.
ಬಹುತೇಕ ಎಲ್ಲಾ ಕಡೆ ಶಾಂತಿಯುತ ಮತದಾನವಾಗಿದೆ. ಎಲ್ಲಾ ಅಭ್ಯರ್ಥಿಗಳು ಪರಸ್ಪರ ಸಹಕಾರ, ಸ್ನೇಹದಿಂದ ಚುನಾವಣೆ ಮಾಡಿದ್ದಾರೆ. ಎಲ್ಲಾ ಕಡೆ ಸ್ಯಾನಿಟೈಸರ್ ಮಾಡಲಾಗಿತ್ತು. ಪೊಲೀಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಹಳ್ಳಿಗಳ ಆಡಳಿತದ ಬೆನ್ನೆಲುಬು ಗ್ರಾಮ ಪಂಚಾಯತ್ ಆಡಳಿತಕ್ಕೆ ಕೊನೆಗೂ ಮತದಾನ ನಡೆದಿದೆ.
ಹಿರಿಯರು, ಯುವ ಜನತೆ ಆಸಕ್ತಿಯಿಂದ ಮತದಾನ ಮಾಡಿದ್ದಾರೆ.