- ಮಂಡಗದ್ದೆ -ಕೀಗಡಿ ಬಳಿ ದುರಂತ ಘಟನೆ
- 35 ವರ್ಷದ ವಿವಾಹಿತ ಸಾವು
- ಕರೋನಾದಿಂದ ಊರಿಗೆ ಮರಳಿದ್ದ ಯುವಕ!
ತೀರ್ಥಹಳ್ಳಿ: ಹುಲಿ ಕಡಜಲು ಹುಳ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕು
ಮಂಡಗದ್ದೆ ಸಿಂಗನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕೀಗಡಿ ಜಯರಾಮ ಗೌಡರ ಪುತ್ರ ಅಖಿಲೇಶ್(35) ಹುಲಿ ಕಡಜಲು ಹುಳ(ವಿಷಪೂರಿತ ಜೇನು ಹುಳ) ಕಚ್ಚಿ ಸಾವನ್ನು ಕಂಡಿದ್ದಾರೆ. ಬೆಂಗಳೂರಿನಲ್ಲಿದ್ದ ಅಖಿಲೇಶ್ ಕರೋನಾ ಹಿನ್ನೆಲೆ ಊರಿಗೆ ಮರಳಿದ್ದರು. ಭಾನುವಾರ ಮನೆಯಲ್ಲಿ ಕೊನೆ ತೆಗೆಯುವ ವೇಳೆ ತೋಟಕ್ಕೆ ಹೋಗಿದ್ದಾಗ ಹುಳಗಳು ಹೊಡೆದಿವೆ.ಕೂಡಲೇ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ
ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಂದೆ ಎದುರೇ ಮಗನ ಬಾಯಿಂದ ನೊರೆ ಬಂದು ಸಾವನ್ನು ಕಂಡಿರುವುದು ದುರಂತ.
ಅಖಿಲೇಶ್ ವಿವಾಹಿತರಾಗಿದ್ದು,ಪತ್ನಿ,
2 ತಿಂಗಳ ಪುಟ್ಟ ಮಗು ಇದೆ.
ಕರೋನಾ ಹಿನ್ನೆಲೆ ಊರಿಗೆ ಬಂದಿದ್ದರು ಎಂಬುದಾಗಿ ತಿಳಿದು ಬಂದಿದೆ.
ತೀರ್ಥಹಳ್ಳಿ ತಾಲೂಕಿನ ಮಹಿಷಿ ಮತ್ತು ಬಳಗಟ್ಟೆ ಬಳಿ ಜೇನು ಹುಳಗಳು ಹೊಡೆದು ಸಾವನ್ನಪ್ಪಿದ ಘಟನೆ ನಡೆದಿತ್ತು.