- ರಂಜದಕಟ್ಟೆಯಲ್ಲಿ ಮನೆ ನುಗ್ಗಿ ಚಿನ್ನ, ಹಣ ಕದ್ದರು
- ಚಿಲ್ಲರೆ ಕೇಳುವ ನೆಪದಲ್ಲಿ 3000 ರೂ.ಯಾಮಾರಿಸಿದರು!
ನ್ಯೂಸ್ ಡೆಸ್ಕ್: ನಮ್ಮೂರ್ ಎಕ್ಸ್ಪ್ರೆಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೆ ಕಳ್ಳರ ಸದ್ದು ಶುರುವಾಗಿದೆ. ಪಟ್ಟಣಕ್ಕೆ ಸಮೀಪದ ರಂಜದಕಟ್ಟೆಯಲ್ಲಿ ತೀರ್ಥಹಳ್ಳಿ ಪಿಡಬ್ಲ್ಯು ಎಇಇ ಆಗಿದ್ದ ರಾಜೇಶ್ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ. ಸುಮಾರು 40 ಗ್ರಾಂ ಚಿನ್ನ ಮತ್ತು 80,000 ರೂ. ಹಣ ಕಳ್ಳತನ ಮಾಡಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜೇಶ್ ಅವರ ತಂದೆ ಮತ್ತು ತಾಯಿ ಚಿಕ್ಕಮಗಳೂರಿಗೆ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಯಾರೂ ಮನೆಯಲ್ಲಿರದ ವೇಳೆ ಮನೆಗೆ ನುಗ್ಗಿ ಬಾಗಿಲು ಒಡೆದು ಚಿನ್ನ ಮತ್ತು ಹಣ ಲೂಟಿ ಮಾಡಿದ್ದಾರೆ. ಅಕ್ಕಪಕ್ಕದ ಮನೆಯಲ್ಲಿ ಬಾಗಿಲು ಮೀಟಲು ಕಬ್ಬಣದ ಸಲಾಕೆ ತೆಗೆದುಕೊಂಡು ಹೋಗಿದ್ದಾರೆ. ಸ್ಥಳೀಯರ ಮೇಲೆ ಶಂಕೆ ವ್ಯಕ್ತವಾಗಿದ್ದು ಇದೀಗ ಪೆÇೀಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜೇಶ್ ಅವರು ತೀರ್ಥಹಳ್ಳಿಯಲ್ಲಿ ಎಡಬ್ಲ್ಯುಇ ಆಗಿದ್ದು, ಈಗ ಚಿಕ್ಕಮಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಂದೆ ಹಾಗೂ ತಾಯಿ ರಂಜದಕಟ್ಟೆ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಚಿಲ್ಲರೆ ನೆಪದಲ್ಲಿ ಮೆಡಿಕಲ್ಗೆ ವಂಚನೆ: ತೀರ್ಥಹಳ್ಳಿ ಹೃದಯ ಭಾಗ ಗಾಂಧಿ ಚೌಕದಲ್ಲಿರುವ ಮೆಡಿಕಲ್ವೊಂದರಲ್ಲಿ ಚಿಲ್ಲರೆ ಕೇಳುವ ನೆಪದಲ್ಲಿ ಆಗಮಿಸಿದ್ದ ಇಬ್ಬರು ತೆಲಗು, ತಮಿಳು ಭಾಷಿಕರು 3000 ರೂ.ಹಣ ಯಾಮಾರಿಸಿದ ಘಟನೆ ಶುಕ್ರವಾರ ನಡೆದಿದೆ. ಮೆಡಿಕಲ್ನಲ್ಲಿ ಚಿಲ್ಲರೆ ಕೇಳಿದ್ದ ಕಳ್ಳರು 6000 ರೂ.ಯಾಮಾರಿಸಿ ಪರಾರಿಯಾಗಿದ್ದಾರೆ. ಕನ್ನಡ ಬಲ್ಲ ತೆಲುಗು ಮಾತನಾಡುತ್ತಿದ್ದ ಅನಾಮಿಕ ವ್ಯಕ್ತಿಗಳು 2 ಸಾವಿರದ 3 ನೋಟು ಕೊಟ್ಟಿದ್ದಾರೆ. 100 ರೂ.ನೋಟುಗಳನ್ನು ಕೇಳಿದ್ದಾರೆ. ಆದರೆ ಬ್ಯಾಂಕಲ್ಲಿ ಕೇಳಿ ಅಂದಿದ್ದಾರೆ. ಆದರೆ ಕೆಲಸ ಮಾಡುವವರಿಗೆ ಕೊಡಬೇಕು ಎಂದು ಹೇಳಿದಕ್ಕೆ ಮಾನವೀಯತೆ ತೋರಿಸಿದ ಮೆಡಿಕಲ್ ಸಿಬ್ಬಂದಿ ಇದೀಗ ಪೇಚಿಗೆ ಸಿಲುಕಿದ್ದಾರೆ. 12 ನೋಟು 500 ರೂ. ಕೊಟ್ಟ ಬಳಿಕ ಇದು ಬೇಡ 10 ರೂ. ನೋಟು ಬೇಕು ಎಂದಿದ್ದಾರೆ. ಬಳಿಕ ಹಣ ವಾಪಾಸ್ ಕೇಳಿದ್ದಾರೆ. ಅಷ್ಟರಲ್ಲಿ ಹಿಂಬದಿ ಇದ್ದ ಅನಾಮಿಕ 500 ರೂ.ನ 6 ನೋಟು ಪಡೆದು ನಾಪತ್ತೆಯಾಗಿದ್ದಾರೆ. ಅಕ್ಕಪಕ್ಕದ ಅಂಗಡಿಯವರು ಕಳ್ಳರನ್ನು ಫಾಲೋ ಮಾಡಿದರೂ ಅವರು ಕಣ್ತಪ್ಪಿಸಿ ಪರಾರಿಯಾಗಿದ್ದಾರೆ.
ಅಡಿಕೆ ಸೀಸನ್ ಆಗಿರುವುದರಿಂದ ರೈತರು ಎಚ್ಚರಿಕೆ ವಹಿಸಬೇಕಾಗಿದೆ. ಮನೆಯಲ್ಲಿ ಹೆಚ್ಚು ಹಣವನ್ನು ಇಡುವುದು ಸುರಕ್ಷಿತವಲ್ಲ. ಜೊತೆಗೆ ಅಡಿಕೆ ಬಗ್ಗೆ ನಿಗಾ ಇಡುವುದು ಒಳ್ಳೆಯದು ಎನ್ನುವುದು ನಮ್ಮೂರ ಎಕ್ಸ್ಪ್ರೆಸ್ ಕಳಕಳಿ..!
ಜಾತ್ರೆ ಜೋಕೆ: ತೀರ್ಥಹಳ್ಳಿ ಪ್ರಸಿದ್ಧ ಎಳ್ಳಾಮಾವಾಸ್ಯೆ ಜಾತ್ರೆ ನಡೆಯುತ್ತಿದ್ದು, ಈ ವೇಳೆ ಕಳ್ಳರ ಬಗ್ಗೆ ಪೊಲೀಸರು ಜಾಗೃತಿ ವಹಿಸಬೇಕಿದೆ. ನಿಮ್ಮೂರಿನ ಮತ್ತು ರಾಜ್ಯದ ಎಲ್ಲಾ ಸುದ್ದಿಗಳನ್ನು ನಮ್ಮೂರ್ ಎಕ್ಸ್ಪ್ರೆಸ್ ಫೇಸ್ಬುಕ್ ಮತತು ಯೂಟ್ಯೂಬ್ನಲ್ಲಿ ಪಡೆಯಿರಿ.