ಪಾಂಡಿಚೇರಿ ವಿವಿಯಲ್ಲಿ ತೀರ್ಥಹಳ್ಳಿ ಕಲಾವಿದನ ತರಬೇತಿ
– ಶೈಲೇಶ್ ತೀರ್ಥಹಳ್ಳಿ ನೇತೃತ್ವದ ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ತರಬೇತಿ
– ರಾಜ್ಯ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಪ್ರಸಿದ್ಧಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ಪಾಂಡಿಚೇರಿ ಯೂನಿವರ್ಸಿಟಿಯಲ್ಲಿ ಯಕ್ಷಗಾನ ತರಬೇತಿ ನಡೆಯಿತು. ಶೈಲೇಶ್ ತೀರ್ಥಹಳ್ಳಿಯವರ ನೇತೃತ್ವದ ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ಪಾಂಡಿಚೇರಿ ಯುನಿವರ್ಸಿಟಿಯ ಎಂ.ಎ ರಂಗಭೂಮಿ ವಿದ್ಯಾರ್ಥಿಗಳಿಗೆ ಒಂದು ವಾರದ ಯಕ್ಷಗಾನ ಹೆಜ್ಜೆ, ವೇಷಭೂಷಣ, ಬಣ್ಣಗಾರಿಕೆಯ ಪರಿಚಯ ಮಾಡಿಕೊಡಲಾಯಿತು. ಅಭ್ಯಾಸಮಾಡಿದ ವಿದ್ಯಾರ್ಥಿಗಳು ಕೊನೆಯದಿನ 30 ನಿಮಿಷಗಳ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನೀಡಿದರು. ಕೆಲವು ವರ್ಷಗಳಿಂದ ಯಕ್ಷಭೂಮಿ(ರಿ) ಸಂಸ್ಥೆಯ ಗುರುಗಳಿಂದ ತೀರ್ಥಹಳ್ಳಿಯ ಆಸಕ್ತರಿಗೆ ಹಾಗೂ ನೀನಾಸಂ ಹೆಗ್ಗೋಡು, ರಂಗಾಯಣ, ಸಾಣೇಹಳ್ಳಿ ರಂಗಶಾಲೆ, ಎನ್ ಎಸ್ ಡಿ ಬೆಂಗಳೂರು, ಲಕ್ನೋ, ಗುಜರಾತ್ ಮುಂತಾದ ಕಡೆಗಳಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದೆ.