- ಕಿತ್ತಂದೂರಲ್ಲಿ ನೆಲೆಸಿರುವ ದೇವತೆ
- 150 ವರ್ಷದ ಹಿಂದೆ ಘಟ್ಟದ ಕೆಳಗಿಂದ ಬಂತು
- ಭಕ್ತರ ಸಮ್ಮುಖದಲ್ಲಿ ದೀಪೋತ್ಸವ..!
ತೀರ್ಥಹಳ್ಳಿ: ಕೋಣಂದೂರು ಸಮೀಪದ ಕಿತ್ತಂದೂರಿನ ಶ್ರೀ ರಕ್ತೇಶ್ವರಿ ಬನದಲ್ಲಿ ಕಾರ್ತಿಕ ದೀಪೋತ್ಸವ ಭಕ್ತರ ಸಮ್ಮುಖದಲ್ಲಿ ನಡೆಯಿತು. ಸುಮಾರು 150 ವರ್ಷದ ಹಿಂದೆ ಘಟ್ಟದ ಕೆಳಗಿನಿಂದ ಬಂದು ನೆಲೆ ನಿಂತಿರುವ ದೇವರ ಬನದಲ್ಲಿ ಭಕ್ತರ ಕೋರಿಕೆ ನೆರವೇರಿಸುವ ದೇವತೆಗೆ ವಿಶೇಷ ಪೂಜೆ ನಡೆಸಲಾಯಿತು. ಇನ್ನು ಕಿತ್ತಂದೂರು ರಾಮಕೃಷ್ಣ ಭಟ್ ಅವರ ತಂದೆ ತಿಪ್ಪಾ ಭಟ್ ಈ ದೇವತೆ ಪ್ರತಿಷ್ಠಾಪನೆ ಮಾಡಿದ್ದು, ಇದೀಗ ಈ ದೇವತೆ ಗ್ರಾಮದ ಜನರ ಕಾಯುವ ದೇವತೆಯಾಗಿದ್ದಾಳೆ. ಕಾಡಿನಲ್ಲಿ ನೆಲೆಸಿರುವ ಕಾರಣಕ್ಕೆ ವನದುರ್ಗಿ ಎಂದೂ ಕರೆಯಲಾಗುತ್ತದೆ. ಸುಮಾರು 100 ಕ್ಕೂ ಹೆಚ್ಚು ಕುಟುಂಬಗಳು ಈ ದೇವರ ಭಕ್ತರಾಗಿದ್ದಾರೆ.
2016-17ರಲ್ಲಿ ದೇವತೆಯ ಹೆಸರಿನಲ್ಲೇ ಉದ್ಯಮ ಸ್ಥಾಪನೆ ಮಾಡಿರುವ ಹುಲ್ಲತ್ತಿ ಪ್ರಗತೀಪರ ರೈತ, ಶ್ರೀ ರಕ್ತೇಶ್ವರಿ ಫುಡ್ ಅಂಡ್ ಬೇವರೀಸ್ ಮಾಲಿಕ ಯಜ್ನನಾರಾಯಣ್ ಭಟ್ ಕೆ.ಎಸ್ ಅವರ ನೇತೃತ್ವದಲ್ಲಿ ಎಲ್ಲಾ ಭಕ್ತರ ಸಮ್ಮುಖದಲ್ಲಿ ದೇವತೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿತ್ತು.
ಬಳಿಕ ಪ್ರತೀ ವರ್ಷ ದುರ್ಗಾಹೋಮ, ಚಂಡಿಕಾಹೋಮ, ಜೇಷ್ಠ ಮಾಸದಲ್ಲಿ ಪಾರಾಯಣ, ಕಾರ್ತಿಕ ದೀಪೋತ್ಸವ ನಡೆಸಲಾಗುತ್ತದೆ. ಮಂಗಳವಾರ ಸಂಜೆ ದೀಪೋತ್ಸವ ನಡೆಯಿತು. ಇದರ ಸಾರಥ್ಯವನ್ನು ದೇವತೆಯ ಹೆಸರಿನಲ್ಲಿ ಉದ್ಯಮ ಶುರು ಮಾಡಿರುವ ಶ್ರೀ ರಕ್ತೇಶ್ವರಿ ಫುಡ್ ಅಂಡ್ ಬೇವರ್ಜೀಸ್ ಮಾಲಿಕರರಾದ ಯಜ್ನನಾರಾಯಣ ಭಟ್ ವಹಿಸಿದ್ದರು. ದೇವತೆಯ ಹೆಸರಿನ ಈ ಉದ್ಯಮದ “ಗಂಗೋಧಕ” ಪ್ಯಾಕೇಜ್ಡ್ ನೀರು ರಾಜ್ಯದ ಹಲವೆಡೆ ಸರಬರಾಜಾಗುತ್ತಿದೆ. ದೇವಿಯ ಆಶೀರ್ವಾದ ಇದ್ದರೆ ಎಂತಹ ಕಷ್ಟ ಕೂಡ ನಿವಾರಣೆಯಾಗುತ್ತದೆ ಎಂದು ಅವರು ಹೇಳುತ್ತಾರೆ.