ಮತ್ತೆ ಮಲೆನಾಡಲ್ಲಿ ಮಳೆ: ಭಾರೀ ಸಿಡಿಲು, ಗುಡುಗು!
– ಗುಡುಗು, ಸಿಡಿಲಿನ ಜತೆಗೆ ರಾತ್ರಿ ಇಡೀ ಮಳೆ
– ಭಾರೀ ಶೀತ ಗಾಳಿ: ಜನ ಜೀವನ ಅಸ್ತವ್ಯಸ್ತ
– ಹಲವು ತಾಲೂಕಲ್ಲಿ ಶಾಲೆ ಕಾಲೇಜಿಗೆ ರಜೆ ಘೋಷಣೆ
NAMMUR EXPRESS NEWS
ಶಿವಮೊಗ್ಗ /ಚಿಕ್ಕಮಗಳೂರು: ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದ್ದು ಶೀತ, ಗಾಳಿ, ಗುಡುಗು ಸಿಡಿಲು ಜತೆಗೆ ಮಳೆ ಸುರಿಯುತ್ತಿದೆ. ಒಂದೆರಡು ದಿನ ಕಡಿಮೆ ಆಗಿದ್ದ ಮಳೆ ಮತ್ತೆ ರಾತ್ರಿ ಇಡೀ ಸುರಿದಿದೆ. ಬುಧವಾರ ಕೂಡ ಮಳೆ ಹೆಚ್ಚಾಗಿತ್ತು. ಬೆಳ್ಳಂ ಬೆಳಗ್ಗೆಯಿಂದ ಮತ್ತೆ ಗುಡುಗು, ಮಿಂಚು ಹೆಚ್ಚಾಗಿದ್ದು ಶಿವಮೊಗ್ಗ ಜಿಲ್ಲೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ತೀರ್ಥಹಳ್ಳಿ, ಹೊಸನಗರ ಸೇರಿ ಶಿವಮೊಗ್ಗ ಜಿಲ್ಲೆ ಮತ್ತು ಚಿಕ್ಕಮಗಳೂರಲ್ಲಿ ಭಾರೀ ಮಳೆಯಾಗುತ್ತಿದೆ.
ಕಾಫಿ ನಾಡಲ್ಲಿ ಮತ್ತೆ ಮಳೆ ಅಬ್ಬರ: ರಜೆ ಘೋಷಣೆ
ಚಿಕ್ಕಮಗಳೂರು: ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ತುಂಗಾ ನದಿ ಅಪಾಯದತ್ತ ಹರಿವು
ಶೃಂಗೇರಿ, ತೀರ್ಥಹಳ್ಳಿ, ಶಿವಮೊಗ್ಗ ಭಾಗದಲ್ಲಿ ಹರಿಯುವ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಹಳ್ಳ ಕೊಳ್ಳ, ನದಿ ಕೆರೆ ಕೂಡ ಅಪಾಯಕ್ಕೆ ಅಹ್ವಾನ ನೀಡಿದಂತಿವೆ.