ಮಲೆನಾಡು ಮಿತ್ರ ವೃಂದದ ಕ್ರೀಡಾಕೂಟ ಶುರು
– ರಾಜಧಾನಿಯ ಹೆಚ್.ಎಂ.ಟಿ. ಆಟದ ಮೈದಾನದಲ್ಲಿ ಕ್ರೀಡಾಕೂಟ
– ಮಲೆನಾಡಿಗರ ಸಮಾಗಮ: ಉತ್ತಮ ವ್ಯವಸ್ಥೆ
NAMMUR EXPRESS NEWS
ಬೆಂಗಳೂರು: ರಾಜಧಾನಿಯ ಮಲೆನಾಡು ಮೂಲದವರ ಸಂಘಟನೆ ಮಲೆನಾಡು ಮಿತ್ರವೃಂದ 16ನೇ ವರ್ಷದ ಕ್ರೀಡಾಕೂಟ ಸಾವಿರಾರು ಮಲೆನಾಡಿಗರ ಸಮ್ಮುಖದಲ್ಲಿ ನಡೆಯುತ್ತಿದೆ. ರಾಜಧಾನಿಯ ಜಾಲಹಳ್ಳಿ ಎಚ್. ಎಂ. ಟಿ ಮೈದಾನದಲ್ಲಿ ಪಂದ್ಯಾಟ ನಡೆಯುತ್ತಿದೆ. ಹೊಸ ವರ್ಷದ ಮಲೆನಾಡು ಮಿತ್ರವೃಂದದ ಕ್ಯಾಲೆಂಡರ್ ಕೂಡ ನೀಡಲಾಗುತ್ತಿದೆ. ಈಗಾಗಲೇ ಸಾವಿರಾರು ಮಂದಿ ಭಾಗಿಯಾಗಿ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಸಂಭ್ರಮಪಡುತ್ತಿದ್ದಾರೆ. ಮಲೆನಾಡು ಮೂಲದ ಉದ್ಯಮಿಗಳು, ಇಲ್ಲಿ ನೆಲೆಸಿರುವ ಜನತೆ ಪಾಲ್ಗೊಂಡಿದ್ದಾರೆ.