- ಡಿಜಿಟಲ್ ಕ್ಷೇತ್ರಕ್ಕೆ ಕಾಲಿಟ್ಟ “ನ್ಯಾಷನಲ್ ಸಮೂಹ ಸಂಸ್ಥೆ”
- ಮೊಬೈಲ್ಸ್, ಟೀವಿ ಸೇರಿ ಡಿಜಿಟಲ್ ವಸ್ತುಗಳು ಲಭ್ಯ
ತೀರ್ಥಹಳ್ಳಿ: ತೀರ್ಥಹಳ್ಳಿಗೆ ಇದೀಗ ಹೊಸ ಹೊಸ ಉದ್ಯಮಗಳು ಕಾಲಿಡುತ್ತಿವೆ. ಈ ನಡುವೆ ಹೊಸ ಶೋ ರೂಂಗಳು ಗ್ರಾಹಕರನ್ನು ಸೆಳೆಯುತ್ತಿವೆ. ತೀರ್ಥಹಳ್ಳಿ ಸೇರಿ ರಾಜ್ಯದ ಹೆಸರಾಂತ ಸಂಸ್ಥೆಯಾದ ನ್ಯಾಶಿನಲ್ ಸಮೂಹ ಸಂಸ್ಥೆ ಇದೀಗ ಡಿಜಿಟಲ್ ಕ್ಷೇತ್ರಕ್ಕೂ ಎಂಟ್ರಿಯಾಗಿದೆ.
ನ್ಯಾಷನಲ್ ಸಂಸ್ಥೆ ಈಗಾಗಲೇ ಗುತ್ತಿಗೆ. ಗ್ಯಾಸ್ ಏಜೆನ್ಸಿ, ಸೂಪರ್ ಮಾರ್ಕೆಟ್, ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್, ನ್ಯಾಷನಲ್ ಎಂಟರ್ಪ್ರೈಸಸ್, ರೈನ್ ಲ್ಯಾಂಡ್ ಆಟೋ ಕಾರ್ಪ್ ಪ್ರೈ.ಲಿ ಮೂಲಕ ಉತ್ತಮ ಹೆಸರು ಪಡೆದಿದೆ. ಇದೀಗ ತೀರ್ಥಹಳ್ಳಿಯ ಗಾಂಧಿ ಚೌಕ ಸಮೀಪದಲ್ಲಿ ಎಂಐ ಎಕ್ಸ್ಕ್ಲ್ಯೂಸಿವ್ ಶೋ ರೂಂ ಬುಧವಾರ ಆರಂಭ ಮಾಡಿದೆ. ಆಜಾದ್ ರಸ್ತೆಯ ನ್ಯಾಷಿನಲ್ ಎನ್ಕ್ಲೇವ್ನಲ್ಲಿ ಆರಂಭಗೊಂಡ ಈ ಶೋ ರೂಂನಲ್ಲಿ ಎಲ್ಇಡಿ ಟೀವಿ, ಮೊಬೈಲ್ಸ್, ಲ್ಯಾಪ್ಟಾಪ್, ಮೊಬೈಲ್ ಬಿಡಿಭಾಗಗಳು, ಫ್ಯಾಷನ್ ವಸ್ತುಗಳು, ಸೌಂಡ್ ಸಿಟ್ಟಮ್ಸ್ ಲಭ್ಯವಿದೆ. ಈಗಾಗಲೇ ಎಂಐ ಬ್ರಾಂಡ್ ಇಡೀ ದೇಶದಲ್ಲೇ ಹೆಸರು ಪಡೆದಿದೆ. ಉತ್ತಮ ಗುಣಮಟ್ಟ, ಅತ್ಯುತ್ತಮ ಸೇವೆ, ಸದಾ ಗ್ರಾಹಕರ ಜೊತೆಗಿರುವ ಬ್ರಾಂಡ್ಗಳು ಇದೀಗ ಈ ಸ್ಟೋರ್ನಲ್ಲಿ ಲಭ್ಯವಿದೆ.
ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥರಾದ ಹಾಜಿ ಇಬ್ರಾಹಿಂ ಷರೀಫ್, ಅಬ್ದುಲ್ ರೆಹಮಾನ್, ಅಬ್ದುಲ್ ಕಲಾಂ, ಕಬೀರ್, ಹೈದರ್, ಸುಲೇಮಾನ್, ಶಾಹಿಲ್, ಸಲ್ಮಾನ್, ರಜಾಫ್ ಸೇರಿದಂತೆ ಸಂಸ್ಥೆಯ ಪ್ರಮುಖರು, ಆತ್ಮೀಯರು ಇದ್ದರು. ಸಮಾಜ ಸೇವೆ, ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದ ಮೂಲಕ ರಾಜ್ಯದಲ್ಲೇ ಸಂಸ್ಥೆ ಹೆಸರು ಮಾಡಿದೆ. ಮಲೆನಾಡಿನ ಸರ್ವರನ್ನೂ ಸಂಸ್ಥೆ ಸ್ವಾಗತಿಸಿದೆ. ಬ್ರಾಂಡೆಡ್ ಮೊಬೈಲ್ಸ್, ಎಲ್ಇಡಿ ಟೀವಿ, ಲ್ಯಾಪ್ ಟಾಪ್ ಸೇರಿ ಎಲ್ಲಾ ಎಂಐ ಬ್ರಾಂಡ್ ಉತ್ಪನ್ನಗಳು ಲಭ್ಯವಿದೆ.