- ಇನ್ನೇನಿದ್ರೂ ಮತದಾನ!
- ಎಲ್ಲೆಡೆ ಬಂದೋಬಸ್ತ್
- ಮತದಾರನೇ ಬಾಸ್..!
ತೀರ್ಥಹಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಮುಕ್ತಾಯವಾಗಿದೆ.
ಚುನಾವಣೆಗೆ ತಾಲ್ಲೂಕು ಆಡಳಿತ ಸರ್ವ ಸಿದ್ದತೆ ನಡೆಸಿದ್ದು, ಮುಂಜಾನೆಯಿಂದಲೇ ಮತದಾನ ಶುರುವಾಗುತ್ತದೆ.
ಅತ್ಯಂತ ಅಚ್ಚುಕಟ್ಟು, ಶಿಸ್ತುಬದ್ದವಾಗಿ ಚುನಾವಣೆ ನಡೆಸಲು ಮತಗಟ್ಟೆಗೆ ತೆರಳಲು ಸಿಬ್ಬಂದಿಗಳಿಗೆ ತಾಲ್ಲೂಕು ಆಡಳಿತ ಸಂಪೂರ್ಣ ಭದ್ರತೆಯ ವ್ಯವಸ್ಥೆಯೊಂದಿಗೆ ಚಾಲನೆ ನೀಡಲಾಯಿತು. ತೀರ್ಥಹಳ್ಳಿ ಪಟ್ಟಣದ ಅನಂತಮೂರ್ತಿ ಪ್ರೌಢಶಾಲೆ ಆವರಣದಲ್ಲಿ ತಹಶೀಲ್ದಾರ್ ಡಾ. ಶ್ರೀಪಾದ, ತಾಪಂ ಇಒ ಡಾ.ಆಶಾಲತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರಪ್ಪ, ಡಿವೈಎಸ್ಪಿ ಡಾ.ಸಂತೋಷ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಪ್ರವೀಣ್, ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ, ಮಾಳೂರು ಸಬ್ ಇನ್ಸ್ಪೆಕ್ಟರ್ ಸುರೇಶ್, ಆಗುಂಬೆ ಸಬ್ ಇನ್ಸ್ಪೆಕ್ಟರ್ ದೇವರಾಜು ಸೇರಿ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಸುಮಾರು 4೦೦ ಪೊಲೀಸ್ ಸಿಬ್ಬಂದಿ, 125 ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಮತಗಟ್ಟೆ ಅಧಿಕಾರಿಗಳು ಸುಮಾರು 850, ಒಟ್ಟು ಅಂದಾಜು 1500 ಸಿಬ್ಬಂದಿಗಳು, 35 ಸರ್ಕಾರಿ ಕೆಎಸ್ ಆರ್ಸಿ ಬಸ್ ಗಳು 25 ಸರ್ಕಾರಿ ವಾಹನಗಳು, ಜೀಪು-ಕಾರುಗಳೊಂದಿಗೆ ಸೂಕ್ತ ಭದ್ರತೆಯೊಂದಿಗೆ ಮತಗಟ್ಟೆಗೆ ತೆರಳುವ ಸಿಬ್ಬಂದಿಗಳನ್ನು ಸಜ್ಜುಗೊಳಿಸಲಾಯಿತು. ಬಳಿಕ ಅವರೆಲ್ಲರೂ ಮತಗಟ್ಟೆಗಳಿಗೆ ತೆರಳಿದರು. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯಲಿದೆ.
ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗೆ ಭದ್ರತೆ ಒದಗಿಸಲಾಗಿದೆ.
ತೀರ್ಥಹಳ್ಳಿ ತಾಲೂಕಲ್ಲಿ 38 ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಕೆಲವೆಡೆ ರಾತ್ರಿ ಕರಾಮತ್ತು ನಡೆಯುತ್ತಿದೆ. ಇನ್ನು ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಮಂಗಳವಾರ ಮತದಾರ ಏನು ಮಾಡುತ್ತಾನೆ ಎಂಬುದು ಕುತೂಹಲ ಮೂಡಿಸಿದೆ.